ರಸ್ತೆ ಅಪಘಾತ | ಮಾನವೀಯತೆ ಮರೆತ ಜನರು
ನೆಲಮಂಗಲ: ಎರಡು ಬೈಕ್ ಗಳ ಮಧ್ಯೆ ಅಪಘಾತ ಸಂಭವಿಸಿ ಸವಾರನೋರ್ವ ರಕ್ತದ ಮಡುವಿನಲ್ಲಿ ರಸ್ತೆ ಮೇಲೆ ಬಿದ್ದಿದ್ದುರು ಜನರು ಸಹಾಯಕ್ಕೆ ಧಾವಿಸಿದೇ ಮಾನವೀಯತೆ ಮರೆತಿದ್ದಾರೆ.
ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಮಹಿಮಾಪುರ ಗೇಟ್ ಬಳಿಯ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಘಟನೆ ನಡೆದಿದೆ. ಘಟನೆಯಿಂದ ತೀರ್ವ ಗಾಯಗೊಂಡಿದ್ದ ಬೈಕ್ ಸವಾರನ್ನು, ಆಸ್ಪತ್ರೆಗೆ ದಾಖಲಸಿದರು ಚಿಕಿತ್ಸೆ ಫಲಾಕರಿಯಾದೆ ಸಾವನ್ನಪ್ಪಿದ್ದಾನೆ.
ಬೈಕ್ ಸವಾರ ಶಿರಾದ ಕಡಬಗೆರೆ ಮೂಲದವನಾಗಿದ್ದು, ಬೆಂಗಳೂರಿನಿಂದ-ತುಮಕೂರು ಕಡೆಗೆ ಹೋಗುತ್ತಿದ್ದ ಬೈಕ್‍ಗೆ ವಿರುದ್ಧ ದಿಕ್ಕಿನಲ್ಲಿ ಬಂದ ಮತ್ತೊಂದು ಬೈಕ್ ಡಿಕ್ಕಿಯಾಗಿದೆ. ಒಂದು ಬೈಕ್ ಸರ್ವಿಸ್ ರಸ್ತೆಗೆ ಬಿದ್ದರೇ ಮತ್ತೊಂದು ಹೆದ್ದಾರಿಗೆ ಬಿದ್ದಿದೆ. ಹೆದ್ದಾರಿಗೆ ಬಿದ್ದ ಬೈಕ್ ಸವಾರನ ಮೇಲೆ ಹಿಂದೆಯಿಂದ ಬಂದ ಖಾಸಗಿ ಬಸ್ ಹರಿದಿದೆ. ಇದರಿಂದಾಗಿ ವ್ಯಕ್ತಿಯ ಸ್ಥಿತಿ ಚಿಂತಾಜನಕವಾಗಿತ್ತು. ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ.
ರಕ್ತದ ಮಡುವಿನಲ್ಲಿ ಬಿದ್ದ ಬೈಕ್ ಸವಾರನ ನರಳಾಟವು ಸಾರ್ವಜನಿಕರನ್ನು ಮೂಕ ಪ್ರೇಕ್ಷಕರನ್ನಾಗಿಸಿತು. ಆತನ ಸಹಾಯಕ್ಕೆ ಸಾರ್ವಜನಿಕರು ಧಾವಿಸದೆ ಮೂಕ ಪ್ರೇಕ್ಷಕರಂತೆ ನಿಂತಿದ್ದರು. ಸ್ಥಳಕ್ಕೆ ನೆಲಮಂಗಲ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮೃತದೇಹವನ್ನು ನೆಲಮಂಗಲ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಲಾಗಿದೆ. ಮರಣೋತ್ತರ ಪರೀಕ್ಷೆ ನಂತರ ವಾರಸುದಾರರಿಗೆ ಮೃತದೇಹ ಹಸ್ತಾಂತರಿಸಲಿದ್ದಾರೆ.