ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆ ಆಯ್ತು ಮೈಜುಂ ಎನಿಸುವ ಅಪಘಾತದ ದೃಶ್ಯ
ಬೆಳಗಾವಿ: ಬೆಳಗಾವಿ ತಾಲೂಕಿನ ಸುತಗಟ್ಟಿ ಕ್ರಾಸ್ ಬಳಿ ಅಪಘಾತ ಸಂಭವಿಸಿದ್ದು, ಚಾಲಕನ ಸಮಯ ಪ್ರಜ್ಞೆಯಿಂದ ಪ್ರಾಣಾಪಾಯ ಸಂಭವಿಸಿಲ್ಲ.
ಪುನಾ ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬೆಳಗಾವಿಯಿಂದ ವಿಜಯಪುರಗೆ ಹೊರಟ್ಟಿತ್ತು. ಈ ವೇಳೆ ಎಂ80 ಬೈಕ್ ಸವಾರ ಹೆದ್ದಾರಿ ಕ್ರಾಸ್ ಮಾಡಲು ಮುಂದಾಗಿದ್ದಾನೆ. ದಿಢೀರ್ ಆಗಿ ಬೈಕ್ ಸವಾರ ರಸ್ತೆ ಮಧ್ಯೆ ಬಂದಿದ್ದಾನೆ. ಇತನನ್ನು ತಪ್ಪಿಸಲು ಹೋಗಿ ಸರ್ಕಾರಿ ಬಸ್ ಚಾಲಕ ಮುತ್ತಪ್ಪ ರಸ್ತೆ ಮಧ್ಯೆ ನಿಂತಿದ್ದ ಇನ್ನೊಂದು ಬೈಕ್ ಗೆ ಡಿಕ್ಕಿ ಹೊಡೆದಿದ್ದಾನೆ.
ಹಾಗೇ ಎಂ80 ಬೈಕ್ ಸವಾರ ಬಸ್ ಗೆ ಢಿಕ್ಕಿ ಹೊಡೆದಿದ್ದಾನೆ. ಪರಿಣಾಮ ಬೈಕ್ ನಲ್ಲಿದ್ದ ವಸ್ತುಗಳು ಸಿಡಿದು ಬಿದ್ದಿವೆ. ಇನ್ನೂ ಗಂಭೀರ ಗಾಯಗೊಂಡ ಇಬ್ಬರೂ ಬೈಕ ಸವಾರರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಕಾಕತಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.