Accident : ಕಲಬುರಗಿಯಲ್ಲಿ ಗೂಡ್ಸ್ ವಾಹನ ಪಲ್ಟಿ – 22 ಮಕ್ಕಳಿಗೆ ಗಾಯ
ಗೂಡ್ಸ್ ವಾಹನ ಪಲ್ಟಿ – 22 ಮಕ್ಕಳಿಗೆ ಗಾಯ
ಕಲಬುರಗಿ ಮಡಕಿ ತಾಂಡಾದ ಬಳಿ ಘಟನೆ
ಜಿಮ್ಸ್ , ಎಎಸ್ ಎಮ್ ಆಸ್ಪತ್ರೆಗಳಿಗೆ ದಾಖಲು
ಆಸ್ಪತ್ರೆಗೆ ಶಾಸಕ ಬಸವರಾಜ ಮತ್ತಿಮೂಡ ಭೇಟಿ
ಚಾಲಕನ ನಿಯಂತ್ರಣ ತಪ್ಪಿ ಅನಾಹುತ
ಕಲಬುರಗಿ : ಶಾಲಾ ಮಕ್ಕಳು ಪ್ರಯಾಣಿಸುತ್ತಿದ್ದ ಗೂಡ್ಸ್ ವಾಹನ ಪಲ್ಟಿಯಾಗಿ 22 ಮಕ್ಕಳು ಗಾಯಗೊಂಡ ಘಟನೆ ಕಲಬುರಗಿ ಜಿಲ್ಲೆಯ ಕಮಲಾಪೂರ ತಾಲೂಕಿನ ಮಡಕಿ ತಾಂಡಾ ಬಳಿ ಸಂಭವಿಸಿದೆ.
ಗಾಯಾಳು ಮಕ್ಕಳನ್ನು ಚಿಕಿತ್ಸೆಗೆ ಕಲಬುರಗಿಯ ಜಿಮ್ಸ್, ಬಸವೇಶ್ವರ ಹಾಗೂ ಎಎಸ್ ಎಮ್ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗ್ತಿದೆ.. ಗಾಯಾಳು ಮಕ್ಕಳ ಪೈಕಿ ಮೂವರಿಗೆ ಪ್ರಥಮ ಚಿಕಿತ್ಸೆ ನೀಡಿ ಮನೆಗೆ ಕಳುಹಿಸಲಾಗಿದೆ.. ಉಳಿದವರಿಗೆ ಚಿಕಿತ್ಸೆ ಮುಂದುವರೆದಿದೆ..
ಆಸ್ಪತ್ರೆಗೆ ದೌಡಾಯಿಸಿದ ಶಾಸಕ ಬಸವರಾಜ ಮತ್ತಿಮೂಡ ಮತ್ತು ಜಿಲ್ಲಾ ಪಂಚಾಯತ್ ಸಿಇಓ ಡಾ.ಗಿರೀಶ್ ಡಿ ಬದೋಲೆ ಅವರು ಮಕ್ಕಳ ಅರೋಗ್ಯ ವಿಚಾರಿಸಿದ್ದಾರೆ..
ಮಡಕಿ ತಾಂಡಾದ ನಿವಾಸಿಯಾಗಿರುವ 9ನೇ ಮತ್ತು 10ನೇ ತರಗತಿ ಮಕ್ಕಳು ಶಾಲೆ ಮುಗಿಸಿಕೊಂಡು ಮಹಾಗಾಂವದಿಂದ ತಾಂಡಾಕ್ಕೆ ಹೋಗುವಾಗ ಚಾಲಕನ ನಿಯಂತ್ರಣ ತಪ್ಪಿ ವಾಹನ ರಸ್ತೆಯಿಂದ ಉರುಳಿದೆ.
ಎಲ್ಲಾ ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
Accident in kalaburgi , 22 childrens injured