ಗದಗ: ಇತ್ತೀಚೆಗೆ ಜಿಲ್ಲೆಯ ನರೇಗಲ್ ಪೊಲೀಸ್ (Police) ಠಾಣೆ ಪೇದೆ ಅನುಚಿತವಾಗಿ ವರ್ತಿಸಿದ್ದರು ಎಂದು ಯುವತಿ ಆರೋಪಿಸಿದ್ದ ಪ್ರಕರಣವೊಂದು ಕೇಳಿ ಬಂದಿತ್ತು. ಸದ್ಯ ಈ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ.
ಸದ್ಯ ಪೊಲೀಸ್ ಪೇದೆಯು ಯುವತಿಯ ವಿರುದ್ಧ ಹನಿಟ್ರ್ಯಾಪ್ (Honey trap) ಆರೋಪ ಮಾಡಿದ್ದಾರೆ. ಆರೋಪ ಕೇಳಿ ಬರುತ್ತಿದ್ದಂತೆ ಪೊಲೀಸ್ ಪೇದೆ ಶಂಕರ್ ಅವರನ್ನು ಅಮಾನತು ಮಾಡಲಾಗಿತ್ತು. ಯುವತಿ ಜೊತೆಗೆ ನಾನು ಅನೈತಿಕ ಸಂಬಂಧ ಹೊಂದಿರುವುದು ನಿಜ. ನನಗೆ ಗೊತ್ತಾಗದಂತೆ ಯುವತಿ ಖಾಸಗಿ ವೀಡಿಯೋ ಮಾಡಿಕೊಂಡು ಬ್ಲಾಕ್ಮೇಲ್ ಮಾಡುತ್ತಿದ್ದಾಳೆ. ಆಡಿಯೋ, ಫೋಟೊ ಹಾಗೂ ವೀಡಿಯೋ ಇಟ್ಟುಕೊಂಡು ಹಣಕ್ಕೆ ಬೇಡಿಕೆ ಇಡುತ್ತಿದ್ದಾಳೆ ಎಂದು ಆರೋಪಿಸಿದ್ದಾರೆ.
ಯುವತಿಯ ಹಿಂದೆ ದೊಡ್ಡ ಜಾಲವೇ ಇದೆ. ಈ ಕುರಿತು ಸೂಕ್ತ ತನಿಖೆ ನಡೆಸಿ ನ್ಯಾಯ ಒದಗಿಸಬೇಕು ಎಂದು ಪೇದೆ ಎಸ್ಪಿ ಅವರ ಬಳಿ ಮನವಿ ಮಾಡಿದ್ದಾರೆ.