ಮುಂಬಯಿ: ಆರೋಪಿಯೊಬ್ಬ ಕೊಲೆ ಮಾಡಿ ಬರೋಬ್ಬರಿ 31 ವರ್ಷಗಳ ಬಳಿಕ ಸಿಕ್ಕಿಬಿದ್ದಿರುವ ಘಟನೆಯೊಂದು ನಡೆದಿದೆ.
ಜಾಮೀನು ಪಡೆದು ತಲೆಮರೆಸಿಕೊಂಡಿದ್ದ ವ್ಯಕ್ತಿಯನ್ನು ಸದ್ಯ ಪೊಲೀಸರು 31 ವರ್ಷಗಳ ಬಳಿಕ ಬಂಧಿಸಿದ್ದಾರೆ. ಆರೋಪಿಯನ್ನು ದೀಪಕ್ ಭಿಸೆ (62) ಎಂದು ಗುರುತಿಸಲಾಗಿದೆ. ಈತನಿಗಾಗಿ ಪೊಲೀಸರು 31 ವರ್ಷಗಳಿಂದ ಹುಡುಕಾಟ ನಡೆಸುತ್ತಿದ್ದರು. ಆರೋಪಿ ಬಗ್ಗೆ ವಿಚಾರಿಸಲು ಆತನ ಊರಿಗೆ ತೆರಳಿದಾಗ ಆತ ಸಾವನ್ನಪ್ಪಿರಬಹುದು ಎಂದು ಸ್ಥಳೀಯರು ಹೇಳಿದ್ದಾರೆ. ಆದರೆ, ಸದ್ಯ ಆರೋಪಿ ಪಾಲ್ಘರ್ ಜಿಲ್ಲೆಯ ನಲಸೋಪಾರಾ ಎಂಬಲ್ಲಿ ಪತ್ತೆಯಾಗಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಹುಟುಕಾಟ ನಡೆಸಿದ್ದ ಪೊಲೀಸರಿಗೆ ಆತನ ಪತ್ನಿಯ ನಂಬರ್ ಮೊದಲು ಸಿಕ್ಕಿದೆ. ಈತ 1989 ರಲ್ಲಿ ರಾಜುಚಿಕ್ಕ ಎಂಬ ವ್ಯಕ್ತಿಯನ್ನು ಕೊಲೆ ಮಾಡಿದ್ದ. ಅಲ್ಲದೇ ಧರ್ಮೇಂದ್ರ ಸರೋಜ್ ಎಂಬುವವರ ಕೊಲೆಗೂ ಸಹ ಯತ್ನಿಸಿದ್ದ ಎಂದು ಪೊಲೀಸರು ಹೇಳಿದ್ದಾರೆ. ಆನಂತರ ಈತ ಬಂಧಿಯಾಗಿದ್ದ. ಆದರೆ, 1992 ರಲ್ಲಿ ಜಾಮೀನು ಪಡೆದಿದ್ದ. ನಂತರ ತಲೆ ಮರೆಸಿಕೊಂಡಿದ್ದ.