ಆಚಾರ್ಯ ಚಿತ್ರದಲ್ಲಿ ಚಿರಂಜೀವಿಗೆ ಸವಾಲ್ ಹಾಕಲಿರುವ ಬೆಂಗಾಳಿ ಖ್ಯಾತ ನಟ
ಹೈದರಾಬಾದ್ : ಮೆಗಾಸ್ಟಾರ್ ಚಿರಂಜೀವಿ ಅಭಿನಯದ ಬಹುನಿರೀಕ್ಷೆಯ ಆಚಾರ್ಯ ಸಿನಿಮಾ ಈಗಾಗಲೇ ಭಾರೀ ನಿರೀಕ್ಷೆ ಹುಟ್ಟುಹಾಕಿದೆ. ಜೊತಗೆ ಸಿನಿಮಾದ ರಿಲೀಸ್ ದಿನಾಂಕ ಕೂಡ ಇತ್ತೀಚೆಗಷ್ಟೇ ಸಿನಿಮಾತಂಡ ರಿವೀಲ್ ಮಾಡಿದೆ. ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದೆ. ಇದೀಗ ಈ ಚಿತ್ರದಲ್ಲಿ ಖ್ಯಾತ ಬಂಗಾಳಿ ನಟ ಚಿರಂಜೀವಿಗೆ ವಿಲ್ಲನ್ ಆಗಿ ಸವಾಲ್ ಹಾಕಲಿದ್ದಾರೆ ಎನ್ನಲಾಗ್ತಿದೆ.
ಧ್ರುವ ಸರ್ಜಾ ಪೊಗರು ಫಸ್ಟ್ ಡೇ ಕಲೆಕ್ಷನ್ ಎಷ್ಟು ಗೊತ್ತಾ..!
ಹೌದು. ಆಚಾರ್ಯ ಚಿತ್ರದಲ್ಲಿ ಬಂಗಾಳಿ ನಟ ಜಿಸ್ಶು ಸೇನಾ ಗುಪ್ತಾ ಅವರು ಖಳನಾಯಕನಾಗಿ ನಟಿಸಲಿದ್ದಾರಂತೆ. ಈಗಾಗಲೇ ಈ ಚಿತ್ರದಲ್ಲಿ ನಸೋನಿ ಸೂದ್ ಹಾಗೂ ರಾಮ್ ಚರಣ್ ನಟಿಸುತ್ತಿದ್ದು, ನೆಗೆಟಿವ್ ಪಾತ್ರಕ್ಕಾಗಿ ನಿರ್ದೇಶಕ ಕೊರಟಾಲ ಶಿವ ಹುಡುಕಾಟ ನಡೆಸುತ್ತಿದ್ದರು. ಇದೀಗ ಬಂಗಾಳಿ ನಟ ಜಿಸ್ಶು ಸೇನಾ ಗುಪ್ತಾ ಅವರನ್ನು ಆಯ್ಕೆ ಮಾಡಲಾಗಿದ್ದು, ಇದಕ್ಕೆ ಅವರು ಕೂಡ ಒಪ್ಪಿಗೆ ನೀಡಿದ್ದಾರೆ ಎನ್ನಲಾಗಿದೆ.