ಧರ್ಮಸ್ಥಳಿ ಬಾಗಿಲು ಓಪನ್ : ಆಚಾರ್ಯ ಟೀಸರ್ ರಿಲೀಸ್
ಮೆಗಾ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದ ಆಚಾರ್ಯ ಸಿನಿಮಾದ ಟೀಸರ್ ರಿಲೀಸ್ ಆಗಿದೆ. ಟೀಸರ್ ರಿಲೀಸ್ ಆಗುತ್ತಿದ್ದಂತೆ ಚಿರುಗೆ ಅಭಿಮಾನಿಗಳು ಮೆಗಾ ವೆಲ್ ಕಮ್ ಕೋರಿದ್ದಾರೆ. ಸದ್ಯ ಆಚಾರ್ಯ ಟೀಸರ್ ಯುಟ್ಯೂಬ್ ನಲ್ಲಿ ಮೆಗಾ ಸುನಾಮಿ ಎಬ್ಬಿಸುತ್ತಿದೆ. ಕೆಲವೇ ಸೆಕೆಂಡುಗಳಲ್ಲಿ ಲಕ್ಷಗಟ್ಟಲೇ ವೀವ್ಸ್ ಪಡೆದುಕೊಳ್ಳುತ್ತಾ ಸಾಗುತ್ತಿದೆ.
ಇನ್ನು ಆಚಾರ್ಯ ಸಿನಿಮಾ ಮೆಗಾಸ್ಟಾರ್ ಚಿರಂಜೀವಿ ಅಭಿನಯದ 152 ನೇ ಚಿತ್ರ. ಕೆಲ ದಿನಗಳ ಹಿಂದಷ್ಟೆ ಜನವರಿ 29 ಸಂಜೆ 04.5ಕ್ಕೆ ಟೀಸರ್ ರಿಲೀಸ್ ಮಾಡೋದಾಗಿ ಚಿತ್ರಯೂನಿಟ್ ಘೋಷಿಸಿತ್ತು. ಅಂದಿನಿಂದ ಅಭಿಮಾನಿಗಳು ಟೀಸರ್ಗಾಗಿ ಕುತೂಹಲದಿಂದ ಕಾಯುತ್ತಿದ್ದರು. ಇದೀಗ ಆ ಕಾಯುವಿಕೆಗೆ ತೆರೆ ಬಿದ್ದಿದ್ದು, ಧರ್ಮಸ್ಥಾಳಿ ಬಾಗಿಲುಗಳು ತೆರೆದುಕೊಂಡಿವೆ.
ಟೀಸರ್ ನಲ್ಲಿ..
‘ಇತರರಿಗಾಗಿ ಬದುಕುವವರು ದೇವರ ಸಮಾನರು.ಅಂತವರ ಜೀವಕ್ಕೆ ಅಪಾಯ ಬಂದ್ರೆ ದೇವರೇ ಬಂದು ಕಾಪಾಡುವ ಅಗತ್ಯವಿಲ್ಲ ‘ಎಂದು ಚೆರ್ರಿ ವಾಯ್ಸ್ ಓವರ್ ನೀಡುವಾಗ ಮೆಗಾಸ್ಟಾರ್ ಎಂಟ್ರಿ ಕೊಡ್ತಾರೆ.
ಜನನಾಯಕ ಜನರಿಂದಲೇ ಹುಟ್ಟುತ್ತಾನೆ ಅನ್ನುವಂತೆ ಮುಷ್ಟಿ ಹಿಡಿದು ಕೆಂಪು ಶಾಲು ಹಾರಿಸುತ್ತಾ ಜನ ಪ್ರವಾಹ ಮಧ್ಯೆ ಅಲೆಯಂತೆ ಮೆಗಾಸ್ಟಾರ್ ಎಂಟ್ರಿ ಕೊಡುತ್ತಾರೆ. ರಾಮ್ ಚರಣ್ ಈ ಹಿಂದೆ ಹೇಳಿದಂತೆ ಟೀಸರ್ ಗೆ ಮೆಗಾ ಪವರ್ ಸ್ಟಾರ್ ವಾಯ್ಸ್ ಕೊಟ್ಟಿದ್ದಾರೆ.ಇನ್ನು ವಿಶ್ಯುವಲ್ ಗಳು.. ಬಿಜಿಎಂ.. ಫ್ರೇಮ್ ಸೆಟ್ಟಿಂಗ್ ಎಲ್ಲವೂ ಮೆಗಾ ರೇಂಜಿನಲ್ಲಿಯೇ ಇವೆ.
ಇನ್ನು ಕೊರಟಾಲ ಶಿವ ನಿರ್ದೇಶನದ ಈ ಚಿತ್ರವನ್ನು ನಿರಂಜನ್ ರೆಡ್ಡಿ ಮತ್ತು ರಾಮ್‍ಚರಣ್ ನಿರ್ಮಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಚಿರಂಜೀವಿ ಪುತ್ರ ರಾಮ್ ಚರಣ್ ಕೂಡ ಅಭಿನಯಿಸುತ್ತಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel