ಬೆಂಗಳೂರು: ಚಿತ್ರದುರ್ಗ (Chitradurga)ದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy Murder Case) ಆರೋಪಿಯಾಗಿರುವ ನಟ ದರ್ಶನ್ (Actor Darshan) ಪತ್ನಿ ವಿಜಯಲಕ್ಷ್ಮಿ (Vijayalakshmi) ಅವರು ಪೊಲೀಸ್ ಠಾಣೆಗೆ ಹಾಜರಾಗಿದ್ದಾರೆ.
ವಿಜಯಲಕ್ಷ್ಮೀ ಅವರು ಎಪಿ ನಗರ ಪೊಲೀಸ್ ಠಾಣೆಗೆ ಹೇಳಿಕೆ ದಾಖಲಿಸುವ ಸಲುವಾಗಿ ಹಾಜರಾಗಿದ್ದಾರೆ ಎನ್ನಲಾಗಿದೆ. ಪ್ರಕರಣದ ಬಗ್ಗೆ ತನಿಖೆ ಹಾಗೂ ಮನೆಯಲ್ಲಿ ಸಿಕ್ಕ ಶೂ ಬಗ್ಗೆ ಮಾಹಿತಿ ಕೊಡಲು ಕಾಮಾಕ್ಷಿಪಾಳ್ಯ ಪೊಲೀಸರು ವಿಜಯಲಕ್ಷ್ಮಿಗೆ ಗೆ ನೋಟಿಸ್ ನೀಡಿದ್ದರು. ಹೀಗಾಗಿ ಪೊಲೀಸರು ನೀಡಿ ತನಿಖೆಗೆ ಬರುವಂತೆ ಸೂಚಿಸಿದ್ದರು. ಪೊಲೀಸರು ನೋಟಿಸ್ ಕೊಟ್ಟ ಹಿನ್ನೆಲೆಯಲ್ಲಿ ಎಪಿ ನಗರ ಪೊಲೀಸ್ ಠಾಣೆಗೆ ತನಿಖೆಗಾಗಿ ವಿಜಯಲಕ್ಷ್ಮಿಹಾಜರಾಗಿದ್ದಾರೆ. ಈ ವೇಳೆ ವಿಚಾರಣೆ ಎದುರಿಸಿದ್ದಾರೆ.
ಮನೆಯಲ್ಲಿ ದರ್ಶನ್ ಶೂ ಸಿಕ್ಕ ವಿಚಾರವಾಗಿ ವಿಜಯಲಕ್ಷ್ಮಿ ಹೇಳಿಕೆ ದಾಖಲಿಸಿ ಅನ್ನಪೂರ್ಣೇಶ್ವರಿ ನಗರ ಠಾಣೆಯಿಂದ ಹೋಗಿದ್ದಾರೆ. ಸುಮಾರು ಐದೂವರೆ ಗಂಟೆಗಳ ಕಾಲ ವಿಜಯಲಕ್ಷ್ಮಿ ಅವರನ್ನು ಪೊಲೀಸರು ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿದ್ದಾರೆ ಎನ್ನಲಾಗಿದೆ. ಇತ್ತೀಚೆಗೆ ಪೊಲೀಸರು ದರ್ಶನ್ ಮನೆಯಲ್ಲಿ ಮಹಜರು ನಡೆಸಿದ್ದರು. ಈ ಸಂದರ್ಭದಲ್ಲಿ ಹತ್ಯೆ ದಿನ ದರ್ಶನ್ ಧರಿಸಿದ್ದ ಬಟ್ಟೆ, ಶೂ ಪೊಲೀಸರು ವಶಕ್ಕೆ ಪಡೆದಿದ್ದರು.