ಕೋವಿಡ್ ಸಂಕಷ್ಟ – ಆಮ್ಲಜನಕ ಖರೀದಿಗಾಗಿ ನೆಚ್ಚಿನ ಬೈಕ್ ಮಾರಾಟಕ್ಕೆ ಮುಂದಾದ ನಟ ಹರ್ಷವರ್ಧನ್
ಹೈದರಾಬಾದ್ : ದೇಶ ಕೊರೊನಾ ಸಂಕಷ್ಟದಲ್ಲಿದೆ. ಎಲ್ಲಿ ನೋಡಿದ್ರೂ ಸಾವು ನೋವಿನ ದೃಷ್ಯಗಳು ಕಂಡುಬರುತ್ತಿವೆ. ಈ ನಡುವೆ ಅನೇಕ ಸೆಲೆಬ್ರಿಟಿಗಳು ಜನಸೇವೆಗೆ ಮುಂದಾಗಿದ್ದಾರೆ. ಈ ಮೂಲಕ ತಾವು ರೀಲ್ ನಲ್ಲಿ ಮಾತ್ರ ಅಲ್ಲ ರಿಯಲ್ ಲೈಫ್ ನ ಹೀ ರೋಗಳು ಅನ್ನೋದನ್ನ ಸಾಬೀತು ಪಡಿಸಿದ್ಧಾರೆ. ಅಂತಹ ತಾರೆಯರ ಲಿಸ್ಟ್ ನಲ್ಲಿ ಟಾಲಿವುಡ್ ಹಾಗೂ ಬಾಲಿವುಡ್ ನಟ ಹರ್ಷವರ್ಧನ್ ರಾನೆ ಕೂಡ ಒಬ್ರು..
ಕೋವಿಡ್ ಸಂಕಷ್ಟದ ಸಮಯದಲ್ಲಿ ಪರೋಪಕಾರಿ ಕೆಲಸಕ್ಕೆ ಕೈ ಹಾಕಿರುವ ರಾನೆ ಅಗತ್ಯ ಇರುವವರಿಗೆ ಉಚಿತವಾಗಿ ಆಕ್ಸಿಜನ್ ಸಾಂಧ್ರಕಗಳನ್ನು ತಲುಪಿಸುವ ಕಾರ್ಯ ಮಾಡುತ್ತಿದ್ದಾರೆ. ಸೂಪರ್ ಡೂಪರ್ ತೆಲುಗು ಸಿನಿಮಾ ‘ಫಿದಾ’ದಲ್ಲಿ ನಟಿಸಿರುವ ಹರ್ಷವರ್ಧನ್, ಕೋವಿಡ್ನಿಂದಾಗಿ ಉಂಟಾಗಿರುವ ಆಮ್ಲಜನಕದ ಕೊರತೆ ನೀಗಿಸಲು ಮುಂದಾಗಿದ್ದಾರೆ. ಅದಕ್ಕಾಗಿ ತನ್ನ ನೆಚ್ಚಿನ ಬೈಕ್ ಕೂಡ ಮಾರಾಟ ಮಾಡಲು ಮುಂದಾಗಿದ್ದಾರೆ.
ಈ ಬಗ್ಗೆ ತಮ್ಮ ಟ್ವಿಟರ್ ನಲ್ಲಿ ಮಾಹಿತಿ ನೀಡಿರುವ ಹರ್ಷವರ್ಧನ್, ಆಕ್ಸಿಜನ್ ಖರೀದಿಗಾಗಿ ಫಂಡ್ ಕಲೆಕ್ಟ್ ಮಾಡಲಾಗುತ್ತಿದೆ. ಈ ಅಭಿಯಾನಕ್ಕಾಗಿ ನನ್ನ ಬೈಕ್ ಸೇಲ್ ಮಾಡುತ್ತಿದ್ದೆನೆ. ಇದರ ಮಾರಾಟದಿಂದ ಬರುವ ಹಣದಲ್ಲಿ ಆಕ್ಸಿಜನ್ ಸಾಂಧ್ರಕಗಳನ್ನು ಖರೀದಿಸಿ, ಅಗತ್ಯ ಇರುವವರಿಗೆ ನೀಡಲಾಗುತ್ತದೆ ಎಂದಿದ್ದಾರೆ.