ಮಂತ್ರಾಲಯ ರಾಘವೇಂದ್ರಸ್ವಾಮಿಗಳ ದರ್ಶನ ಪಡೆದ ಸುದೀಪ್
ನಟ ಕಿಚ್ಚ ಸುದೀಪ್ ಮಂತ್ರಾಲಯಕ್ಕೆ ತೆರಳಿ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ದರ್ಶನ ಮಾಡಿದ್ದಾರೆ. ಮಂತ್ರಾಲಯದಲ್ಲಿ ಗುರುವೈಭವೋತ್ಸವ ಕಾರ್ಯಕ್ರಮ ಜರುಗುತ್ತಿರುವ ಹಿನ್ನೆಲೆಯಲ್ಲಿ ಸುದೀಪ್ ಬೇಟಿ ಕೊಟ್ಟಿದ್ದಾರೆ. ಸುದೀಪ್ ಅವರು ದೇವಸ್ಥಾನಕ್ಕೆ ತೆರಳಿ ರಾಯರ ಬೃಂದಾವನ ದರ್ಶನ ಪಡೆದಿದ್ದಾರೆ.
ರಾಯರ ಮಠದ ಪೀಠಾಧಿಪತಿ ಸುಭುದೇಂದ್ರ ತೀರ್ಥರಿಂದ ಸುದೀಪ್ಗೆ ಅವರಿಗೆ ಶಾಲು ಹೊದಿಸಿ ಸನ್ಮಾನ ಮಾಡಿದ್ದಾರೆ. ಶ್ರೀಮಠದಲ್ಲಿ ರಾಯರ 401ನೇ ಪಟ್ಟಾಭಿಷೇಕ ಹಾಗೂ 427ನೇ ವರ್ಧಂತಿ ಉತ್ಸವದ ಹಿನ್ನೆಲೆ ಸುದೀಪ್ ಅವರಿಗೆ ಅನುಗ್ರಹ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸುದೀಪ್ ಬಂದಿರುವ ವಿಚಾರ ತಿಳಿಯುತ್ತಿದ್ದಂತೆ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ದೇವಸ್ಥಾನದ ಹತ್ತಿರ ಜಮಾಯಿಸಿದರು. ಅಭಿಮಾನಿಗಳು ನಿಯಂತ್ರಿಸೋಕೆ ಪೊಲೀಸರು ಹರಸಾಹಸ ಪಡೆಯಬೇಕಾಯಿತು.
‘ವಿಕ್ರಾಂತ್ ರೋಣ’ ಸಿನಿಮಾ ದ ಬಿಡುಗಡೆಗೆ ಕೊನೆಯ ಹಂತದ ಕೆಲಸದಲ್ಲಿ ಸುದೀಪ್ ಬ್ಯುಸಿ ಆಗಿದ್ದಾರೆ. ಚಿತ್ರ ಇಂಗ್ಲೀಷ್ ಭಾಷೆಯಲ್ಲಿಯೂ ಬಿಡುಗಡೆಯಾಗುತ್ತಿದ್ದು. ಸುದೀಪ್ ಸ್ವತಃ ಇಂಗ್ಲಿಷ್ ವರ್ಷನ್ ಡಬ್ಬಿಂಗ್ ಪೂರ್ಣಗೊಳಿಸಿದ್ದಾರೆ.
Actor Kichcha Sudeep went to the Mantralaya and performed a darshan of Sri Guru Raghavendra Swamy.