ಹಿರಿಯರನ್ನ ಚಿತ್ರಮಂದಿರಗಳಿಗೆ ಕರೆತಂದಿದ್ದ `ರಾಜಕುಮಾರ’

1 min read
Puneet Raj kumar

ಹಿರಿಯರನ್ನ ಚಿತ್ರಮಂದಿರಗಳಿಗೆ ಕರೆತಂದಿದ್ದ `ರಾಜಕುಮಾರ’

ಕನ್ನಡ ಚಿತ್ರರಂಗದ ಅರಸು ನಟ ಪುನೀತ್ ರಾಜ್ ಕುಮಾರ್ ಇಂದು ವಿಧಿವಶರಾಗಿದ್ದಾರೆ. ಅಪ್ಪು ನಿಧನದಿಂದಾಗಿ ಇಡೀ ಕರ್ನಾಟಕ ಮೌನಕ್ಕೆ ಶರಣಾಗಿದೆ. ಕೋಟ್ಯಾಂತರ ಅಭಿಮಾನಿಗಳು ಕಣ್ಣೀರ ಸಾಗರದಲ್ಲಿ ಮುಳುಗಿದ್ದಾರೆ.

ಹೃದಯಾಘಾತದಿಂದ ಅಪ್ಪು ನಿಧನರಾಗಿದ್ದಾರೆ. ಆದರೆ, ಪುನೀತ್ ವೃದ್ಧರಿಗೆ ಅನಾಥಶಾಶ್ರಮಗಳಿಗೆ ದೊಡ್ಡ ಕೊಡುಗೆ ನೀಡಿದ್ದರು. ಆ ಮೂಲಕ ನಿಜ ಜೀವನದಲ್ಲೂ ಹೀರೋ ಆಗಿದ್ದರು.

ಹಿರಿಯರನ್ನ ಚಿತ್ರಮಂದಿರಗಳಿಗೆ ಕರೆತಂದಿದ್ದ `ರಾಜಕುಮಾರ’

ಅಂದಹಾಗೆ ಅಪ್ಪುಗೆ ಆರು ವರ್ಷದ ಮಗುವಿನಿಂದ ಹಿಡಿದು ಅರವತ್ತು ವರ್ಷದ ವೃದ್ಧರವರೆಗೂ ಅಭಿಮಾನಿಗಳಿದ್ದಾರೆ. ಇದಕ್ಕೆ ಕಾರಣ ಅವರ ಸಿನಿಮಾಗಳು. ಕುಟುಂಬ ಆಧಾರಿತ ಸಿನಿಮಾಗಳಿಗೆ ಅಪ್ಪು ಕೇರ್ ಆಫ್ ಅಡ್ರೆಸ್ ಆಗಿದ್ದರು. ಅದರಲ್ಲೂ ರಾಜಕುಮಾರ ಸಿನಿಮಾ ಪುನೀತ್ ಗೆ ದೊಡ್ಡ ಹೆಸರು ತಂದುಕೊಡ್ತು. ಆ ಸಿನಿಮಾ ಮೂಲಕ ಅಪ್ಪು ಹಿರಿಯರನ್ನ ಚಿತ್ರಮಂದಿರಗಳಿಗೆ ಕರೆತಂದಿದ್ದರು.

Puneet Raj kumar

ಹೆತ್ತವರನ್ನು ಪ್ರೀತಿಸಬೇಕು. ವೃದ್ಧಾಶ್ರಮಗಳಗೆ ಕಳಿಸಬಾರದು ಎಂಬ ಸಂದೇಶ ಸಾರುವ ಪುನೀತ್ ಈ ಸಿನಿಮಾ ಸೂಪರ್ ಹಿಟ್ ಆಗಿತ್ತು. ಕಮರ್ಷಿಯಲ್ ಸಿನಿಮಾಗಳಿಂದ ಬೇಸತ್ತು ಅದೆಷ್ಟೋ ಹಿರಿಯ ಸಿನಿಮಾ ಅಭಿಮಾನಿಗಳು ಚಿತ್ರಮಂದಿರಗಳತ್ತ ಮುಖ ಮಾಡದೇ ಉಳಿದುಬಿಟ್ಟಿದ್ದರು. ಆದ್ರೆ ರಾಜಕುಮಾರ ಸಿನಿಮಾ ಆ ಹಿರಿಯರನ್ನು ಮತ್ತೆ ಥಿಯೇಟರ್ ಗಳತ್ತ ಹೆಜ್ಜೆ ಹಾಕುವಂತೆ ಮಾಡಿತ್ತು.ಪುನೀತ್ ರಾಜ್ ಕುಮಾರ್ ನಟನೆಯ ರಾಜಕುಮಾರ ಸಿನಿಮಾ ನೋಡಿ ವೃದ್ಧರು ಕಣ್ಣೀರು ಹಾಕಿದ್ದರು.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd