ಮೋಹಕ ತಾರೆ ರಮ್ಯಾ ಚಂದನವನಕ್ಕೆ ರಿ ಎಂಟ್ರಿ
ಸ್ಯಾಂಡಲ್ ವುಡ್ ಕ್ವೀನ್ ಮೋಹಕ ತಾರೆ ರಮ್ಯಾ ಅಂದರೆ ಸಾಕು ಪಡ್ಡೆ ಹುಡಗರು ಮೇರಾ ದಿಲ್ ಕಾ ದಡಕನ್ ಅನ್ನೊ ನಟಿ. ನಕ್ಕರೆ ಸಕ್ಕರೆಯಂತಹ ಗುಳಿ ಕೆನ್ನೆ, ಮೂಗಿನ ತುದಿಯಲ್ಲಿ ಕೋಪ, ಅಭಿಮಾನಿಗಳ ದಿಲ್ ನಲ್ಲಿ ಧೂಳ್ ಎಬ್ಬಿಸೊ ನೋಟ, ಯಂಗ್ ಹುಡುಗರ ಡ್ರೀಮ್ ಗರ್ಲ್ ಮೋಹಕ ತಾರೆ ರಮ್ಯಾ ಚಂದನವನಕ್ಕೆ ಮತ್ತೆ ಪಾದಾರ್ಪಣೆ ಮಾಡುತ್ತಿದ್ದಾರೆ.
ಹೌದು ರಾಜಕೀಯ ಎಂಟ್ರಿ ಬಳಿಕ ಸಿನಿಮಾಗಳಿಂದ ದೂರ ಉಳಿದಿದ್ದ ಕಠಾರಿ ವೀರ ಸುರಸುಂದರಾಂಗದ ದೇವಲೋಕದ ಅಪ್ಸರೆ ರಮ್ಯ ಸಿನಿ ಲೋಕದಿಂದ ದೂರ ಉಳಿದಿದ್ದಾರೆ. ಆದರೆ ಇದೀಗ ಮತ್ತೆ ಅಭಿಮಾನಿಗಳಿಗೆ ದರ್ಶನ ಕೊಡುತ್ತಿದ್ದಾರೆ. 2003ರಲ್ಲಿ ‘ಅಭಿ’ ಚಿತ್ರದಲ್ಲಿ ಪುನೀತ್ ರಾಜ್ಕುಮಾರ್ ಜೊತೆ ನಟಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ರಮ್ಯಾ ಕನ್ನಡದಲ್ಲಿ 35ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ.
ರಮ್ಯಾ ಕನ್ನಡ ಮತ್ತು ತಮಿಳು ಚಿತ್ರರಂಗಗಳಲ್ಲಿ ಸಾಕಷ್ಟು ಸಿನಿಮಾಗಳನ್ನ ಮಾಡುವ ಮೂಲಕ ಸೈ ಅನ್ನಿಸಿಕೊಂಡ ಅಚ್ಚ ಕನ್ನಡದ ನಟಿ. ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದಲ್ಲಿ ರಮ್ಯಾ ಬಿಟ್ಟರೆ ಬೇರೆ ಹಿರೋಯಿನ್ ಗಳೇ ಇಲ್ಲ ಅನ್ನೊ ಮಟ್ಟಿಗೆ ಬೆಳದು ನಿಂತ ನಟಿ.
ರಮ್ಯಾ ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿ ಸ್ಯಾಂಡಲ್ ವುಡ್ ಗೆಳೆಯರ ಜೊತೆ ಮತ್ತೆ ಸ್ನೇಹ ಮುಂದುವರಿಸಿದ್ದಾರೆ. ಸಿನಿಮಾ ಮತ್ತು ರಾಜಕೀಯ ನನ್ನ ಜೀವನದಲ್ಲಿ ಮುಳುಗಿ ಹೋದ ಹಡಗು ಎಂದಿದ್ದ ನಟಿ, ಮಾಜಿ ಸಂಸದೆ ರಮ್ಯಾ. ಹಲವು ದಿನಗಳ ಬಳಿಕ ಇತ್ತೀಚೆಗೆ ಇನ್ ಸ್ಟಾಗ್ರಾಂನಲ್ಲಿ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ.
2016ರಲ್ಲಿ ನಾಗರಹಾವು ಚಿತ್ರದಲ್ಲಿ ನಟಿಸಿದ ಮೇಲೆ ಮತ್ತೆ ರಮ್ಯಾ ಯಾವ ಸಿನಿಮಾಗಳಲ್ಲೂ ಕಾಣಿಸಿಕೊಲ್ಳಿಲ್ಲ. ಆದರೆ ಇದೀಗ ಮತ್ತೊಂದು ಸಿನಿಮಾದಲ್ಲಿ ರಮ್ಯಾ ಅವರು ಕಾಣಿಸಿಕೊಂಡಿದ್ದಾರಂತೆ. ಈ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ರಮ್ಯಾ ಅವರು ಯಾವ ಚಿತ್ರದಲ್ಲಿ ನಟಿಸಿದ್ದಾರೆ.? ಯಾವಾಗ ರಿಲೀಸ್ ಆಗುತ್ತಿದೆ.? ಬೇರೆ ಯಾವೆಲ್ಲಾ ನಟ-ನಟಿಯರಿದ್ದಾರೆ ಎಂಬ ವಿಚಾರಮಾತ್ರ ಬಹಿರಂಗವಾಗಿಲ್ಲ. ಆದರೆ, ಇನ್ನು ಕೆಲವೇ ದಿನಗಳಲ್ಲಿ ರಮ್ಯಾ ಅವರು ತೆರೆಮೇಲೆ ಕಾಣಿಸಿಕೊಳ್ಲುವುದಂತೂ ಸತ್ಯ.