ಬೆಂಗಳೂರು : ಸ್ಯಾಂಡಲ್ ವುಡ್ ನಟ-ನಟಿಯರಿಗೂ ಈಗ ಕೊರೊನಾ ಆತಂಕ ಶುರುವಾಗಿದೆ. ಮೊನ್ನೆಯಷ್ಟೆ ನಟ ಕಿಚ್ಚ ಸುದೀಪ್ ಮನೆಯ ಬಳಿ ವ್ಯಕ್ತಿಯೊಬ್ಬರಿಗೆ ಕೊರೊನಾ ದೃಢಪಟ್ಟಿತ್ತು. ಇದೀಗ ನಟ ರವಿಶಂಕರ್ ಗೌಡ ವಾಸವಿರುವ ಅಪಾರ್ಟ್ ಮೆಂಟ್ ನಲ್ಲಿ ವ್ಯಕ್ತಿಯೊಬ್ಬರಿಗೆ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಹಿನ್ನೆಲೆ ಇಡೀ ಅಪಾರ್ಟ್ ಮೆಂಟ್ ಸೀಲ್ ಡೌನ್ ಮಾಡಲಾಗಿದೆ.
ನಟ ರವಿ ಶಂಕರ್ ಕುಟುಂಬ ಬೆಂಗಳೂರಿನ ಹೊಸಕೆರೆಹಳ್ಳಿ ಸಮೀಪವಿರುವ ಪ್ರೆಸ್ಟೀಜ್ ಅಪಾರ್ಟ್ ಮೆಂಟ್ ನಲ್ಲಿ ವಾಸವಿದೆ. ಇದೇ ಅಪಾರ್ಟ್ ಮೆಂಟ್ ನಲ್ಲೇ ದರ್ಶನ್ ಪತ್ನಿ ವಿಜಯಲಕ್ಷ್ಮೀ ಸಹ ವಾಸವಿದ್ದಾರೆ. ರವಿಶಂಕರ್ ಎದುರು ಮನೆಯಲ್ಲೇ ಕೊರೊನಾ ಪತ್ತೆಯಾಗಿದೆ. ಸೋಂಕು ಪತ್ತೆಯಾಗಿರುವ ವ್ಯಕ್ತಿ ಉತ್ತರ ಭಾರತದ ವ್ಯಾಪಾರಿಯಾಗಿದ್ದು, ಆಗಾಗ ತಮಿಳುನಾಡಿನ ಸೇಲಂಗೆ ಹೋಗಿ ಬರುತ್ತಿದ್ದ ಎಂದು ತಿಳಿದುಬಂದಿದೆ.
ಇನ್ನು ರವಿಶಂಕರ್ ಎದುರು ಮನೆಯನ್ನೇ ಕೊರೊನಾ ದೃಢಪಟ್ಟ ಹಿನ್ನೆಲೆ ರವಿಶಂಕರ್ ಪತ್ನಿ, ಮಕ್ಕಳಲ್ಲಿ ಆತಂಕ ಮನೆಮಾಡಿದೆ. ಇವರ ನೆರವಿಗೆ ಧಾವಿಸಿರುವ ನಟ ಕಿಚ್ಚ ಸುದೀಪ್, ಗಣೇಶ್ ಹಾಗೂ ಸೃಜನ್ ಮಕ್ಕಳನ್ನು ಮನೆಗೆ ಕರೆದುಕೊಂಡು ಬಾ ಎಂದು ಧೈರ್ಯ ತುಂಬಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ರವಿಶಂಕರ್ ನನ್ನ ಅಪಾರ್ಟ್ ಮೆಂಟ್ ನಲ್ಲಿ ನನ್ನ ಎದುರು ಮನೆಗೆ ಕೊರೊನಾ ವಕ್ಕರಿಸಿದೆ. ನನ್ನ ಮಕ್ಕಳಿರುವ ಮನೆಯನ್ನು ದೇವರೆ ಕಾಪಾಡಬೇಕು. 14 ದಿನ ಬಾಗಿಲನ್ನು ತೆರೆಯುವಂತಿಲ್ಲ. ಕ್ವಾರಂಟೈನ್ ನಲ್ಲಿದ್ದೇವೆ. ಸುದೀಪ್, ಗಣಪ, ಸೃಜನ್, ಮಕ್ಕಳನ್ನು ನಮ್ಮ ಮನೆಗೆ ಕರೆದುಕೊಂಡು ಬಾ ಅಂದರು. ಇದು ಗೆಳೆತನ ಅಂದ್ರೆ. ವಿಚಾರಿಸಿದ ಸಂತೋಷ್ ಆನಂದ್, ರಘುರಾಮ್ ಅವರಿಗು ಧನ್ಯವಾದಗಳು ಎಂದು ಹೇಳಿದ್ದಾರೆ.