ಕೊಲೆ ಬೆದರಿಕೆ – ಪೊಲೀಸ್ ಭದ್ರತೆ ನಿರಾಕರಿಸಿದ ನಟ ಸಿದ್ಧಾರ್ಥ್..!
ಚೆನ್ನೈ ತಮಿಳಿನ ಖ್ಯಾತ ನಟ ಸಿದ್ಧಾರ್ಥ್ ಅವರು ಬಿಜೆಪಿಯನ್ನ ಬಿಜೆಪಿ ಸರ್ಕಾರದ ಕಾರ್ಯವೈಖರಿಯನ್ನ ಟೀಕಿಸುವ ಹಿನ್ನೆಲೆ ಬಿಜೆಪಿ ಬೆಂಬಲಿಗರು ಅವರ ವಿರುದ್ಧ ಮುಗಿಬಿದ್ದಿದ್ದಾರೆ. ಇತ್ತೀಚೆಗೆ ಹಲವಾರು ಮಂದಿ ದೂರವಾಣಿ ಮೂಲಕ ಕೊಲೆ ಬೆದರಿಕೆಗಳನ್ನು ಹಾಕಿದ್ದಾರೆ. ಅಲ್ಲದೇ ಅವರ ಕುಟುಂಬಕ್ಕೆ ಅತ್ಯಾಚಾರ ಬೆದರಿಕೆಗಳನ್ನು ಸಹ ಹಾಕಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿದ್ದ ಸಿದ್ಧಾರ್ಥ್, ಬಿಜೆಪಿ ಐಟಿ ಸೆಲ್‌ನವರು ನನ್ನ ಮೊಬೈಲ್ ಸಂಖ್ಯೆ ಬಹಿರಂಗಗೊಳಿಸಿದ್ದಾರೆ. ನೂರಾರು ಮಂದಿ ನನಗೆ ಕರೆ ಮಾಡಿ ಕೊಲೆ ಬೆದರಿಕೆಗಳು, ನನ್ನ ಕುಟುಂಬಕ್ಕೆ ಅತ್ಯಾಚಾರ ಬೆದರಿಕೆ ಹಾಕಿದ್ದಾರೆ. ಅವರ ಸಂಖ್ಯೆಗಳನ್ನೆಲ್ಲಾ ಸೇರಿಸಿ ಪೊಲೀಸರಿಗೆ ದೂರು ನೀಡುತ್ತೇನೆ ಎಂದಿದ್ದರು. ಸಿದ್ಧಾರ್ಥ್‌ಗೆ ಬೆದರಿಕೆ ಕರೆಗಳು ಬಂದ ಹಿನ್ನೆಲೆಯಲ್ಲಿ ತಮಿಳುನಾಡು ಪೊಲೀಸರು ಸಿದ್ಧಾರ್ಥ್‌ಗೆ ಭದ್ರತೆ ಒದಗಿಸುವುದಾಗಿ ಹೇಳಿದ್ದಾರೆ. ಆದರೆ ಸಿದ್ಧಾರ್ಥ್ ಇದನ್ನ ನಿರಾಕರಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಸಿದ್ಧಾರ್ಥ್, ‘ಭದ್ರತೆ ಒದಗಿಸುತ್ತೇನೆ ಎಂದ ನಿಮ್ಮ ಆಫರ್‌ಗೆ ಧನ್ಯವಾದಗಳು. ನಮ್ಮ ಕುಟುಂಬದಲ್ಲಿ ಹೀಗೆ ಪೊಲೀಸ್ ಭದ್ರತೆ ಒದಗಿಸಲ್ಪಟ್ಟ ಮೊದಲ ವ್ಯಕ್ತಿ ನಾನೇ. ಆದರೆ ನನಗೆ ಭದ್ರತೆ ಬೇಡ, ನನಗೆ ಭದ್ರತೆ ಒದಗಿಸಲು ನಿಯೋಜಿಸುವ ಅಧಿಕಾರಿಗಳನ್ನು ಈ ಕೊರೊನಾದ ಸಂಕಷ್ಟದ ಪರಿಸ್ಥಿತಿಯಲ್ಲಿ ಜನರ ಸೇವೆಗೆ ಬಳಸಿಕೊಳ್ಳಿ’ ಎಂದಿದ್ದಾರೆ.








