ಮೋದಿ ರಾಜೀನಾಮೆ ಕುರಿತು ಸಮೀಕ್ಷೆ ನಡೆಸಿದ ನಟಿ ರಮ್ಯಾ : ಫಲೀತಾಂಶ ಹೀಗಿದೆ..!
ಬೆಂಗಳೂರು : ಮೋಹಕ ತಾರೆ ರಮ್ಯಾ ಆಗಾಗ ಮೋದಿ ವಿರುದ್ಧ ಬಿಜೆಪಿ ವಿರುದ್ಧ ಹರಿಹಾಯುತ್ತಲೇ ಇರುತ್ತಾರೆ.. ಇದ್ರಲ್ಲಿ ಹೊಸದೇನಿಲ್ಲ. ಆದ್ರೆ ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ನೇರವಾಗಿ ಮೋದಿ ರಾಜೀನಾಮೆ ಬಗ್ಗೆಯೇ ಜನರಿಂದ ಅಭಿಪ್ರಾಯ ಸಂಗ್ರಹಿಸಿದ್ದಾರೆ.
ದೇಶದಲ್ಲಿನ ಕೊರೊನಾ ಸಂಕಷ್ಟ ಬೆಡ್ ಕೊರತೆಆಕ್ಸಿಜನ್ ಕೊರತೆಯಿಂದಾಗಿ ಸಾವಿವಾರು ಜನರು ಸಾಯುತ್ತಿದ್ದಾರೆ. ಇದರ ಹೊಣೆ ಹೊತ್ತು ಯಾರು ರಾಜೀನಾಮೆ ನೀಡಬೇಕು ಎಂದು ನಟಿ ರಮ್ಯಾ ತನ್ನ ಇನ್ ಸ್ಟ್ರಾ ಗ್ರಾಮ್ ಖಾತೆಯ ಮೂಲಕ ಸಮೀಕ್ಷೆ ನಡೆಸಿದ್ದಾರೆ. ಈ ಸಮೀಕ್ಷೆಯಲ್ಲಿ ಶೇ. 64 ರಷ್ಟು ಮಂದಿ ಪ್ರಧಾನಿ ಮೋದಿ ರಾಜೀನಾಮೆ ನೀಡಬೇಕು ಎಂದು ವೋಟ್ ಮಾಡಿದ್ದಾರೆ. ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ರಾಜೀನಾಮೆ ಕೊಡಬೇಕು ಎಂದು ಶೇ. 36 ರಷ್ಟು ಮಂದಿ ಓಟ್ ಮಾಡಿದ್ದಾರೆ. ಸಮೀಕ್ಷೆಯ ಫಲಿತಾಂಶವನ್ನು ನಟಿ ತನ್ನ ಇನ್ಸ್ಟಾ ಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಜೋರ್ಡನ್ ನಲ್ಲಿ ಆಕ್ಸಿಜನ್ ಸಿಗದೇ ಆರು ಮಂದಿ ಸಾವನ್ನಪ್ಪಿದ್ದಕ್ಕೆ ಅಲ್ಲಿನ ಆರೋಗ್ಯ ಸಚಿವ ಅದರ ಜವಾಬ್ಧಾರಿ ಹೊತ್ತು ರಾಜೀನಾಮೆ ನೀಡಿದ್ದಾರೆ. ನಮ್ಮ ದೇಶದಲ್ಲಿ ಸಾವಿರಾರು ಮಂದಿ ವೆಂಟಿಲೇಟರ್ ಸಿಗದೆ, ಆಕ್ಸಿಜನ್ ಸಿಗದೇ ಸಾವಿಗೀಡಾಗುತ್ತಿದ್ದಾರೆ. ಇದಕ್ಕೂ ನನಗೂ ಸಂಬಂಧವೇ ಇಲ್ಲದಂತೆ ಪ್ರಧಾನಿ ಮೋದಿ ತನ್ನ ದಿನ ನಿತ್ಯದ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಸರ್ಕಾರದ ನಿರ್ಲಕ್ಷ್ಯದಿಂದ ಸಾವಿರಾರು ಮಂದಿ ಆಕ್ಸಿಜನ್ ಸಿಗದೇ ಸಾವನ್ನಪ್ಪಿದ್ದಾರೆ. ಇದಕ್ಕೂ ನನಗೂ ಸಂಬಂಧವೇ ಇಲ್ಲದಂತೆ ನಡೆದುಕೊಳ್ಳುತ್ತಿರುವ ಪ್ರಧಾನಿ ಮೋದಿಯ ರಾಜೀನಾಮೆ ನೀಡುವಂತೆ ಕೇಳ ಬೇಕಿದೆ ಎಂದು ದಿವ್ಯ ಸ್ಪಂದನಾ ಬರೆದುಕೊಂಡಿದ್ದಾರೆ. ಇದರ ಜತೆಗೆ ಪ್ರಧಾನಿ ಮೋದಿ ಹಾಗೂ ಆರೋಗ್ಯ ಸಚಿವ ಹರ್ಷವರ್ಧನ್ ಕುರಿತು ನಡೆಸಿದ ಸಮೀಕ್ಷೆಯ ಫಲಿತಾಂಶವನ್ನು ಹಂಚಿಕೊಂಡಿದ್ದಾರೆ.
ನಟಿ ರಮ್ಯಾ ಸಮೀಕ್ಷೆಯಲ್ಲಿ 89,615 ಮಂದಿ ಮತ ಚಲಾಯಿಸಿದ್ದು, ಶೇ. 64 ರಷ್ಟು ಮಂದಿ ಪ್ರಧಾನಿ ಮೋದಿ ಅವರು ರಾಜೀನಾಮೆ ನೀಡಬೇಕು ಎಂದು ಸಮ್ಮತಿ ಸೂಚಿಸಿದ್ದಾರೆ. ಉಳಿದ 36 ರಷ್ಟು ಮಂದಿ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ರಾಜೀನಾಮೆ ನೀಡಬೇಕು ಎಂದು ಕೋರಿದ್ದಾರೆ.
ಜೀವನದಲ್ಲಿ ಇಂತಹ ಸೋಲುಗಳನ್ನ ಬಹಳ ನೋಡಿದ್ದೇನೆ : ಅಣ್ಣಾಮಲೈ