ತಮಿಳು ನಟ ಸಿಂಬು ಗೆ ಸೇರಿದ ಕಾರು ಡಿಕ್ಕಿ – ಪಾದಾಚಾರಿ ಸಾವು
ತಮಿಳು ನಟ ಸಿಂಬು ಅವರಿಗೆ ಸೇರಿದ ಕಾರು ರಸ್ತೆ ದಾಟುತ್ತಿದ್ದ 70 ವರ್ಷದ ವ್ಯಕ್ತಿಯ ಮೇಲೆ ಹರಿದ ಪರಿಣಾಮ ಅಫಘಾತದಲ್ಲಿ ಪಾದಾಚಾರಿ ಸಾವನ್ನಪ್ಪಿದ್ದಾರೆ. ಈ ಘಟನೆಯನ್ನು ಮಾರ್ಚ್ 18 ರಂದು ನಡೆದಿದೆ ಎಂದು ಹೇಳಲಾಗುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಟನ ಕಾರು ಚಾಲಕನನ್ನು ಬಂಧಿಸಲಾಗಿದೆ. ಅಪಘಾತದಲ್ಲಿ ವೃದ್ಧ ತೀವ್ರವಾಗಿ ಗಾಯಗೊಂಡಿದ್ದರು, ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ. ಈ ಅಫಘಾತ ಸಿಸಿಟಿವಿ ದೃಶ್ಯಾವಳಿಯಲ್ಲಿ ಸೆರೆಯಾಗಿದೆ.
ಅಫಘಾತಕ್ಕೊಳಗಾದ ವ್ಯಕ್ತಿಯನ್ನು ಮುನ್ನುಸಾಮಿ ಎಂದು ಗುರುತಿಸಲಾಗಿದೆ. ಈತ ತೆವಳುತ್ತಾ ರಸ್ತೆ ದಾಟುತ್ತಿದ್ದಾಗ ಅತಿವೇಗದಲ್ಲಿ ಬರುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ. ಮುನ್ನುಸಾಮಿ ಫುಟ್ಪಾತ್ನಲ್ಲಿ ವಾಸವಾಗಿದ್ದರು ಎಂದು ತನಿಖೆ ನಡೆಸುತ್ತಿರುವ ಅಧಿಕಾರಿಗಳು ತಿಳಿಸಿದ್ದಾರೆ. ಮುನ್ನು ಸ್ವಾಮಿ ಕಾಲಿಗೆ ಕೆಲ ದಿನಗಳ ಹಿಂದೆ ಪೆಟ್ಟು ಬಿದ್ದಿದ್ದರಿಂದ ತೆವಳುತ್ತಾ ರಸ್ತೆ ದಾಟುತ್ತಿದ್ದರು.
ಅಪಘಾತ ಸಂಭವಿಸಿ ಕಾರಿನಲ್ಲಿ ನಟ ಸಿಂಬು ಅವರ ತಂದೆ ನಟ-ನಿರ್ದೇಶಕ ಟಿ ರಾಜೇಂದರ್ ಪ್ರಯಾಣಿಸುತ್ತಿದ್ದರು. ಅಪಘಾತದ ನಂತರ, ಮೂವರೂ ಕಾರಿನಿಂದ ಇಳಿದು ಆಂಬ್ಯುಲೆನ್ಸ್ಗೆ ಕರೆ ಮಾಡಿದರು. ಸದ್ಯ ಚಾಲಕನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಪ್ರಾಥಮಿಕ ತನಿಖಾ ಪ್ರಕರಣದ ದೃಷ್ಟಿಯಿಂದ ಪಾಂಡಿ ಬಜಾರ್ ಸಂಚಾರ ತನಿಖಾ ವಿಭಾಗದ ಪೊಲೀಸರು ಚಾಲಕನ ವಿರುದ್ಧ ಮೋಟಾರು ವಾಹನ ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 279 ಮತ್ತು 337 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
Actor Simbu car crawled over a man crossing the road, driver arrested