ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (Sudeep) ಹುಟ್ಟು ಹಬ್ಬ ಇಂದು. ಹೀಗಾಗಿ ಅಭಿಮಾನಿಗಳು ರಾತ್ರಿಯಿಂದಲೇ ಹುಟ್ಟು ಹಬ್ಬ ಆಚರಣೆಗೆ ಸಿದ್ಧತೆ ನಡೆಸುತಿದ್ದಾರೆ. ಕಿಚ್ಚನಿಗೆ ಅಭಿಮಾನಿಗಳು, ಸೆಲೆಬ್ರಿಟಿಗಳು ಸೇರಿದಂತೆ ಎಲ್ಲ ಕಡೆಯಿಂದ ಅಭಿನಂದನೆಯ ಮಹಾಪೂರ ಹರಿದು ಬರುತ್ತಿದೆ.
ಕಿಚ್ಚ ಸುದೀಪ್ (Sandalwood Badshaah) ಇಂದು (ಸೆ.2)ರಂದು ತಮ್ಮ 51ನೇ ವರ್ಷದ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗಷ್ಟೇ ಕಿಚ್ಚ ಸುದೀಪ್, ಮನೆಯ ಬಳಿ ಯಾವುದೇ ಆಚರಣೆ ಇರುವುದಿಲ್ಲ ಎಂದಿದ್ದರು.
ಆದರೆ, ಮದ್ಯರಾತ್ರಿಯೇ ಅಭಿಮಾನಿಗಳು ಕಿಚ್ಚನ ಮನೆಯ ಬಳಿ ಆಗಮಿಸಿದ್ದರು. ಪೊಲೀಸರು ಸುದೀಪ್ ಮನೆಯ ಹತ್ತಿರದರಸ್ತೆ ಬಂದ್ ಮಾಡಿದ್ದರು. ಸುದೀಪ್ ಹೊರ ಬರುತ್ತಿದ್ದಂತೆ ಅಭಿಮಾನಿಗಳು ಘೋಷಣೆ ಕೂಗಿದರು. ಕಿಚ್ಚನ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಅಲ್ಲಲ್ಲಿ ಅಭಿಮಾನಿಗಳು ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
ಜಯನಗರದ ಎಂಇಎಸ್ ಗ್ರೌಂಡ್‌ನಲ್ಲಿ ಸಕಲ ತಯಾರಿ ನಡೆದಿದೆ. ಇಂದು ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಸುದೀಪ್ ಅಭಿನಯದ ಬಿಲ್ಲಾರಂಗಾ ಬಾದ್ ಶಾ ಸಿನಿಮಾದ ಟೀಸರ್ ಬಿಡುಗಡೆಯಾಗಲಿದೆ. ಕೆಆರ್ ಜಿ ಸ್ಟುಡಿಯೋ ಪ್ರೊಡಕ್ಷನ್ ನಲ್ಲಿ ಸುದೀಪ್ ನಿರ್ದೇಶನದ ಹೊಸ ಸಿನಿಮಾ ಕೂಡ ಅನೌನ್ಸ್ ಆಗಬಹುದು ಎನ್ನಲಾಗುತ್ತಿದೆ. ಈಗಾಗಲೇ ಹಲವಾರು ನಟರು ಕಿಚ್ಚನಿಗೆ ಶುಭಾಶಯ ಕೋರಿದ್ದಾರೆ.








