ಅಪ್ಪು ಸಮಾಧಿ ಬಳಿ ಕಣ್ಣೀರಿಟ್ಟ ತಮಿಳು ನಟ ಸೂರ್ಯ
ತಮಿಳಿನ ಸ್ಟಾರ್ ನಟ ಸೂರ್ಯ ಅವರು ಇಂದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಸಮಾಧಿಗೆ ಭೇಟಿ ನೀಡಿ ಅಪ್ಪುಗೆ ಪುಷ್ಪ ನಮನ ಸಲ್ಲಿಸಿ ಗೌರವಿಸಿದ್ರು. ಅಲ್ಲದೇ ಸಮಾಧಿ ಬಳಿಯೇ ಭಾವಕರಾದ ಸೂರ್ಯ ಕಣ್ಣೀರಿಟ್ಟರು. ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಸೂರ್ಯ ಅಪ್ಪು ಅಗಲಿಕೆ ಸಹಿಸಲಾಗದು.. ಅಣ್ಣಾವ್ರು ನನಗೆ ಮಾದರಿಯಾಗಿದ್ರು. ನಾನು ನನ್ನ ತಾಯಿ ಹೊಟ್ಟೆಯಲ್ಲಿ 4 ತಿಂಗಳು ಇದ್ದಾಗ ಅಪ್ಪುಗೆ 7 ತಿಂಗಳು. ಅಣ್ಣಾವ್ರ ಕುಟುಂಬದೊಂದಿಗೆ ನಮ್ಮ ಕುಟುಂಬದ ತುಂಬಾ ಒಡನಾಟವಿತ್ತು..
ಎಲ್ಲ ಫೋಟೋ ಹಾಗೂ ವಿಡೀಯೋಗಳಲ್ಲಿ ಪುನೀತ್ ನಗ್ತಿದ್ರು… ಪುನೀತ್ ಅಗಲಿಕೆ ನಮ್ಮ ಕುಟುಂಬಕ್ಕೂ ನೋವಾಗಿದೆ. ನಮ್ಮ ತಂದೆ ತಾಯಿ ನೋವಿನಿಂದ ಹೊರ ಬಂದಿಲ್ಲ… ನಮ್ಮ ಹೃದಯಗಳಲ್ಲಿ ಅಪ್ಪು ಯಾವಾಗಲೂ ನಗುತ್ತಲೇ ಇರ್ತಾರೆ ಎಂದು ಭಾವುಕರಾದ್ರು. ಅಲ್ಲದೇ ಎಲ್ಲಾ ಕನ್ನಡಿಗರಿಗೂ ನಾನು ಏನು ಹೇಳಬೇಕೋ ತೋಚುತಿಲ್ಲ. ದೇವರು ಅವರ ಆತ್ಮಕ್ಕೆ ಶಾಂತಿ ಕರುಣಿಸಲು ಮತ್ತು ಅವ್ರ ಕುಟುಂಬಕ್ಕೆ ದುಃಖ ಭರಿಸೋ ಶಕ್ತಿ ನೀಡಲಿ ಎಂದು ಹೇಳಿ ಕಣ್ಣೀರಿಡುತ್ತಲೇ ಅಪ್ಪಯ ಸಮಾಧಿ ಬಳಿಯಿಂದ ಹೊರಟರು. ಈ ವೇಳೆ ಸೂರ್ಯ ಅವರ ಜೊತೆಗೆ ಶಿವಣ್ಣ ಕೂಡ ಕಾಣಿಸಿಕೊಂಡಿದ್ದರು.