ಚಂದನವನದ ‘ನೀಲಕಂಠ’ (Neelakanta Kannada Film) ಚಿತ್ರದ ಮೂಲಕ ಮನೆ ಮಾತಾಗಿದ್ದ ಬ್ಯೂಟಿಫುಲ್ ನಟಿ ನಟಿ ನಮಿತಾ (Namitha) ಗೆ ಜಾತಿಯ ಬಗ್ಗೆ ಅವಮಾನ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ತಮಿಳುನಾಡಿದ ಪ್ರಸಿದ್ಧ ಮಧುರೈ ಮೀನಾಕ್ಷಿ ದೇವಸ್ಥಾನಕ್ಕೆ ನಟಿ ಭೇಟಿ ನೀಡಿದ್ದ ವೇಳೆ ದೇಗುಲ ಪ್ರವೇಶದ ವೇಳೆ ಯಾವ ಧರ್ಮದವರು ಜಾತಿ ಪ್ರಮಾಣಪತ್ರ ತೋರಿಸಿ ಎಂದು ಒಳಪ್ರವೇಶಿಸದಂತೆ ತಡೆದಿದ್ದಾರೆ. ಈ ಕಹಿ ಘಟನೆಯ ಕುರಿತು ನಟಿ ಬೇಸರ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಜಾಲತಾಣದ ಮೂಲಕ ಅವರು ಬೇಸರಿಸಿಕೊಂಡಿದ್ದಾರೆ. ಮಧುರೈ ಮೀನಾಕ್ಷಿ ದೇವಸ್ಥಾನಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ನೀವು ಹಿಂದೂ ನಾ ಎಂದು ಆಡಳಿತ ಮಂಡಳಿ ಸಿಬ್ಬಂದಿ ನನ್ನನ್ನು ತಡೆದಿದ್ದಾರೆ. ನಾನು ಹಿಂದೂ ಎಂದು ತಿಳಿಸಿದರೂ ನೀವು ಹಿಂದೂ ಎಂಬುದಕ್ಕೆ ಸಾಕ್ಷಿ ತೋರಿಸಿ ಎಂದು ಕೇಳಿದ್ದಾರೆ ನಟಿ ಅಸಮಾಧಾನ ಹೊರಹಾಕಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಘಟನೆಯ ವಿವರಣೆ ನೀಡಿ, ಇದುವರೆಗೂ ನನ್ನ ಜೀವನದಲ್ಲಿ ಹೀಗೆ ಆಗಿರಲಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.
ನಾವು ಹಿಂದೂ ಎಂದು ಸ್ಪಷ್ಟನೆ ನೀಡಿದ ನಂತರವೇ ಹಣೆಗೆ ಕುಂಕುಮ ಹಚ್ಚಿಕೊಂಡ ನಂತರ ನಮ್ಮನ್ನು ದೇವಸ್ಥಾನ ಒಳ ಪ್ರವೇಶಿಸಲು ಅನುಮತಿ ನೀಡಿದರು ಎಂದು ನಟಿ ನಮಿತಾ ಹೇಳಿದ್ದಾರೆ. ನಮಿತಾ ಅವರು ಕನ್ನಡದಲ್ಲಿ ಕೆಲವು ಚಿತ್ರಗಳಲ್ಲಿ ನಟಿಸಿದ್ದಾರೆ. ರವಿಚಂದ್ರನ್ (Ravichandran) ಜೊತೆ ನೀಲಕಂಠ, ಹೂ, ದರ್ಶನ್ (Actor Darshan) ಜೊತೆ ‘ಇಂದ್ರ ಸೇರಿದಂತೆ ಹಲವು ಚಿತ್ರಗಳಲ್ಲಿ ಅವರು ನಟಿಸಿ ಹಲವಾರು ಅಭಿಮಾನಿಗಳನ್ನು ಗಳಿಸಿದ್ದಾರೆ.
[4:10 pm, 27/08/2024] Honnappa Ji: –