ದೇಶದಲ್ಲಿ ಇನ್ನೂ ಕೆಲವೇ ತಿಂಗಳಲ್ಲಿ ಲೋಕಸಭೆ ಚುನಾವಣೆ ನಡೆಯಲಿದ್ದು, ಎಲ್ಲ ಪಕ್ಷಗಳೂ ತಯಾರಿ ನಡೆಸುತ್ತಿವೆ. ಇದರ ಮಧ್ಯೆ ಅಚ್ಚರಿಯ ವಿಷಯಗಳ ಬೆಳಕಿಗೆ ಬರುತ್ತಲೇ ಇವೆ. ಈ ಪೈಕಿ ಹಿರಿಯ ನಟಿ ಮಾಧುರಿ ದೀಕ್ಷಿತ್ ಅವರ ಹೆಸರು ಕೂಡ ಕೇಳಿ ಬರುತ್ತಿವೆ.
ಅವರು ಮುಂಬಯಿನ ಒಂದು ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಾರೆ ಎನ್ನಲಾಗುತ್ತಿದೆ. ಕೊನೆಗೂ ಈ ಕುರಿತು ಮಾಧುರಿ ದೀಕ್ಷಿತ್ ಉತ್ತರ ನೀಡಿದ್ದಾರೆ.
ಮಾಧುರಿ ದೀಕ್ಷಿತ್ಗೆ ರಾಜಕೀಯ ಸೇರಲು ಇಷ್ಟ ಇಲ್ಲ. ಸಿನಿಮಾ ರಂಗದಲ್ಲೇ ಮುಂದುವರಿಯಲು ಬಯಸಿದ್ದಾರೆ. ‘ಚುನಾವಣೆ ಸಂದರ್ಭದಲ್ಲಿ ನಾನು ಸ್ಪರ್ಧಿಸುತ್ತೇನೆ ಎನ್ನುವ ಸುದ್ದಿ ಹರಿದಾಡುತ್ತದೆ. ಆದರೆ, ರಾಜಕೀಯ ಇಷ್ಟದ ಆದ್ಯತೆಯಲ್ಲ ಎಂದು ಹೇಳಿದ್ದಾರೆ.