ಸೀತಾರಾಮಂ ಸೇರಿದಂತೆ ಹಲವು ಯಶಸ್ವಿ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ನಟಿ ಮೃಣಾಲ್ ಠಾಕೂರ್ (Mrunal Thakur)ಗೆ ಈಗ ಭರ್ಜರಿ ಅವಕಾಶ ಸಿಕ್ಕಿದೆ.
ನಟಿ ಮೃಣಾಲ್ ಠಾಕೂರ್ ತೆಲುಗಿನಲ್ಲಿ ಭರ್ಜರಿ ಅವಕಾಶವೊಂದನ್ನು ಪಡೆದುಕೊಂಡಿದ್ದಾರೆ. ಡಾರ್ಲಿಂಗ್ ಪ್ರಭಾಸ್ (Prabhas) ಜೊತೆ ರೊಮ್ಯಾನ್ಸ್ ಮಾಡಲು ಅವರು ಸಿದ್ಧವಾಗಿದ್ದಾರೆ. ತೆಲುಗು ಮತ್ತು ಬಾಲಿವುಡ್ ನಲ್ಲಿ ಗುರುತಿಸಿಕೊಳ್ಳುತ್ತಿರುವ ಮೃಣಾಲ್ ಗೆ ಪ್ರಭಾಸ್ ಚಿತ್ರತಂಡ ಮಣೆ ಹಾಕಿದೆ. ಸುಂದರ ಪ್ರೇಮಕಥೆಯಲ್ಲಿ ಪ್ರಭಾಸ್ ಗೆ ಜೋಡಿಯಾಗಿ ಮೃಣಾಲ್ ಕಾಣಿಸಿಕೊಳ್ಳುತ್ತಿದ್ದಾರೆ.
ಅಲ್ಲದೇ, ಸೀತಾರಾಮಂ’ ನಿರ್ದೇಶಕ ಈ ಚಿತ್ರಕ್ಕೂ ನಿರ್ದೇಶನ ಮಾಡಿದ್ದಾರೆ. ಹನು ರಾಘವಪುಡಿ ಆ್ಯಕ್ಷನ್ ಕಟ್ ಹೇಳಿದ್ದಾರೆ. ಪ್ರಭಾಸ್ ಮತ್ತು ಮೃಣಾಲ್ ಕಾಂಬಿನೇಷನ್ ಚಿತ್ರ ಇದೇ ಸೆಪ್ಟೆಂಬರ್‌ನಿಂದ ಶುರುವಾಗಲಿದೆ. ಈ ಸಿನಿಮಾ ತಂಡದಿಂದ ಈ ಕುರಿತು ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಕಲ್ಕಿ ಸಿನಿಮಾದಲ್ಲಿ ಮೃಣಾಲ್ ಠಾಕೂರ್ ಅತಿಥಿ ಪಾತ್ರ ಮಾಡಿದ್ದರು.








