ಒಳ ಉಡುಪು ಧರಿಸದೇ ಬೀದಿಗಿಳಿದಿ ಟ್ರೋಲ್ ಗೆ ಒಳಗಾದ ನಟಿ ಪೂನಂ ಪಾಂಡೆ….
ತನ್ನ ಉಡುಪು ಮತ್ತು ಬೋಲ್ಡ್ ಅವತಾರಗಳಿಂದ ಸುದ್ದಿಯಾಗುವ ನಟಿ ಪೂನಂ ಪಾಂಡೆ ಇದೀಗ ಒಳ ಉಡುಪು ಧರಿಸದೆ ರೋಡಿಗಿಳಿದು ಟ್ರೋಲ್ ಗೆ ಗುರಿಯಾಗಿದ್ದಾರೆ.
ಪೂನಂ ಪಾಂಡೆ ಸಿನಿಮಾ ಮತ್ತು ಮಾಡಲಿಂಗ್ ನಿಂದ ಸುದ್ದಿಯಾಗಿದ್ದಕಿಂತ ಬೋಲ್ಡ್ ಪೋಟೋ, ವೀಡಿಯೋಗಳೀಂದ ಸುದ್ದಿಯಾಗಿದ್ದೇ ಹೆಚ್ಚು. ಇತ್ತೀಚಿಗೆ ವಾಣಿಜ್ಯ ನಗರಿ ಮುಂಬೈನಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಂಡಿರುವ ಪೂನಂ ಪಾಂಡೆ, ಒಳ ಉಡುಪು ಧರಿಸದೆಯೇ ರಸ್ತೆಗಿಳಿದಿದ್ದಾರೆ. ಇದೇ ವೇಳೆ ಅಭಿಮಾನಿಗಳು ಆಕೆಯೊಂದಿಗೆ ಸೆಲ್ಫಿ ತೆಗೆಸಿಕೊಳ್ಳಲು ಮುಗಿ ಬಿದ್ದಿದ್ದಾರೆ. ಈ ವಿಡಿಯೋವನ್ನು ತನ್ನ ಇನ್ಸ್ಟಾಗ್ರಾಮ್ ನಲ್ಲಿ ಪೂನಂ ಪಾಂಡೆ ಫೋಸ್ಟ್ ಮಾಡುತ್ತಿದ್ದಂತೆ ನೆಟ್ಟಿಗರಿಂದ ಟ್ರೋಲ್ ಗಳ ಸುರಿಮಳೆಯಾಗುತ್ತಿದೆ.
https://www.instagram.com/reel/CfOh-rsK7Rr/?utm_source=ig_embed&ig_rid=48506334-fe6d-474d-b546-4b7f7fd33508
ಪೂನಂ ಪಾಂಡೆ ಅವತಾರ ಕಂಡು ನೆಟ್ಟಿಗರು ಕಿಡಿಕಾರಿದ್ದು, ತರಹೇವಾರಿ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ. ಪೊಲೀಸರು ಏಕೆ ಇವರನ್ನು ಬಂಧಿಸುತ್ತಿಲ್ಲ ಎಂದು ಕೆಲವರು ಪ್ರಶ್ನಿಸಿದರೆ, ಮತ್ತೆ ಕೆಲವರು ಒಳ್ಳೆಯ ಬಟ್ಟೆ ಹಾಕಿ ಸಮಾಜದಲ್ಲಿ ಗೌರವದಿಂದ ಬಾಳಿ ಎಂದು ಸಲಹೆ ನೀಡಿದ್ದಾರೆ.








