ಬೆಂಗಳೂರು: ಸ್ಯಾಂಡಲ್‍ವುಡ್ ಡ್ರಗ್ಸ್ ಮಾಫಿಯಾಗೆ ಸಂಬಂಧಿಸಿದಂತೆ ನಟಿ ಸಂಜನಾ ಗಲ್ರಾಣಿ ಅವರ ವಿಚಾರಣೆಯನ್ನು ಸಿಸಿಬಿ ಪೊಲೀಸರು ಆರಂಭಿಸಿದ್ದಾರೆ.
ಇಂದು ಬೆಳಿಗ್ಗೆ ಸಂಜನಾ ಅವರ ಇಂದಿರಾನಗರದ ಮನೆ ಮೇಲೆ ಸಿಸಿಬಿ ಪೊಲೀಸರು ದಿಡೀರ್ ದಾಳಿ ಮಾಡಿದ್ದರು. ದಾಳಿ ವೇಳೆ ಮನೆಯಲ್ಲಿದ್ದ ಮೊಬೈಲ್, ಲ್ಯಾಪ್‍ಟಾಪ್, ಪೆನ್‍ಡ್ರೈವ್ ಸೇರಿದಂತೆ ಕೆಲ ವಸ್ತುಗಳನ್ನು ಸಿಸಿಬಿ ಪೊಲೀಸರು ಜಪ್ತಿ ಮಾಡಿದ್ದಾರೆ.
ಮನೆಯಲ್ಲಿ ತೀವ್ರ ಜಾಲಾಡಿದ ನಂತರ ಸಂಜನಾಳನ್ನು ವಶಕ್ಕೆ ಪಡೆದ ಸಿಸಿಬಿ ಇನ್ಸ್‍ಪೆಕ್ಟರ್‍ಗಳಾಸ ಅಂಜುಮಾಲಾ, ಪುನೀತ್ ನೇತೃತ್ವದ ತಂಡ ಆಕೆಯನ್ನು ಸಿಸಿಬಿ ಕಚೇರಿಗೆ ಕರೆದುಕೊಂಡು ಬಂದಿದೆ. ಮನೆಯಿಂದ ಕರೆದುಕೊಂಡು ಹೊರಡುತ್ತಿದ್ದಂತೆ ಸಂಜನಾ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಪೊಲೀಸರೇ ಸಮಾಧಾನಪಡಿಸಿ ಕರೆದುಕೊಂಡು ಬರಲಾಗಿದೆ.
ಸಂಜನಾ ಜತೆ ಆಕೆಯ ತಂದೆ, ತಾಯಿಯನ್ನೂ ಸಿಸಿಬಿ ಕಚೇರಿಗೆ ಕರೆದುಕೊಂಡು ಬರಲಾಗಿದೆ. ಆದರೆ, ಅವರನ್ನು ಕಚೇರಿಯ ಪ್ರವೇಶ ದ್ವಾರದ ಅತಿಥಿಗಳ ಕೊಠಡಿಯಲ್ಲಿ ಇರಿಸಲಾಗಿದೆ. ಸಂಜನಾಳನ್ನು ಮಾತ್ರ ವಿಚಾರಣೆಗೆ ಕರೆದೊಯ್ಯಲಾಗಿದೆ.
ಸಿಸಿಬಿ ಡಿಸಿಪಿ ರವಿಕುಮಾರ್, ಎಸಿಪಿ ಗೌತಮ್, ಇನ್ಸ್‍ಪೆಕ್ಟರ್‍ಗಳಾದ ಅಂಜುಮಾಲಾ ನಾಯಕ್, ಪುನೀತ್ ನೇತೃತ್ವದಲ್ಲಿ ತೀವ್ರ ವಿಚಾರಣೆ ನಡೆಯಲಿದೆ.
ಈಗಾಗಲೇ 50 ಪ್ರಶ್ನೆಗಳನ್ನು ಸಿದ್ದಮಾಡಿಕೊಂಡಿರುವ ಸಿಸಿಬಿ ಪೊಲೀಸರು ಡ್ರಗ್ಸ್ ಲಿಂಕ್ ಕುರಿತಂತೆ ವಿಚಾರಣೆ ಆರಂಭಿಸಿದ್ದಾರೆ.
Parrot’s testimony : ಗಿಳಿ ಹೇಳಿದ ಸಾಕ್ಷಿಯಿಂದ ಕೊಲೆ ಆರೋಪಿಗೆ ಜೀವಾವಧಿ ಶಿಕ್ಷೆ….
parrot's testimony : ಗಿಳಿ ಹೇಳಿದ ಸಾಕ್ಷಿಯಿಂದ ಕೊಲೆ ಆರೋಪಿಗೆ ಜೀವಾವಧಿ ಶಿಕ್ಷೆ…. ಆಗ್ರಾ: ಒಂಬತ್ತು ವರ್ಷಗಳ ಹಿಂದಿನ ಕೊಲೆ ಪ್ರಕರಣದ ಸಾಕ್ಷಿಯೊಬ್ಬರು ನೀಡಿದ ಹೇಳಿಕೆಯನ್ನ ಆಧರಿಸಿ...