ನಟಿ ಸಂಜನಾ ಗಲ್ರಾನಿಗೆ ಜೈಲೋ? ಬೇಲೋ ಅಥವಾ ಮತ್ತೆ ಸಿಸಿಬಿ ಕಸ್ಟಡಿಯೋ ?
ಬೆಂಗಳೂರು, ಸೆಪ್ಟೆಂಬರ್ 16: ಸಿಸಿಬಿ ಬಂಧನದಲ್ಲಿರುವ ನಟಿ ಸಂಜನಾ ಗಲ್ರಾನಿ ಅವರು ಜಾಮೀನು ಕೋರಿ ಸಿಟಿ ಸಿವಿಲ್ ಕೋರ್ಟ್ಗೆ ಬುಧವಾರ ಅರ್ಜಿ ಸಲ್ಲಿಸಿದ್ದಾರೆ.
ಡ್ರಗ್ಸ್ ಕೇಸ್ ಪ್ರಕರಣದ ಆರೋಪಿ ಸಂಜನಾ ಅವರನ್ನು ಹತ್ತು ದಿನಗಳ ಹಿಂದೆ ಸಿಸಿಬಿ ಕಸ್ಟಡಿಗೆ ತೆಗೆದುಕೊಂಡಿತ್ತು. ಅವರ ಸಿಸಿಬಿ ಕಸ್ಟಡಿ ಇಂದು ಅಂತ್ಯವಾಗಲಿದ್ದು ಸಿಸಿಬಿ ಪೊಲೀಸರು ನ್ಯಾಯಾಧೀಶರ ಮುಂದೆ ನಟಿಯನ್ನು ಹಾಜರು ಪಡಿಸಲಿದ್ದಾರೆ. ಈ ನಡುವೆ ಅರ್ಚನಾ ಮನೋಹರ ಗಲ್ರಾನಿ @ ಸಂಜನಾ ಗಲ್ರಾನಿ ಎಂಬ ಹೆಸರಲ್ಲಿ ಸಂಜನಾ ಜಾಮೀನು ಅರ್ಜಿ ಸಲ್ಲಿಸಿದ್ದಾರೆ. ಇನ್ನು ಕೆಲವೇ ಕ್ಷಣಗಳಲ್ಲಿ ನಟಿ ಸಂಜನಾ ಗಲ್ರಾನಿ ಅವರಿಗೆ ಜೈಲೋ? ಬೇಲೋ ಅಥವಾ ಮತ್ತೆ ಸಿಸಿಬಿ ಕಸ್ಟಡಿಯೋ ಎಂದು ತಿಳಿದು ಬರಲಿದೆ.
ಸಿಸಿಬಿ ಕಸ್ಟಡಿ ಇಂದು ಅಂತ್ಯವಾಗುವ ಹಿನ್ನೆಲೆಯಲ್ಲಿ ಬುಧವಾರ ಬೆಳಗ್ಗೆ ಸಂಜನಾರನ್ನು ಮಲ್ಲೇಶ್ವರದ ಕೆಸಿ ಜನರಲ್ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದೆ.