ಬೋಲ್ಡ್ ಆನ್ಸರ್ ಕೊಟ್ಟು ಮತ್ತೆ ಸುದ್ದಿಯಾದ ಶೃತಿ
ಚೆನ್ನೈ : ನಟಿ ಶೃತಿ ಹಾಸನ್ ನೇರ ಹೇಳಿಕೆ ನೀಡುತ್ತಾ ಸದಾ ಸುದ್ದಿಯಲ್ಲಿರೋದು ನಮಗೆಲ್ಲಾ ತಿಳಿದಿರುವ ವಿಚಾರವೇ.
ಇದೀಗ ಮತ್ತೆ ಅದೇ ರೀತಿ ಸೆಕ್ಸ್ ಬೋಲ್ಡ್ ಆನ್ಸರ್ ನೀಡಿ ಸುದ್ದಿಯಾಗಿದ್ದಾರೆ.
ಇತ್ತೀಚೆಗೆ ಸಲಾರ್ ಬೆಡಗಿ ಶೃತಿ ಹಾಸನ್ ಖಾಸಗಿ ಶೋವೊಂದರಲ್ಲಿ ಭಾಗಿಯಾಗಿದ್ದರು.
ಈ ವೇಳೆ ಅವರಿಗೆ ನೀವು ಆಹಾರ ಮತ್ತು ಸೆಕ್ಸ್ ನಲ್ಲಿ ಯಾವುದನ್ನು ಆಯ್ಕೆ ಮಾಡಿಕೊಳ್ಳುತ್ತೀರಾ ಎಂದು ಕೇಳಲಾಗಿದೆ.
ಇದಕ್ಕೆ ಶೃತಿ, ಆಹಾರ, ಸೆಕ್ಸ್ ಗೂ ಸಂಬಂಧವಿಲ್ಲ ಎಂದು, ನಾವು ಸೆಕ್ಸ್ ಇಲ್ಲದೆ ಇರಬಹುದು. ಆದರೆ ಆಹಾರವಿಲ್ಲದೇ ಇರಲು ಸಾಧ್ಯವಿಲ್ಲ ಎಂದಿದ್ದಾರೆ.
ಇನ್ನು ಸದ್ಯ ಶೃತಿ ಹಾಸನ್ ಸಲಾರ್ ನಂತಹ ಪ್ಯಾನ್ ಇಂಡಿಯಾ ಸಿನಿಮಾ ಸೇರಿದಂತೆ ಲಾಭಂ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.