ಮಾನಸಿಕ ಒತ್ತಡ ನಿವಾರಣೆಗೆ ಸುಲಭ ಚಿಕಿತ್ಸೆ ಆಕ್ಯು ಪ್ರೆಸರ್..!
ಯಾವುದೇ ವ್ಯಕ್ತಿಯನ್ನು ಆರೋಗ್ಯವಂತನೆಂದು ಪರಿಗಣಿಸ ಬೇಕಾದರೆ ಆತ ದೈಹಿಕ, ಮಾನಸಿಕ, ಭೌದ್ಧಿಕ, ಸಾಮಾಜಿಕ ಹಾಗು ಆಧ್ಯಾತ್ಮಿಕವಾಗಿ ಸಬಲನಾಗಿರಬೇಕು. ವ್ಯಕ್ತಿಯ ಚಲನವಲನಗಳು, ವ್ಯವಹರಿಸುವ ರೀತಿ ನೀತಿ, ಆಡುವ ಮಾತುಗಳು ಆತನ ಆಲೋಚನೆಯ ಮೇಲೆ ನಿಂತಿರುತ್ತದೆ. ಅಂದರೆ ವ್ಯಕ್ತಿಯ ನಡವಳಿಕೆಗೆ ಆತನಲ್ಲಿ ಬರುವ ಚಿಂತನೆಯೇ ಕಾರಣ.
ಸಕಾರಾತ್ಮಕ ಚಿಂತನೆಗಳು ವ್ಯಕ್ತಿಯನ್ನು ಏನನ್ನಾದರೂ ಸಾಧಿಸುವತ್ತ, ಛಲದಿಂದ ಬರುವ ಸಮಸ್ಯೆಗಳನ್ನು ಎದುರಿಸುತ್ತ ಪರಿಹಾರವನ್ನು ಹುಡುಕಿ ಗುರಿಯನ್ನು ಮುಟ್ಟುವ ಕಡೆ ಮನಸ್ಸನ್ನು ಕೇಂದ್ರೀಕರಿಸುತ್ತದೆ. ಆದರೆ ನಕಾರಾತ್ಮಕ ಚಿಂತನೆ ಶರೀರದ ಬಲವನ್ನು ಕುಗ್ಗಿಸಿ ಬಲಹೀನವನ್ನಾಗಿಸುತ್ತದೆ. ವಿಷಯಗಳಲ್ಲಿ ಆಸಕ್ತಿ ಇಲ್ಲದಿರುವುದು, ಏಕಾಗ್ರತೆಯ ಕೊರತೆ, ಕಿರಿ ಕಿರಿ ದುಃಖ, ಖಿನ್ನತೆ ಇವು ಮಾನಸಿಕ ಒತ್ತಡದ ಪ್ರಮುಖ ಲಕ್ಷಣಗಳು.
ಸದ್ಯದ ಕೊರೊನ ಸಾಂಕ್ರಾಮಿಕ ರೋಗದ ವಾತಾವರಣದಲ್ಲಿ ಸರ್ವೇಸಾಮಾನ್ಯವಾಗಿ ಎಲ್ಲರಲ್ಲಿ ಏನೋ ಚಿಂತೆ, ಭಯ, ಆತಂಕ ಮನೆಮಾಡಿದೆ. ಎಲ್ಲೆಡೆ ಕೊರೋನಾ ಸೋಂಕು, ಸಾವು ನೋವುಗಳ ವರದಿಯನ್ನು ನಿರಂತರವಾಗಿ ಕೆಲ ಸುದ್ದಿ ಮಾಧ್ಯಮಗಳಿಂದ ಕೇಳಿ ಕೇಳಿ ಮನದ ದೃಢತೆಯನ್ನು ಅಲುಗಾಡಿಸಿದೆ.
ಸ್ವಲ್ಪ ಸಮಯದ ಹಿಂದಷ್ಟೇ ನಿರಂತಕವಾಗಿ ಸುತ್ತಾಡಿ ಬರುತ್ತಿದ್ದ ನಾವು ವಾಯುವಿಹಾರಕ್ಕೆ ಹೋಗಲು, ದಿನ ನಿತ್ಯದ ಬಳಕೆಗೆ ಬೇಕಾದ ಸಾಮಾನುಗಳನ್ನು ತರಲು ಕೂಡ ಅಂಗಡಿ, ಮಾಲ್ ಗಳಿಗೆ ತೆರಳಲು ಮನಸ್ಸು ಹಿಂದೇಟು ಹಾಕುತ್ತಿದೆ. ಒಮ್ಮೆ ಶಿಸ್ತು ಹಾಗು ಲವಲವಿಕೆಯಿಂದ ಇದ್ದ ಜೀವನ ಶೈಲಿ ಏರುಪೇರಾಗಿದೆ. ಮನೆಯಲ್ಲಿ ಹಿರಿಯರ ಬಗ್ಗೆ ಸಾಕಷ್ಟು ಕಾಳಜಿಯ ಅವಶ್ಯಕತೆ ಇದೆ. ನಮ್ಮ ಕುಟುಂಬದವರ ಅರೋಗ್ಯ ಎಚ್ಚರಿಕೆಯಿಂದ ಕಾಪಾಡಿಕೊಳ್ಳುವುದು ಮೂಲಭೂತ ಜವಾಬ್ಧಾರಿಯಾಗುತ್ತದೆ.
ಆಕ್ಯುಪ್ರೆಷರ್ ಪ್ರಕೃತಿ ಚಿಕಿತ್ಸೆಯ ಒಂದು ಭಾಗವಾಗಿದೆ. ಖರ್ಚಿಲ್ಲದೆ, ಹೊರಗೆ ಎಲ್ಲೂ ಹೋಗದೆ, ತತ್ಕ್ಷಣದಲ್ಲಿ ಒಳ್ಳೆ ಫಲಿತಾಂಶವನ್ನು ಕೊಡೊ ಮರ್ಮ ಚಿಕಿತ್ಸೆಯ ಬಗ್ಗೆ ತಿಳಿದಿದ್ದರೆ ಇನ್ನೇನು ಯೋಚನೆ. ದೇಹದ ಮೇಲೆ ಹಲವು ಮರ್ಮ ಬಿಂದುಗಳು ಇದ್ದು, ಅವುಗಳ ಮೇಲೆ ನಿರ್ದಿಷ್ಟ ಒತ್ತಡವನ್ನು ನೀಡುವುದರ ಮುಖಾಂತರ ಪ್ರಾಣಶಕ್ತಿಯ ಏರಿಳಿತವನ್ನು ನಿಯಂತ್ರಿಸಬಹುದು ಮತ್ತು ಸಮಸ್ಥಿತಿಗೆ ತರಬಹುದು.
ರೋಗಗಳಲ್ಲಿ ಕೆಲವು ದೀರ್ಘಾವಧಿಯ ಚಿಕಿತ್ಸೆಯನ್ನು ಪಡೆಯಬೇಕಾಗಿಬರುತ್ತದೆ ಮತ್ತು ಕೆಲವುದಕ್ಕೆ ತುರ್ತು ಚಿಕಿತ್ಸೆಯ ಅಗತ್ಯವಿರುತ್ತದೆ. ನಿರಂತರವಾಗಿ ಮೆದುಳಿನ ಮೇಲೆ ಒತ್ತಡ, ದುಗುಡ, ಆತಂಕ, ಚಿಂತೆ ನಮ್ಮನ್ನು ದುರ್ಬಲವನ್ನಾಗಿಸುತ್ತದೆ. ಅನಿರೀಕ್ಷಿತವಾಗಿ ಒದಗುವ ಘಟನೆಗಳಿಂದ ಕೆಲವೊಮ್ಮೆ ಕೋಪ, ಭಯ, ದುಃಖ,ಮಾನಸಿಕ ಖಿನ್ನತೆ ಕಾಡಬಹುದು. ನಮ್ಮ ದೇಹದ ಅವಯವಗಳ ಮೇಲೆ ಅನಗತ್ಯ ಒತ್ತಡ ಉಂಟಾಗಿ ಅವುಗಳ ಕಾರ್ಯಕಮತೆ ಕ್ಷೀಣಿಸುತ್ತದೆ. ಅವುಗಳನ್ನು ಆದಷ್ಟು ಜಾಗೃತೆಯಿಂದ ಹೋಗಲಾಡಿಸಿ ಮುಂಬರುವ ದೀರ್ಘಕಾಲೀನ ಕಾಯಿಲೆಗಳನ್ನು ತಡೆಗಟ್ಟಬಹುದು. ಇಂತಹ ಪರಿಸ್ಥಿತಿ ಈಗ ಎದುರಾಗಿದ್ದು, ಇವುಗಳ ಸವಾಲನ್ನು ಹೀಗೆ ಸ್ವೀಕರಿಸಬಹುದು-
* ಜೀವನವನ್ನು ಅದು ಒದಗಿದಂತೆ ಎದರಿಸುವುದು.
* ಒದಗುವ ಸಣ್ಣ ಪುಟ್ಟ ಅರೋಗ್ಯ ಸಮಸ್ಯೆಗಳನ್ನು ಸುಲಭವಾಗಿ ಆಕ್ಯುಪ್ರೆಷರ್ ಸ್ವಯಂ ಚಿಕಿತ್ಸೆಯಿಂದ ಪರಿಹರಿಸಿಕೊಳ್ಳುವುದು.
ತುರ್ತು ಪರಿಸ್ಥಿತಿಯಲ್ಲಿ ಮುಂದಿನ ವ್ಯದ್ಯಕೀಯ ಸಹಾಯ ದೊರೆಯುವ ಮುನ್ನ ನಿರ್ದಿಷ್ಟ ಬಿಂದುಗಳ ಮೇಲೆ ಒತ್ತಡ ನೀಡುವುದರಿಂದ ನಮಗೆ ಸಾಕಷ್ಟು ಅರೋಗ್ಯ ಸುಧಾರಣೆ ದೊರೆಯುತ್ತದೆ.ಸರ್ವೇ ಸಾದಾರಣವಾಗಿ ಕಾಡುವ ತಲೆ ನೋವು, ಆತಂಕ, ಭಯ, ಅಧಿಕ ರಕ್ತದೊತ್ತಡ, ಕೋಪ, ಜೋಂಪುಗಳಿಗೆ ಕೆಳಗೆ ಕಂಡ ಬಿಂದುಗಳ ಮೇಲೆ ನಿರ್ದಿಷ್ಟ ಒತ್ತಡ ಕೊಡುವುದರಿಂದ ಸಮಾಧಾನ ದೊರೆಯುತ್ತದೆ.
ಸೂಚನೆ: ಮೇಲೆ ಕಂಡ ಲಕ್ಷಣಗಳು ದೀರ್ಘ ಕಾಲದಿಂದ ಇದ್ದಲ್ಲಿ ತಜ್ಞರನ್ನು ಕಾಣುವುದು
ಸೂಚನೆ-
ಇಲ್ಲಿ ಕೊಟ್ಟಿರುವ ಬಿಂದುಗಳ ಮೇಲೆ ಹೆಬ್ಬೆಟ್ಟಿನಿಂದ ಒಂದು ನಿಮಿಷದವರೆಗೆ ಒತ್ತಡ ಕೊಡುವುದರಿಂದ ದಿನಕ್ಕೆ ಮೂರು ಬಾರಿಯಂತೆ ಒಳ್ಳೆಯ ಫಲಿತಂಶವನ್ನು ಪಡೆಯಬಹುದು.
ಜೊತೆಯಲ್ಲಿ,
*ದೇವರಲ್ಲಿ ನಂಬಿಕೆ ಇರಲಿ,ಜೀವನದ ಬಗ್ಗೆ ಸಕಾರಾತ್ಮ ದೃಷ್ಟಿಕೋನ ವಿರಲಿ
*ಯೋಗ, ದ್ಯಾನ, ಪ್ರಾಣಯಾಮದಲ್ಲಿ ತೊಡಗಿಸಿಕೊಳ್ಳಿ
*ಆಟದಲ್ಲಿ ತೊಡಗಿ, ಹವ್ಯಾಸ ರೂಡಿಸಿ ಕೊಳ್ಳುವುದರಿಂದ ಹೊಸ ಉತ್ಸಾಹ ನೀಡುತ್ತದೆ.
*ಸಿಕ್ಕ ಸಮಯವನ್ನು ಸದುಪಯೋಗ ಪಡಿಸಿಕೊಳ್ಳಿ.ನಿಮ್ಮ ಅನಿಸಿಕೆಯನ್ನು ಹಂಚಿಕೊಳ್ಳಲು ಮರೆಯದಿರಿ.
ವಿಶ್ವಾಸವಿರಲಿ
ಅಕ್ಯು ಪ್ರೆಷರ್ ತಜ್ಞೆ ಡಾ. ಶ್ರೀಮತಿ ಸುಮ ರಾಘವೇಂದ್ರ