adani enterprises : ಫೆ. 6 ಕ್ಕೆ ರಾಷ್ಟ್ರವ್ಯಾಪಿ ಪ್ರತಿಭಟನೆ ಹಮ್ಮಿಕೊಂಡ ಕಾಂಗ್ರೆಸ್…
ಹಿಂಡನ್ ಬರ್ಗ್ ಸಂಶೋಧನಾ ವರದಿಯನ್ನ ಆಧಾರಿಸಿ ನಡೆಯುತ್ತರುವ ಅದಾನಿ ಎಂಟರ್‌ಪ್ರೈಸಸ್ ವಿವಾದದ ನಡುವೆ ಫೆಬ್ರವರಿ 6 ರಂದು ಭಾರತದಾದ್ಯಂತ ಎಲ್ಲಾ ಜಿಲ್ಲೆಗಳಲ್ಲಿನ ಜೀವ ವಿಮಾ ನಿಗಮದ ಕಚೇರಿಗಳು ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಗಳ ಮುಂದೆ ರಾಷ್ಟ್ರವ್ಯಾಪಿ ಪ್ರತಿಭಟನೆಗಳನ್ನ ನಡೆಸುವುದಾಗಿ ಕಾಂಗ್ರೆಸ್ ಪಕ್ಷ ಘೋಷಿಸಿದೆ.
“ಕೇಂದ್ರದ ಸರ್ಕಾರವು ತಮ್ಮ ಆತ್ಮೀಯ ಸ್ನೇಹಿತರನ್ನ ಬೆಂಬಲಿಸಲು ಸಾಮಾನ್ಯ ಜನರ ಹಣವನ್ನು ಬಳಸುತ್ತಿದೆ. ಕಾಂಗ್ರೆಸ್ ಪಕ್ಷವು ಸೋಮವಾರ ದೇಶದಾದ್ಯಂತ ಎಲ್ಐಸಿ ಮತ್ತು ಎಸ್ಬಿಐ ಕಚೇರಿಗಳ ಮುಂದೆ ದೇಶದಾದ್ಯಂತ ಪ್ರತಿಭಟನೆ ನಡೆಸಲು ನಿರ್ಧರಿಸಿದೆ” ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಹೇಳಿದ್ದಾರೆ.
ಅದಾನಿ ಗ್ರೂಪ್ ಷೇರುಗಳ ಮೇಲೆ ಎಲ್‌ಐಸಿ ಮತ್ತು ಎಸ್‌ಬಿಐನಂತಹ ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಹಣವನ್ನ ಹೂಡಿಕೆ ಮಾಡಿರುವುದು ಸಾಮಾನ್ಯ ಜನತೆಯ ಉಳಿತಾಯ ಮೇಲೆ ಪರಿಣಾ, ಬೀರಲಿದೆ ಎಂದು ಕಾಂಗ್ರೆಸ್ ನಂಬಿದೆ.
ನಿನ್ನೆ ನಡೆದ ಸಂಸತ್ತಿನ ಅಧಿವೇಶನದಲ್ಲಿ,ವಿರೋಧ ಪಕ್ಷದ ನಾಯಕರು ಅದಾನಿ ಗ್ರೂಪ್ ಕಂಪನಿಯ ಷೇರುಗಳಲ್ಲಿನ ವಂಚನೆ ಆರೋಪ ಪ್ರಚೋದಿತ ಸೋಲಿನ ಬಗ್ಗೆ ಜಂಟಿ ಸಮಿತಿಯಿಂದ ಚರ್ಚೆ ಮತ್ತು ತನಿಖೆಗೆ ಒತ್ತಾಯಿಸಿದರು. ಇದರ ಗದ್ದಲದಲ್ಲಿ ಲೋಕಸಭೆ ಮತ್ತು ರಾಜ್ಯಸಭೆ ಎರಡರಲ್ಲಿಯೂ ಕಲಾಪಗಳನ್ನ ಬಲವಂತಾಗಿ ಮುಂದೂಡಲಾಯಿತು.
adani enterprises : Congress organized a nationwide protest at Feb. 6…