Bhaskar Rao: ಸ್ವಯಂ ನಿವೃತ್ತಿ ಘೋಷಿಸಿಕೊಂಡ ಭಾಸ್ಕರ್ ರಾವ್

1 min read
Bhaskar Rao Saaksha Tv

ಸ್ವಯಂ ನಿವೃತ್ತಿ ಘೋಷಿಸಿಕೊಂಡ ADGP ಭಾಸ್ಕರ್ ರಾವ್

ಬೆಂಗಳೂರು : ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಅವರು IPS ಸೇವೆಗೆ ಸ್ವಯಂ ನಿವೃತ್ತಿ ಘೋಷಿಸಿದ್ದಾರೆ.

ಪ್ರಸ್ತುತ ರೈಲ್ವೆ ವಿಭಾಗದ ಎಡಿಜಿಪಿ ಆಗಿದ್ದ ಭಾಸ್ಕರ್‌ ರಾವ್ ಅವರು ಭಾವನಾತ್ಮಕಾವಗಿ ಟ್ವೀಟ್ ಮಾಡಿ ಕಚೇರಿಯಿಂದ ಮನೆಯ ಕಡೆ ಕೊನೆಯ ಟ್ರಿಪ್ ಎಂದು ಬರೆದು, ಸಿಬ್ಬಂದಿ ಜೊತೆಗಿನ ಫೋಟೋ ಹಂಚಿಕೊಂಡಿದ್ದಾರೆ.

ಇವರು 2021ರ ಸೆಪ್ಟೆಂಬರ್‌ನಲ್ಲಿ ಸ್ವಯಂ ನಿವೃತ್ತಿಗೆ ಕೇಂದ್ರ ಸರಕಾರಕ್ಕೆ ಅರ್ಜಿ ಸಲ್ಲಿಸಿ ಸರಕಾರ ಅದನ್ನು ಕೂಡಲೇ ಅದನ್ನು ಪರಿಗಣಿಸಬೇಕು ಎಂದು ಕೋರಿದ್ದರು. ಇವರ ಸ್ವಯಂ ನಿವೃತ್ತಿ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಕೇಂದ್ರ ಸರ್ಕಾರ ಅಂಗೀಕರಿಸಿದೆ.

ಕಳೆದ 7 ತಿಂಗಳಿಂದ ಕೇಂದ್ರ ಸರ್ಕಾರವು ಸ್ವಯಂ ನಿವೃತ್ತಿ ಅರ್ಜಿಗೆ ಅನುಮೋದನೆ ನೀಡಿರಲಿಲ್ಲ. ಇದೀಗ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಈ ಬಗ್ಗೆ ಮಾಹಿತಿ ನೀಡಿ, ಅಧಿಕಾರ ಹಸ್ತಾಂತರ ಮಾಡಿದ್ದಾರೆ.

ತಮ್ಮ ಟ್ವಿಟರ್ ಖಾತೆಯಲ್ಲಿ ನಾನು 32 ವರ್ಷಗಳ ಕಾಲ ಸೇವೆ IPS ಹುದ್ದೆಯಲ್ಲಿದ್ದುಕೊಂಡು ಸಲ್ಲಿಸಿದ್ದೇನೆ. ಇದು ಕಚೇರಿಯಿಂದ ಮನೆಯ ಕಡೆ ಕೊನೆಯ ಟ್ರಿಪ್. ನಾನು ನನ್ನ ಕುಟುಂಬ, ಕರ್ನಾಟಕದ ಜನತೆ ಮತ್ತು ನನ್ನ ಜೀವನದಲ್ಲಿ ನನ್ನ ಎಲ್ಲಾ ಸಹೋದ್ಯೋಗಿಗಳು, ಸ್ನೇಹಿತರು, ಹಿರಿಯರು ಮತ್ತು ಯುವಜನರಿಗೆ ಮತ್ತು ಅಂತಿಮವಾಗಿ ಪಕ್ಷಾತೀತವಾಗಿ ಕರ್ನಾಟಕ ಸರ್ಕಾರಕ್ಕೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ ಎಂದು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.

1954ರಲ್ಲಿ ಜನಿಸಿದ್ದ ಭಾಸ್ಕರ್ ರಾವ್, 1990ರ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿದ್ದರು. 2019-20ರ ಅವಧಿಯಲ್ಲಿ ಬೆಂಗಳೂರು ನಗರದ ಪೊಲೀಸ್ ಆಯುಕ್ತರಾಗಿ ಸೇವೆ ಸಲ್ಲಿಸಿದ್ದರು. ರಾಜ್ಯ ಮೀಸಲು ಪೊಲೀಸ್ ಪಡೆ, ಆಂತರಿಕ ಭದ್ರತಾ ವಿಭಾಗ ಸೇರಿದಂತೆ ವಿವಿಧೆಡೆ ಕಾರ್ಯ ನಿರ್ವಹಿಸಿದ್ದರು.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd