ಗಮನಿಸಿ : ನೀವಿನ್ನೂ ಪ್ಯಾನ್ ಕಾರ್ಡ್ ಜೊತೆ ಆಧಾರ್ ಕಾರ್ಡ್ ಲಿಂಕ್ ಮಾಡಿಲ್ವಾ..? ಚಿಂತೆ ಬೇಡ..!
ನವದೆಹಲಿ: ಪ್ಯಾನ್ ಕಾರ್ಡ್ ನಂಬರ್ ಅನ್ನು ಆಧಾರ್ ನೊಂದಿಗೆ ಜೋಡಿಸುವ ಗಡುವನ್ನು ಸೆ. 30 2021 ರವರೆಗೆ ವಿಸ್ತರಿಸಲಾಗಿದೆ. ಹಿಂದಿನ ಗಡುವು ಜೂ. 30 ಆಗಿತ್ತು. ಟ್ವಿಟರ್ ಮೂಲಕ ನರ‍್ಧಾರವನ್ನು ಪ್ರಕಟಿಸಿದ ಎಂಒಎಸ್ ಹಣಕಾಸು ಸಚಿವ ಅನುರಾಗ್ ಠಾಕೂರ್, ಆದಾಯ ತೆರಿಗೆ ಪಾವತಿದಾರರಿಗೆ ಪರಿಹಾರ ಒದಗಿಸಿ ರ‍್ಕಾರ ಈ ನರ‍್ಧಾರವನ್ನು ತೆಗೆದುಕೊಂಡಿದೆ ಎಂದು ಹೇಳಿದರು.
ಕೊರೊನಾ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಪ್ಯಾನ್ ಕರ‍್ಡ್ ನಂಬರ್ ಆಧಾರ್ ನೊಂದಿಗೆ ಜೋಡಿಸಲು 3 ತಿಂಗಳವರೆಗೆ ಅವಕಾಶ ನೀಡಿದೆ. ಪ್ಯಾನ್ ಅಂದರೆ ಹತ್ತು-ಅಂಕಿಗಳ ಆಲ್ಫಾನ್ಯೂಮರಿಕ್ ಐಡೆಂಟಿಫೈಯರ್ ಆಗಿದೆ. ಇದನ್ನು ಆದಾಯ ತೆರಿಗೆ ಇಲಾಖೆ ನೀಡುತ್ತದೆ. ಪ್ರತಿ ಮೌಲ್ಯಮಾಪಕರಿಗೆ ಒಂದು ವಿಶಿಷ್ಟವಾದ ಪ್ಯಾನ್ ನೀಡಲಾಗುತ್ತದೆ. ಆದರೆ ಆಧಾರ್ ಸಂಖ್ಯೆ ಯುಐಡಿಎಐ ಭಾರತ ನಿವಾಸಿಗಳಿಗೆ ನೀಡುವ 12 ಸಂಖ್ಯೆಯಾಗಿದೆ.








