ಕನ್ನಡ ಮಾಧ್ಯಮದಲ್ಲಿ ಓದಿ ಸಾಧನೆ ಮೆರೆದ ಪ್ರತಿಭಾವಂತೆ ಅಧ್ಯಯನಾ Adhyayanaa English translate
ಕಾರ್ಕಳ, ನವೆಂಬರ್22: ‘ ನನಗಿಂತ ಪ್ರತಿಭಾವಂತರು ಬಹಳ ಮಂದಿ ಇದ್ದಾರೆ. ಆದರೆ ನನಗೆ ಅವಕಾಶ ಮತ್ತು ಪ್ರೋತ್ಸಾಹ ಸಿಕ್ಕಿದೆ. ಆದ್ದರಿಂದ ಇಂತಹ ಸಾಧನೆ ನನ್ನಿಂದ ಸಾಧ್ಯವಾಯಿತು. ಕನ್ನಡ ಮಾಧ್ಯಮ, ಇಂಗ್ಲಿಷ್ ಮಾಧ್ಯಮ ಎನ್ನುವುದು ಮುಖ್ಯವಾಗುವುದಿಲ್ಲ. ಭಾಷೆಯಲ್ಲಿ ಹೇಗೆ ತೊಡಗಿಸಿಕೊಳ್ಳುತ್ತೇವೆ ಎನ್ನುವುದು ಮುಖ್ಯವಾಗುತ್ತದೆ. ಈ ಪುಸ್ತಕ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತೊಡಗಿಸಿಕೊಳ್ಳುವ ಅಭ್ಯರ್ಥಿಗಳಿಗೆ ಉಪಯುಕ್ತವಾದರೆ ನನ್ನ ಶ್ರಮ ಸಾರ್ಥಕ ‘ – ಇದು ಎಳೆಯ ಸಾಧಕಿ ಅಧ್ಯಯನಾಳ ವಾಸ್ತವದ ಅರಿವು ಮೂಡಿಸುವ ಸರಳ, ಸುಂದರ, ಪ್ರಬುದ್ಧವಾದ ಮಾತುಗಳು. Adhyayanaa English translate

ಚಾಣಕ್ಯ ಕೆರಿಯರ್ ಆಕಾಡೆಮಿ ಕನ್ನಡದಲ್ಲಿ ಪ್ರಕಟಿಸಿದ ಜನರಲ್ ನಾಲೆಡ್ಜ್ ಪುಸ್ತಕವನ್ನು ಇಂಗ್ಲಿಷ್ ಭಾಷೆ ಗೆ ಅನುವಾದ ಮಾಡಿರುವ ಪಿಯುಸಿ ವಿದ್ಯಾರ್ಥಿನಿ ಅಧ್ಯಯನಾ ಕನ್ನಡ ಮಾಧ್ಯಮದಲ್ಲಿ ಓದಿದ ಪ್ರತಿಭಾವಂತೆ.
ಅಧ್ಯಯನಾ ಖ್ಯಾತ ಸಾಹಿತಿ, ಚಿಂತಕ, ಅಧ್ಯಾಪಕ ಶ್ರೀ ಅರವಿಂದ ಚೊಕ್ಕಾಡಿ ಹಾಗೂ ಲೇಖಕಿ ಉಪನ್ಯಾಸಕಿ ಶ್ರೀಮತಿ ಪ್ರಮೀಳಾ ಚೊಕ್ಕಾಡಿಯವರ ಮಗಳು.
ಇಂಗ್ಲಿಷ್ ಮಾಧ್ಯಮದಲ್ಲಿ ಕಲಿತರೆ ಅದು ಶಿಕ್ಷಣ ಎಂದು ನಂಬಿರುವ ಕಾಲಘಟ್ಟದಲ್ಲಿ ತಮ್ಮ ಮಕ್ಕಳನ್ನು ಕನ್ನಡ ಮಾಧ್ಯಮದಲ್ಲಿ ಕಲಿಸುವ ನಿರ್ಧಾರ ಮಾಡಿದ್ದರು ಆಕೆಯ ಹೆತ್ತವರು. 10ನೇ ತರಗತಿಯಲ್ಲಿ ಅತ್ಯುತ್ತಮ ಅಂಕಗಳೊಂದಿಗೆ ಉತ್ತೀರ್ಣಳಾಗಿದ್ದ ಪ್ರತಿಭಾವಂತೆ ಅಧ್ಯಯನಾ ಪಿಯುಸಿಯಲ್ಲಿ ತನ್ನ ಆಸಕ್ತಿಯ ಕಲಾ ವಿಭಾಗವನ್ನು ಆರಿಸಿದಾಗ ಆಕೆಯ ಹೆತ್ತವರು ಆಕೆಯ ನಿರ್ಧಾರಕ್ಕೆ ಸಂತೋಷ ಪಟ್ಟವರೇ ಹೊರತು ತಮ್ಮ ನಿರ್ಧಾರವನ್ನು ಮಗಳ ಮೇಲೆ ಹೇರಿದವರಲ್ಲ.
ಕನ್ನಡ ಮಾಧ್ಯಮದ ವಿದ್ಯಾರ್ಥಿನಿ ಕೊರೋನಾ ಸಾಂಕ್ರಾಮಿಕ ಕಾರಣವಾಗಿ ನಡೆಯುತ್ತಿದ್ದ ಆನ್ಲೈನ್ ತರಗತಿಯ ನಡುವೆ 500ಕ್ಕೂ ಹೆಚ್ಚಿನ ಪುಟಗಳ ಪುಸ್ತಕವನ್ನು ಅನುವಾದ ಮಾಡಿರುವುದು ಆಕೆಯ ತಾಳ್ಮೆಗೆ ನಿದರ್ಶನ.

ಅನುವಾದ ಎನ್ನುವುದು ಸುಲಭದ ಕಾರ್ಯವಲ್ಲ. ಅನುವಾದಕಾರನಿಗೆ ಎರಡೂ ಭಾಷೆಗಳ ಮೇಲೆ ಪಾಂಡಿತ್ಯವಿರಬೇಕು. ವಿಮರ್ಶಕರೆಲ್ಲರೂ ಮೆಚ್ಚುವಂತೆ ಈ ಎಳೆಯ ಬರಹಗಾರ್ತಿ ಇಂಗ್ಲಿಷ್ ಭಾಷೆಗೆ ಕನ್ನಡ ಪುಸ್ತಕವನ್ನು ಅನುವಾದ ಮಾಡಿದ್ದಾಳೆ.
ಪುಸ್ತಕ ಬಿಡುಗಡೆಯ ಸಂದರ್ಭದಲ್ಲಿ ಆಕೆ ಆಡಿದ ಮಾತುಗಳು ಆಕೆಯ ಆತ್ಮವಿಶ್ವಾಸ, ಪ್ರೌಢಿಮೆ, ಪ್ರತಿಭೆಯನ್ನು ಪರಿಚಯಿಸುತ್ತದೆ. ಅಧ್ಯಯನಾ ಕನ್ನಡ ಸಾರಸ್ವತ ಲೋಕಕ್ಕೆ ಭರವಸೆಯ ಚಿಗುರು ಎನ್ನುವುದರಲ್ಲಿ ಸಂಶಯವಿಲ್ಲ. ಕನ್ನಡ ಸಾಹಿತ್ಯ ಲೋಕಕ್ಕೆ ಈ ಎಳೆಯ ಬರಹಗಾರ್ತಿಯಿಂದ ಇನ್ನಷ್ಟು ಕೊಡುಗೆಗಳು ಬರಲಿ ಎಂದು ಶುಭ ಹಾರೈಸೋಣ…
ಮಿತ್ರಪ್ರಭಾ ಹೆಗ್ಡೆ
ನಿವೃತ್ತ ಪ್ರಾಶುಂಪಾಲೆ
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
https://twitter.com/SaakshaTv/status/1330187534849220610?s=19
https://twitter.com/SaakshaTv/status/1330187878652125189?s=19
https://twitter.com/SaakshaTv/status/1330188116712435712?s=19








