ಪ್ರಪಂಚವನ್ನೇ ಬೆಚ್ಚಿಬೀಳಿಸಿದ ಕ್ರೂರಿ ಅಡಾಲ್ಫ್ ಹಿಟ್ಲರ್ ಲೈಫ್ ಸ್ಟೋರಿ..!
ಅಡಾಲ್ಫ್ ಹಿಟ್ಲರ್ ಈಗಿನ ಪ್ರಪಂಚ ಬಹುಶಃ ಮುಂದೆ ಇನ್ನೂ ಶತಮಾಗಳವರೆಗೂ ವಿಶ್ವದ ಪ್ರತಿಯೊಬ್ಬರೂ ದೇಶ್ವಿಸುವ ವ್ಯಕ್ತಿ ಅಂದ್ರೆ ಅದು ಈ ಅಡಾಲ್ಫ್ ಹಿಟ್ಲರ್… ಇದೇ ಹಿಟ್ಲರ್ ನಿಂದ ಕೋಟ್ಯಾಂತರ ಜನರು ಬಲಿಯಾಗಿದ್ದಾರೆ. ಇಡೀ ವಿಶ್ವದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದ ವಿಶ್ವ ಮಹಾಯುದ್ಧಕ್ಕೂ ಇದೇ ಹಿಟ್ಲರ್ ಕಾರಣ. ಆತನ ಸರ್ವಾಧಿಕಾರತ್ವದ ಸಮಮಯದಲ್ಲಿ ಆತನ ಕ್ರೂರತ್ವ ಎಷ್ಟರ ಮಟ್ಟಿಗಿ ಇತ್ತು ಅನ್ನೋದು ಇತಿಹಾಸದ ಪುಟಗಳಲ್ಲಿ ಉಲ್ಲೇಖವಾಗಿದೆ. ಜರ್ಮನಿ ಮಾತ್ರವಲ್ಲ ಇಡೀ ವಿಶ್ವವೇ ಈ ಹಿಟ್ಲರ್ ಅನ್ನೋ ಹೆಸರು ಕೇಳಿದ್ರೆನೇ ಭಯಪಡುವಂತಾಗಿತ್ತು. ಆದ್ರೆ ಮಹಾಯುದ್ಧದ ಕರ್ತೃ ಹಿಟ್ಲರ್ ಹೇಗೆ ಹೇಡಿಯ ರೀತಿ ಆತ್ಮಹತ್ಯೆ ಮಾಡಿಕೊಂಡ ಅನ್ನೋ ಪ್ರಶ್ನೆ ಒಂದ್ ಕಡೆಯಿದ್ರೆ, ಸಾವಿಗೆ ನಿಗೂಢ ಕಾರಣಭಗಳಿರಬಹುದು ಎಂಬ ಅನುಮಾನಗಳಿಗೆ ಇಂದಿಗೂ ಸರಿಯಾದ ಉತ್ತರ ಸಿಕ್ಕಿಲ್ಲ.
ಈಗಿನ ಕಾಲದಲ್ಲಿ ಎಲ್ಲರೂ ದ್ವೇಷಿಸುವ ಹಿಟ್ಲರ್ ಆತನ ಜಮಾನದಲ್ಲಿ ಅತ್ಯಂತ ಪ್ರಭಾವಿ ವ್ಯಕ್ತಿಯಾಗಿದ್ದ. ತನ್ನ ಭಾಷಣದ ಮೂಲಕ ಜನರನ್ನ ಪ್ರಭಾವಿತರನ್ನಾಗಿಸುತ್ತಿದ್ದ ಈ ಹಿಟ್ಲರ್. ಈ ಹಿಟ್ಲರ್ ಭಾಷಣಕ್ಕೆ ಜನರು ಬಹುಬೇಗನೆ ಪ್ರೇರೇಪಿತಗೊಳ್ಳುತ್ತಿದ್ರು. ಇದೇ ಆತ ಅಷ್ಟು ದೊಡ್ಡ ನಾಜಿ ಸೇನೆ ಕಟ್ಟುವಲ್ಲಿ + ಪಾಯಿಂಟ್ ಆಯ್ತು ಅಂದ್ರೂ ತಪ್ಪಾಗೋದಿಲ್ಲ. ಆಶ್ಚರ್ಯಕರ ಸಂಗತಿಯಂದ್ರೆ ಒಂದು ಕಾಲದಲ್ಲಿ ತಾನು ಚರ್ಚ್ ನ ಫಾದರ್ ಅರ್ಥಾತ್ ಓರ್ವ ಪ್ರೀಸ್ಟ್ ಆಗಬೇಕು ಅನ್ನೋ ಕನಸುಕಂಡಿದ್ದ ಹಿಟ್ಲರ್ ಹೇಗೆ ವಿಶ್ವದ ಅತ್ಯಂತ ಕ್ರೂರಿ ಸರ್ವಾಧಿಕಾರಿ. ಹಿಟ್ಲರ್ ನ ಜೀವನ ಹೀಗೆ ಸರ್ವಾಧಿಕಾರದ ಪಟ್ಟಕ್ಕೇರಿದ. ಆಸ್ಟ್ರೀಯದಲ್ಲಿ ಜನಿಸಿ ಜರ್ಮನ್ ನ ವಾಧಿಕಾರಿಯಾದ ಅನ್ನೋ ಕೆಲವೊಂದು ಇಂಟರೆಸ್ಟಿಂಗ್ ವಿಚಾರಗಳನ್ನ ತಿಳಿಯೋಣ.
ಅಡಾಲ್ಫ್ ಹಿಟ್ಲರ್ ನ ಕಥೆ ಶುರುವಾಗಿದ್ದು ಏಪ್ರಿಲ್ 20 1889ರಂದು. ಅಂದ್ರೆ ಹಿಟ್ಲರ್ ಜನಿಸಿದ ದಿನ. ಆಸ್ಟ್ರೀಯದ ಬ್ರೌನಾವ್ ಆಮ್ ಇನ್ ಎಂಬಲ್ಲಿ ಹಿಟ್ಲರ್ ಜನನವಾಗಿತ್ತು. ತಂದೆ ಅಲೋಯಿಸ್ ಹಿಟ್ಲರ್ , ತಾಯಿ ಕ್ಲಾರಾ ಪೋಲ್ಜಲ್. ಹಿಟ್ಲರ್ ತಾಯಿ ಅಲೋಯಿಸ್ ಹಿಟ್ಲರ್ ನ 3ನೇ ಪತ್ನಿ. ಆಕೆಯ 4 ನೇ ಮಗ ಅಡಾಲ್ಫ್ ಹಿಟ್ಲರ್. ಹಿಟ್ಲರ್ ನ ಒಡಹುಟ್ಟಿದವರು ಹಿಟ್ಲರ್ ಜನನಕ್ಕೂ ಮುಂಚೆಯೇ ನಾನಾ ಕಾರಣಗಳಿಂದ ಮೃತಪಟ್ಟಿದ್ದರು.
ಇನ್ನೂ ಒಂದು ಕಾಲದಲ್ಲಿ ಪ್ರಪಂಚವನ್ನೇ ಆಳುವ ಕನಸು ಕಂಡಿದ್ದ ಹಿಟ್ಲರ್ ಬಾಲ್ಯ ಹೇಳಿಕೊಳ್ಳುವಂತಹ ಉತ್ತಮವಾಗೇನು ಇರಲಿಲ್ಲ. ಒಂದು ಹೊತ್ತಿನ ಊಟಕ್ಕೂ ಕಷ್ಟ ಪಡುವ ಸ್ಥಿತಿಯಿತ್ತು. ಹೀಗೆ ಕೆಲಸಗಳಿಗಾಗಿ ಹಿಟ್ಲರ್ ಕುಟುಂಬ ಬೇರೆ ಬೇರೆ ನಗರಗಳಿಗೆ ಆಗಾಗ ವಲಸೆ ಹೋಗಬೇಕಾದ ಅನಿವಾರ್ಯತೆ ಇತ್ತು. ಹಿಟ್ಲರ್ ಗೆ ತನ್ನ ತಂದೆಯ ಜೊತೆಗಿನ ಸಂಬಂಧವೂ ಹೇಳಿಕೊಳ್ಳುವಷ್ಟ ಉತ್ತಮವಾಗೇನು ಇರಲಿಲ್ಲ. ವಾಲ್ಕಸ್ ಚುಲೆ ಶಾಲೆಯಲ್ಲಿ ವಿದ್ಯಾಭಾಯಸ ಪೂರ್ಣಗೊಳಿಸಿದ್ದ ಹಿಟ್ಲರ್ ಗೆ ಹಿಟ್ಲರ್ ಬಾಲ್ಯದಲ್ಲಿ ಅತ್ಯಂತ ದಾರ್ಮಿಕ ನಂಬಿಕೆಯುಳ್ಳ ವ್ಯಕ್ತಿಯಾಗಿದ್ದು, ಚಿಕ್ಕ ವಯಸ್ಸಿನಲ್ಲೇ ತಾನು ಪ್ರೀಸ್ಟ್ ಆಗಬೇಕೆಂಬ ಕನಸು ಕಡಿದ್ದ ಅಂದ್ರೆ ಆಶ್ಚರ್ಯ ಆಗುತ್ತೆ.
ಹಿಟ್ಲರ್ ಚಿಕ್ಕ ವಯಸ್ಸಿನಿಂದಲೂ ಜರ್ಮನ್ ನ ರಾಷ್ಟ್ರವಾದಿ ಆಲೋಚನೆಯಿಂದ ಪ್ರೇರಿಪಿತನಾಗಿದ್ದ. ಇದೇ ಕಾರಣಕ್ಕೆ ಆತ ಆಸ್ಟ್ರಿಯಾದಲ್ಲಿದ್ರೂ ಕೂಡ ಆಸ್ಟ್ರಿಯಾದಲ್ಲಿ ಜರ್ಮನ್ ನ ರಾಷ್ಟ್ರಗೀತಿ ಹಾಡ್ತಿದ್ದನಂತೆ. 1903 ರಲ್ಲಿ ಹಿಟ್ಲರ್ ತಂದೆಯ ಮೃತ್ಯುವಾಗಿತ್ತು. ಇದಾದ ಕೆಲವೇ ವರ್ಷಗಳಲ್ಲಿ ತಾಯಿಯೂ ಸಾವನಪ್ಪಿದ್ರು. ಇದಾದ ಬಳಿಕ ಒಬ್ಬಂಟಿಯಾಗಿದ್ದ ಹಿಟ್ಲರ್ ಜೀವನ ಬೀದಿಗೆ ಬಂದಿತ್ತು. ಜೀವನ ಸಾವಿಸೋದೆ ಕಷ್ಟವಾಗಿತ್ತು. ಒಂದು ಹೊತ್ತಿನ ಊಟಕ್ಕೂ ದುಡ್ಡಿಲ್ಲದ ಹೀನ ಪರಿಸ್ಥಿತಿಗೆ ತಲುಪಿದ್ದ ಹಿಟ್ಲರ್. ಹೊಟ್ಟೆಪಾಡಿಗಾಗಿ ಹಿಟ್ಲರ್ ಕೂಲಿಕಾರ್ಮಿಕನಾಗಿ ಕೆಲಸ ಶುರುಮಾಡಿದ. ಪೇಯಿಂಟಿಂಗ್ ಸೇರಿ ಇನ್ನೂ ಕೆಲ ಕೆಲಸಗಳನ್ನ ಮಾಡಿ ಹೊಟ್ಟೆ ತುಂಬಿಸಿಕೊಳ್ತಿದ್ದ. ಇನ್ನೂ ಜನರು ಹೇಳೋ ಪ್ರಕಾರ ಇದೇ ಸಮಯದಲ್ಲೇ ಹಿಟ್ಲರ್ ಗೆ ಯಹೂದಿಗಳ ಮೇಲೆ ಅತೀವ ದ್ವೇಷ ಹುಟ್ಟಿದ್ದು ಎನ್ನಲಾಗುತ್ತೆ. 1913ರಲ್ಲಿ ಹಿಟ್ಲರ್ ಆಸ್ಟ್ರೀಯಾದಿಂದ ಜರ್ಮನಿಗೆ ಶಿಫ್ಟ್ ಆಗ್ತಾನೆ. ಜರ್ಮನ್ ಸೇನೆ ಸೇರಲು 1913 ರಲ್ಲಿ ಅರ್ಜಿ ಸಲ್ಲಿಸುತ್ತಾರೆ. 1914 ರಲ್ಲಿ ಅರ್ಜಿಯನ್ನ ಸೇನೆ ಸ್ವೀಕಾರ ಮಾಡಿತ್ತು. ಈ ಮೂಲಕ ಹಿಟ್ಲರ್ ಸೇನೆ ಸೆರ್ತಾನೆ.
ಹೇಳಿ ಕೇಳಿ ಮೊದಲಿನಿಂದಲೂ ಜರ್ಮನ್ ಮೇಲೆ ಅತ್ಯಂತ ಒಲವಿದ್ದ ಹಿಟ್ಲರ್ ಆ ದೇಶಕ್ಕಾಗಿ ಗಡಿಯಲ್ಲಿ ಅನೇಕ ಯುದ್ಧಗಳಲ್ಲೂ ಒಳ್ಲೆಯ ಪ್ರದರ್ಶನ ತೋರಿದ್ದರಿಂದ ಅನೇಕ ಪ್ರಶಸ್ತಿ ಗೌರವಗಳಿಗೆ ಪಾತ್ರನಾಗಿದ್ದ ಹಿಟ್ಲರ್. ಬಳಿಕ ವಿಶ್ವದ ಮೊದಲ ಮಹಾ ಯುದ್ಧದಲ್ಲಿ ಜರ್ಮನ್ ಸೋಲುಂಡಿತ್ತು. ಜರ್ಮನ್ ಆರ್ಮಿ ಸರೆಂಡರ್ ಆದ ಪರಿಣಾಮ ಹಿಟ್ಲರ್ ತುಂಬಾನೆ ಬೇಸರಗೊಂಡಿದ್ದ. ಈ ಸೋಲಿಗೆ ಜರ್ಮನ್ ನ ರಾಜಕಾರಣಿಗಳನ್ನ ಹಪಣೆಯಾಗಿಸಿದ ಹಿಟ್ಲರ್ ಮುಂದೆ ಒಂದು ದಿನ 1919 ರಲ್ಲಿ ಹಿಟ್ಲರ್ ಡಿಎಪಿ ಪಕ್ಷವನ್ನ ಸೇರಿದ್ದ. ಇನ್ನೂ ¥ಈ ಪಾರ್ಟಿ ಯಹೂದಿಗಳ ಕಟ್ಟಾ ವಿರೋಧಿಗಳಾಗಿದ್ದರು. ಇದೇ ಸಂಘಕ್ಕೆ ಸೇರಿದ ಬಳಿಕ ಹಿಟ್ಲರ್ ಗೆ ಯಹೂದಿಗಳ ಮೇಲೆನ ದ್ವೇಷ ತಾರಕಕ್ಕೇರಿತ್ತು ಎನ್ನಲಾಗಿದೆ.
ಇನ್ನೂ ಇದೇ ಡಿಎಪಿ ಪಾರ್ಟಿ ಮುಂದೆ ನಾಜಿ ಪಾರ್ಟಿಯಾಗಿ ಬದಲಾಯ್ತು. ಇನ್ನೂ ಹಿಟ್ಲರ್ ಅತಿ ಕಡಿಮೆ ಸಮಯದಲ್ಲಿ ತಮ್ಮ ಭಾಷಣಗಳ ಮೂಲಕ, ಯಹೂದಿಗಳ ವಿರುದ್ಧ ಬಾಷಣೆಗಳನ್ನ ಮಾಡುತ್ತಾ ಜನರ ಮೇಲೆ ಪ್ರಬಾವ ಬೀರಿ ಅತ್ಯಂತ ಜನಪ್ರಿಯರಾಗಿದ್ದರು. ಇನ್ನೂ ಮಹಾ ಯುದ್ಧದ ನಂತರ ಜರ್ಮನ್ ಆರ್ಥಿಕ ಸ್ಥಿತಿ ನೆಲಕಚ್ಚಿತ್ತು. ಇದೇ ವಿಚಾರವನ್ನ ಇಟ್ಕೊಂಡು ಹಿಟ್ಲರ್ ಜನರ ಮುಂದೆ ಬಾಷಣಗಳನ್ನ ಮಾಡುತ್ತ ಜನರ ನಡುವೆ ಲೋಕಪ್ರಿಯನಾಗಿದ್ದ ಹಿಟ್ಲರ್ ನ ಪ್ರಬಾವಕ್ಕೆ ಸಾಕಷ್ಟು ಜನರು ಒಳಗಾಗಿದ್ದರು. ಹಿಟ್ಲರ್ ನ ಲೋಕಪ್ರಿಯತೆ ಗಮನಿಸಿದ ನಾಜಿ ಪಾರ್ಟಿ 1921 ರಲ್ಲಿ ಆತನನ್ನ ಪಕ್ಷದ ಚೇರ್ ಮ್ಯಾನ್ ಆಗಿ ನೇಮಕ ಮಾಡಿತ್ತು. ಹೀಗೆ ಮೊದಲನೇ ಮಹಾಯುದ್ಧದಲ್ಲಿ ಯಾರಿಗೂ ಗೊತ್ತಿರದ ಹಿಟ್ಲರ್ ಅತ್ಯಂತ ಜನಪ್ರಿಯನಾಗಿದ್ದ. ಅಷ್ಟೇ ಅಲ್ಲ ಹಿಟ್ಲರ್ 1923 ರಲ್ಲಿ ಹಿಟ್ಲರ್ ಅಲ್ಲಿನ ಸರ್ಕಾರವನ್ನ ಉರುಳಿಸುವ ಪ್ರಯತ್ನವನ್ನೂ ಸಹ ಮಾಡಿದ್ದ. ಆದ್ರೆ ಈ ಪ್ರಯತ್ನದಲ್ಲಿ ಹಿಟ್ಲರ್ ಸಂಪೂರ್ಣವಾಗಿ ಅಸಫಲವಾಗಿದ್ದ. ಅಲ್ದೇ ದೇಶದ್ರೋಹದ ಆರೋಪದಲ್ಲಿ ಹಿಟ್ಲರ್ ಗೆ 5 ವರ್ಷ ಜೈಲು ಶಿಕ್ಷೆಯನ್ನು ಸಹ ವಿಧಿಸಲಾಗಿತ್ತು. ಆದ್ರೆ 13 ತಿಂಗಳಿಗೆ ಹಿಟ್ಲರ್ ರಿಲೀಸ್ ಆಗಿ ಜೈಲಿನಿಂದ ಆಚೆ ಬಂದಿದ್ದ.
ಆದ್ರೆ ಜೈಲಿನಲ್ಲಿದ್ದ ವೇಳೆಯಲ್ಲಿ ಹಿಟ್ಲರ್ ಮೀನ್ ಕ್ಯಾಂಪ್ ಎಂಬ ಪುಸ್ತಕವನ್ನ ಬರೆದಿದ್ದ. ಇತ್ತ ಹಿಟ್ಲರ್ ಬಿಡಗಡೆ ಅಸ್ಟರಲ್ಲೇ ಜರ್ಮನಿಯ ಆರ್ಥಿಕ ಸ್ಥಿತಿಯು ಸುಧಾರಣೆ ಹಂತದಲ್ಲಿತ್ತು. ಈಗ ಹಿಟ್ಲರ್ ಬಳಿ ಜನರ ಮುಂದೆ ಭಾಷಣ ಮಾಡಲು ಸರ್ಕಾರದ ವಿರುದ್ಧ ಮಾತನಾಡಲು ಕಾರಣ ಸಿಕ್ಕಿರಲಿಲ್ಲ. ಆಗ ಜನರ ನಡುವೆ ಮತ್ತೊಮ್ಮೆ ಜನಪ್ರಿಯನಾಗಲೂ ಯಾವುದಾದರೂ ಒಂದು ದಾರಿ ಹುಡುಕಿದ್ದ ಹಿಟ್ಲರ್. ಹೀಗಿರೋವಾಗಲೇ 1929 ರಲ್ಲಿ ಜರ್ಮನ್ ನ ಸೇರ್ ಮಾರ್ಕೆಟ್ ಪಾತಾಳಕ್ಕೆ ಕುಸಿದಿತ್ತು. ಲಕ್ಷಾಂತರ ಜನರು ನಿರುದ್ಯೋಗಿಗಳಾಗಿ ಬೀದಿಗೆ ಬೀಳುವಂತಾಗಿತ್ತು. ಇದೇ ಕಾರಣ ಇಟ್ಟುಕೊಂಡು ಹಿಟ್ಲರ್ ಜನರ ಮುಂದೆ ಮತ್ತೊಮ್ಮೆ ಪ್ರಚಲಿತಕ್ಕೆ ಬಂದ. ದೆಶದ ಆರ್ಥಿಕ ಸ್ಥಿತಿ ನಿರುದ್ಯೋಗ ಸಮಸ್ಯೆ ನಿವಾರಣೆಯಂತಹ ಭರವಸೆಗಳ ನೀಡುತ್ತಾ ಬಾಷಣಗಳಿಂದ ಮತ್ತೊಮ್ಮೆ ಜನರ ಮುಂದೆ ಹಿಟ್ಲರ್ ಜನಪ್ರಿಯನಾದ.
1932 ರಲ್ಲಿ ಹಿಟ್ಲರ್ ರರಾಷ್ಟ್ರಪತಿ ಚುನಾವಣೆಯಲ್ಲಿ ಸ್ಪರ್ಧೆ ಮಾಡಿ ಅಲ್ಲೂ ಹೀನಾಯವಾಗಿ ಸೋಲನುಭವಿಸಬೇಕಾಗುತ್ತೆ. ಆದ್ರೆ ಮುಂದಿನ ವರ್ಷ ಅಂದ್ರೆ 1933ರಲ್ಲಿ ಹಿಟ್ಲರ್ ಜರ್ಮನಿಯ ಚಾನ್ಸಲರ್ ಚುನಾವಣೆಯಲ್ಲಿ ಜಯ ಸಾಧಿಸಿದ. ಇತ್ತ ಕೈಗೆ ಅಧಿಕಾರ ಬರುತ್ತಿದ್ದಂತೆ ಹಿಟ್ಲರ್ ತನ್ನ ನಿಜಸ್ವರೂಪವನ್ನ ತೋರಿಸೋಕೆ ಶುರುಮಾಡಿದ್ದ. ಹಿಟ್ಲರ್ ಅಸಲಿ ಮುಖ ಜನರಿಗೆ ಅರಿವಿಗೆ ಬಂದಿತ್ತು. ಮುಂದೆ ಜರ್ಮನ್ ನ ರಾಷ್ಟ್ರಪತಿಗಳ ನಿಧನವಾದ ಬಳಿಕ ಹಿಟ್ಲರ್ ಸ್ವತಂ ತನ್ನನ್ನ ದೇಶದ ರಾಷ್ಟ್ರಪತಿಯಾಗಿ ಘೋಷಣೆ ಮಾಡಿಕೊಂಡ. ಇಲ್ಲಿಂದಾಚೆಗೆ ಹಿಟ್ಲರ್ ನ ಕ್ರೂರತ್ವಕ್ಕೆ ಜನರು ಸಾಕ್ಷಿಯಾಗುತ್ತಾ ಹೋದ್ರು. ಅಧಿಕಾರ ಬಂದ ನಂತರ ಹಿಟ್ಲರ್ ಮಾಡಿದ ಮೊದಲ ಕೆಲಸ ಸೋಷಿಯಲ್ ಡೆಮಾಕ್ರೆಟಿಕ್ ಪಕ್ಷವನ್ನ ಬ್ಯಾನ್ ಮಾಡಿದ್ದು. ಇಲ್ಲಿಂದಾಚೆಗೆ ಯಹೂದಿಗಳ ಮರಣ ಮೃದಂಗ ಮೊಳಗಿಸಿದ ಈ ಕ್ರೂರಿ ಹಿಟ್ಲರ್. ಯಹೂದಿಗಳ ಸಾವಿನ ಭಯಾನಕ ಕಾರ್ಣಾಮಗಳಿಗೆ ಸೂತ್ರ ಹೆಣೆಯುತ್ತಾ ಹೋದ. ಯಹೂದಿಗಳ ನಿರ್ಣಾಂವೇ ಏಕ ಮಾತ್ರ ಗುರಿ ಹೊಂದಿದ್ದ ಹಿಟ್ಲರ್. ಈತನ ಕ್ರೂರತ್ವಕ್ಕೆ ಲಕ್ಷಾಂತರ ಯಹೂದಿಗಳು ಜೀವ ಕಳೆದುಕೊಳ್ಳಬೇಕಾಯ್ತು. ಮುಂದೆ ಹಿಟ್ಲರ್ ತನ್ನ ಸೇನೆಯನ್ನ ಬಲಶಾಲಿ ಮಾಡುತ್ತಾ ಹೋದ. 1939ರವೇಳೆಗೆ ಈತ ತನ್ನ ನೆರೆ ರಾಷ್ಟ್ರಗಳ ಮೇಲೆಯೇ ಯುದ್ಧ ಸಾರಿದ್ದ. ದಾಳಿ ನಡೆಸಲು ಆರಂಭಿಸಿದ್ದ. ಹೀಗೆ 2ನೇ ಮಹಾಯುದ್ಧಕ್ಕೆ ನಾಂದಿ ಹಾಡಿದ್ದ ಹಿಟ್ಲರ್. ಈ ಮಹಾಯುದ್ಧದಲ್ಲಿ ಒಟ್ಟು 30 ರಾಷ್ಟ್ರಗಳು ಭಾಗವಹಿಸಿದ್ದವು. ಈ ಮಹಾಯುದ್ಧದಲ್ಲಿ ಕೋಟ್ಯಾಂತರ ಜನರ ನೆತ್ತರು ಹರಿದಿತ್ತು. ಹಿಟ್ಲರ್ ನ ಕಾರಣದಿಂದಾಗಿ ಅದೆಷ್ಟೋ ಕೋಟಿ ಮಂದಿ ತಮ್ಮ ಜೀವಗಳನ್ನೇ ಕಳೆದುಕೊಳ್ಳಬೇಕಾಯ್ತು.
ಆರಂಭದಲ್ಲಿ ಹಿಟ್ಲರ್ ನಾಜಿ ಸೇನೆಗೆ ಗೆಲುವು ಸಿಕ್ಕಿತ್ತು. ಆದ್ರೆ ಸಮಯ ಉರುಳಿದಂತೆ ಹಿಟ್ಲರ್ ನ ತಾಕತ್ತು ಕಡಿಮೆಯಾಗುತ್ತಾ ಬಂದಿತ್ತು. ಬಹುಶಃ ಹಿಟ್ಲರ್ ಗೂ ಇದರ ಅರಿವಾಗಿತ್ತು ಅನ್ಸುತ್ತೆ. ಶತ್ರುಗಳ ಸೇನೆ ಇನ್ನೇನು ತನ್ನ ಸನಿಹಕ್ಕೆ ಬರುತ್ತಿದ್ದ ಸುಳಿವು ಸಿಕ್ಕ ಹಿಟ್ಲರ್ ಕಡೆಗೆ 30 ಏಪ್ರಿಲ್ 1945ಕ್ಕೆ ಆತ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ. ಆದ್ರೆ ತಾನು ಸಾಯೋದಕ್ಕೆ ಕೇವಲ ಒಂದು ದಿನ ಹಿಂದೆಯಷ್ಟೇ ಹಿಟ್ಲರ್ ಈವಾ ಬ್ರೌನ್ ಎಂಬಾಕೆ ಜೊತೆಗೆ 2ನೇ ಮದುವೆಯಾಗಿದ್ದ. ಹಿಟ್ಲರ್ ಆತ್ಮಹತ್ಯೆ ಮಾಡಿಕೊಂಡ ಬಳಿಕ ಆತನ ಪತ್ನಿ ಸಹ ಸಾವಿಗೆ ಶರಣಾಗಿದ್ಲೂ. ಈತನ ಆತ್ಮಹತ್ಯೆ ಬಳಿಕ 2ನೇ ಮಹಾಯುದ್ಧವೂ ಮುಕ್ತಾಯಗೊಂಡಿತ್ತು.
ಒಂದಂತೂ ನಿಜ ಹಿಟ್ಲರ್ ನ ಪಾಪ ಕರ್ಮಗಳಿಂದಾಗಿ ಇಡೀ ಜಗತ್ತು ನಷ್ಟ ಅನುಭವಿಸಿದಂತಾಯ್ತು. ಕೋಟ್ಯಾಂತರ ಜನರ ಜೀವಗಳು ಹೋಗಿತ್ತು. ಹೀಗಾಗಿಯೇ ಇವತ್ತಿಗೂ ಅಡಾಲ್ಫ್ ಹಿಟ್ಲರ್ ವಿಶ್ವದ ಆಲ್ ಟೈಮ್ ಕ್ರೂರರ ಲಿಸ್ಟ್ ನಲ್ಲಿ ಮೊದಲ ಸ್ಥಾನದಲ್ಲಿ ನಿಲ್ತಾನೆ ಇದೇ ಕಾರಣಕ್ಕೆ ಆತನನ್ನ ಇಂದಿಗೂ ಜನರು ದ್ವೇಷಿಸುತ್ತಾರೆ. ಇನ್ನೂ ಈಗಿನ ಜೆನರೇಷನ್ ನ ಹಿಟ್ಲರ್ ಲಿಸ್ಟ್ ನಲ್ಲಿ ಕಿಮ್ ಜಾಂಗ್ ಉನ್ ಕೂಡ ಹಿಟ್ಲರ್ ಗೆ ಕಂಪೇರ್ ಮಾಡಬಹುದು. ಇಬ್ಬರಲ್ಲೂ ಸ್ವಾಮ್ಯತೆ ಇದೆ. ಈತ ತನ್ನ ಹುಚ್ಚಾಟದಿಂದ ದೆಶದ ಜನರ ಜೀವನ ನರಕ ಮಾಡಿದ್ದಾನೆ. ಇಡೀ ವಿಶ್ವಕ್ಕೆ ನ್ಯೂಕ್ಲಿಯರ್ ನಿಂದ ಉಡಾಯಿಸೋ ಬೆದರಿಕೆ ಹಾಕ್ತಾನೆ. ಈತನ ಹುಚ್ಚಾಟವನ್ನ ನೋಡುದ್ರೆ ಈತನನ್ನ ಹಿಟ್ಲರ್ ಗಿಂತ ಕ್ರೂರ ಎಂದ್ರೂ ತಪ್ಪಾಗೊದಿಲ್ಲ. ಇನ್ನೂ ಚೈನಾದಲ್ಲಿಯೂ ಒಂದು ರೀತಿ ಹುಚ್ಚು ಸಾಮ್ರಾಟನ ಆಡಳಿತವೇ ಇದೆ ಎಂದ್ರು ತಪ್ಪಾಗೋದಿಲ್ಲ. ಇವರೆಲ್ಲ ಒಂದು ರೀತಿ ಆಧುನಿಕ ಯುಗದ ಹಿಟ್ಲರ್ ಗಳೇ.