ವರನಿಗಾಗಿ ಜಾಹೀರಾತು… ವಧುವಿನ ಕಂಡೀಷನ್ ಕೇಳಿ ದಂಗಾದ ನೆಟ್ಟಿಗರು
ಮದುವೆ ಸಮಾರಂಭಗಳಲ್ಲಿ ಇತ್ತೀಚೆಗೆ ಸಾಕಷ್ಟು ವಿಚಿತ್ರ ಪ್ರಸಂಗಗಳು ನಡೆಯುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ವೈರಲ್ ಆಗ್ತಾಯಿರುತ್ತೆ.. ಸಾಮಾನ್ಯವಾಗಿ ವರನ ಕಡೆಯವರು ಹುಡುಗಿಯ aಕಡೆಯವರ ನಡುವೆ ಕಕೊಡುವುದು ತೆಗೆದುಕೊಳ್ಳುವ ಪದ್ದತಿ ಹಿಂದಿನಿಂದಲೂ ನಡೆದುಕೊಂಡು ಬಂದಿದೆ..
ಇನ್ನೂ ವರ ತಾನೂ ಮದುವೆ ಆಗುವ ಹುಡುಗಿ ಸುಂದರವಾಗಿರಬೇಕು, ಅಡುಗೆ ಚೆನ್ನಾಗಿ ಮಾಡಬೇಕು ಅನ್ನೋ ಗುಣಗಳನ್ನ ಹುಡುಕುತ್ತಾನೆ.. ಅದೇ ರೀರಿ ಹುಡುಗಿ ತಾನು ವರಿಸೋ ಹುಡುಗ ಹ್ಯಾಂಡ್ಸಮ್ ಆಗಿರಬೇಕು, ಒಳ್ಳೆ ಕೆಲಸದಲ್ಲಿ ಇರಬೇಕು ಓದಿರಬೇಕು ಹೀಗೆಲ್ಲಾ ಆಸೆಗಳನ್ನ ಇಟ್ಟುಕೊಂಡಿರುತ್ತಾರೆ…
ಆದ್ರೆ ಇಲ್ಲೊಬ್ಬ ವಧು ವರ ಬೇಕಾಗಿದ್ದಾನೆ ಎಂದು ನೀಡಿರುವ ಜಾಹೀರಾತಿನಲ್ಲಿ ಆಕೆ ಕೇಳಿರುವ ಗುಣಗಳನ್ನ ನೋಡಿ ನೆಟ್ಟಿಗರು ಶಾಕ್ ಆಗಿದ್ದಾರೆ.. ಹೌದು.. ಉತ್ತಮ ದೇಹ ಹೊಂದಿರುವ ಹಾಗೂ ಏಕೈಕ ಪುತ್ರನಾಗಿರೋ, ಅಡುಗೆ ಮಾಡುವ ವರ ಬೇಕಾಗಿದ್ದಾನೆ ಎಂದು ವಧು ಜಾಹೀರಾತು ನೀಡಿದ್ದು ಸೋಶಿಯಲ್ ಮೀಡಿಯಾದಲ್ಲಿ ಸಂಚನಲ ಸೃಷ್ಟಿ ಮಾಡಿದೆ.
ಸ್ತ್ರೀ ಸಮಾನತಾವಾದಿ, ಶಾರ್ಟ್ ಹೇರ್, ವಿದ್ಯಾವಂತೆ, ಕ್ಯಾಪಿಟಲಿಸಂ ವಿರೋಧಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ 30 ವರ್ಷದ ಮಹಿಳೆಗೆ ಸುಂದರವಾದ ಸದೃಢ ದೇಹ ಹೊಂದಿರುವ 25-28 ವರ್ಷದ ವರ ಬೇಕಾಗಿದ್ದಾನೆ. ವ್ಯಾಪರ, ಬಂಗಲೆ, ಕನಿಷ್ಠ 20 ಎಕರೆ ಫಾರ್ಮ್ ಹೌಸ್ ಇರೋ ಏಕೈಕ ಪುತ್ರನಾಗಿರೋ ಯುವಕನಾಗಿರಬೇಕು. ಆತನಿಗೆ ಅಡುಗೆ ಮಾಡುವುದು ಬರಬೇಕು. ಆಸಕ್ತಿ ಹೊಂದಿರುವವರು ಸಂಪರ್ಕಿಸಿ ಎಂದು ಪತ್ರಿಕೆಯೊಂದರಲ್ಲಿ ವಧು-ವರ ಬೇಕಾಗಿದ್ದಾರೆ ಎನ್ನುವ ಕಾಲಂನಲ್ಲಿ ಪ್ರಕಟವಾಗಿರುವ ಜಾಹೀರಾತಾಗಿದೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತದೆ.
ಅಷ್ಟಕ್ಕೂ ಆಗಿರೋದೇನು..?
ಸಾಕ್ಷಿ ಎಂಬ ಯುವತಿ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಆಕೆಯ ಸಹೋದರ ಸ್ನೇಹಿತರೊಂದಿಗೆ ಸೇರಿ ಈ ವ್ಯಂಗ್ಯಭರಿತವಾದ ಜಾಹೀರಾತು ನೀಡಿದ್ದಾರೆ. ಈ ಜಾಹೀರಾತು ನೀಡಲು 13 ಸಾವಿರ ರೂಪಾಯಿ ಖರ್ಚು ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಪುರುಷರು ವಧುವನ್ನು ಹುಡುಕುವಾಗ ಹುಡುಗಿ ಎತ್ತರವಾಗಿರಬೇಕು, ತೆಳ್ಳಗ ಇರಬೇಕು, ಸುಂದರವಾಗಿರಬೇಕು ಎಂದು ಹಲವು ರೀತಿಯಲ್ಲಿ ಷರತ್ತು ಹಾಕುತ್ತಾರೆ. ತಮ್ಮ ಸಂಪತ್ತಿನ ಬಗ್ಗೆ ಹೆಮ್ಮೆ ಪಡುತ್ತಾರೆ. ಆದರೆ ಅದನ್ನೇ ವಧುವಿನ ಕಡೆಯವರು ಮಾಡಿದಾಗ ಜೀರ್ಣಿಸಿಕೊಳ್ಳಲು ಆಗಲ್ಲ ಎಂದು ಹೇಳುವ ಮೂಲಕ ಮದುವೆಯಲ್ಲಿನ ಕೆಲ ನೆಗೆಟಿವ್ ವಿಚಾರಗಳನ್ನ ತಮ್ಮದೇ ಶೈಲಿಯಲ್ಲಿ ವಿರೋಧಿಸಿ ನೆಟ್ಟಿಗರ ಮನಗೆದ್ದಿದ್ದಾರೆ.