ಭಾರತದ ವಿಮಾನಗಳಿಗೆ ನಿರ್ಬಂಧ ಹೇರಿದ ಈ ದೇಶಗಳು..!

1 min read

ಭಾರತದ ವಿಮಾನಗಳಿಗೆ ನಿರ್ಬಂಧ ಹೇರಿದ ಈ ದೇಶಗಳು..!

ನವದೆಹಲಿ : ವಿಶ್ವಾದ್ಯಂತ ಅದ್ರಲ್ಲೂ ಭಾರತದಲ್ಲಿ ಕೊರೊನಾ ಹಾವಳಿ ಭಯನಾಕವಾಗಿರೋದ್ರಿಂದ ಹಲವಾರು ದೇಶಗಳಲ್ಲಿ ಬಾರತದ ವಿಮಾನಗಳಿಗೆ ನಿರ್ಬಂಧ ವಿಧಿಸಿ ಅಲ್ಲಿನ ಸರ್ಕಾರಗಳು ಆದೇಶ ಹೊರಡಿಸಿವೆ. ಅದ್ರಮತೆ ಕೆನಡಾದಲ್ಲಿ ಕೇವಲ ಭಾರತವಷ್ಟೇ ಅಲ್ದೇ ಪಾಕಿಸ್ತಾನದ ವಿಮಾನಗಳ ಸಂಚಾರಕ್ಕೆ 30 ದಿನಗಳ ಕಾಲ ನಿರ್ಬಂಧ ಹೇರಲಾಗಿದೆ.

ನಿನ್ನೆ ಮಧ್ಯರಾತ್ರಿಯಿಂದಲೇ ಜಾರಿಗೆ ಬರುವಂತೆ ಭಾರತ ಮತ್ತು ಪಾಕ್ನಿಂ ದ ಆಗಮಿಸುವ ಎಲ್ಲಾ ಪ್ರಯಾಣಿಕ ವಿಮಾನಯಾನವನ್ನು ರದ್ದುಗೊಳಿಸಲಾಗಿದೆ ಎಂದು ಕೆನಡಾ ಸಾರಿಗೆ ಸಚಿವ ಓಮರ್ ಆಲ್ಘಾಸಬ್ರಾ ತಿಳಿಸಿದ್ದಾರೆ.

ಭಾರತದಲ್ಲಿ ನಿನ್ನೆ ವಿಶ್ವದಾಖಲೆಯ 3.14 ಲಕ್ಷ ಮಂದಿಗೆ ಸೋಂಕು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಇಂತಹ ಕ್ರಮ ಕೈಗೊಳ್ಳಲಾಗಿದೆ ಆದರೆ, ಕಾರ್ಗೋ ವಿಮಾನಯಾನಕ್ಕೆ ಯಾವುದೆ ನಿರ್ಬಂಧವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಲಂಡನ್ನಿನ ಹೀಥ್ರೂ ಏರ್ಪೋರ್ಟ್ಗೆ ಆಗಮಿಸುವ ಭಾರತದ ಹೆಚ್ಚುವರಿ ವಿಮಾನಗಳಿಗೆ ಇಂಗ್ಲೆಂಡ್ ಸರ್ಕಾರ  ನಿರ್ಬಂಧ ಹೇರಿದೆ. ಅಲ್ಲದೆ, ವಿಮಾನ ಸಂಚಾರಕ್ಕೆ ಸಂಬಂಧಿಸಿದಂತೆ ಇಂಗ್ಲೆಂಡ್ನಹೌಸ್ಆಫ್ ಕಾಮನ್ಸ್, ಭಾರತವನ್ನು ಕೆಂಪು ಪಟ್ಟಿಗೆ ಸೇರಿಸಲು ನಿರ್ಧರಿಸಿದೆ. ಭಾರತ ಸೇರಿದಂತೆ 20 ರಾಷ್ಟ್ರಗಳ ವಿಮಾನ ಸಂಚಾರಕ್ಕೆ ಯುಎಇ ನಿರ್ಬಂಧ ವಿಸ್ತರಿಸಿದೆ. ಈಗಾಗಲೇ ಯುಎಇ ಫೆಬ್ರವರಿಯಲ್ಲೇ ಕೆಲವು ರಾಷ್ಟ್ರಗಳ ವಿಮಾನಗಳಿಗೆ ನಿರ್ಬಂಧ ವಿಧಿಸಿತ್ತು. ಮೇ 17ರವರೆಗೆ ಈ ಆದೇಶವಿರಲಿದೆ.

57 ಗಂಟೆ ಕರುನಾಡು ಲಾಕ್ : ವೀಕೆಂಡ್ ನಿಯಮ ಫುಲ್ ಟೈಟ್

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd