ಅಫ್ಗಾನ್ ನಲ್ಲಿ ಷರಿಯಾ ಕಾನೂನು – ಈ ಕಾನೂನಿನ ಅಡಿಯಲ್ಲಿ ಅಪರಾಧಗಳು ಯಾವುವು..?
ಷರಿಯಾ ಕಾನೂನಿನ ಪ್ರಕಾರ ಅಪರಾಧಗಳನ್ನ 3 ಪ್ರಕಾರಗಳಾಗಿ ವರ್ಗೀಕರಿಸಲಾಗಿದೆ.
ತಜೀರ್ ಅಪರಾಧಗಳು – ಇವು ಅತ್ಯಂತ ಗಂಭೀರ ಅಪರಾಧಗಳಾಗಿದ್ದು, ಶಿಕ್ಷೆ ನೀಡುವುದು ನ್ಯಾಯಾಧೀಶರ ವಿವೇಚನೆಗೆ ಬಿಟ್ಟಿದ್ದಾಗಿರುತ್ತೆ. ಸಂಬಂಧಿಕರಲ್ಲಿ ಕಳ್ಳತನ ಅಥವ ಕಳ್ಳತನಕ್ಕೆ ಯತ್ನಿಸಿ ವಿಫಲಗೊಂಡಿರುವಂತಹ ಅಪರಾಧಗಳನ್ನ ಇದರ ಅಡಿ ಪರಿಗಣಿಸಲಾಗುತ್ತದೆ.
ಕಿಸಾಸ್ ಅಪರಾಧಗಳು : ಈ ಅಪರಾಧಗಳ ಅಡಿ ಅಪರಾಧಿಯನ್ನೂ ಕೂಡ ಸಂತ್ರಸ್ತ ಯಾವ ತೊಂದರೆ ಅನುಭವಿರುತ್ತಾರೋ ಅದೇ ರೀತಿಯಾದ ತೊಂದರೆಗೆ ಸಿಲುಕಿಸಿ ಶಿಕ್ಷೆ ವಿಧಿಸಲಾಗುತ್ತದೆ.. ಕಿಸಾಸ್ ಎಂಬುದು ಇಸ್ಲಾಮಿಕ್ ಪದವಾಗಿದ್ದು, “ಕಣ್ಣಿಗೆ ಕಣ್ಣು” ಎಂದು ಅರ್ಥೈಸಲಾಗುತ್ತದೆ. ಉದಾಹರಣೆಗೆ ಕೊಲೆ ಪ್ರಕರಣದಲ್ಲಿ ನ್ಯಾಯಾಲಯವು ಅಪರಾಧಿಗೆ ಮರಣ ದಂಡನೆ ಶಿಕ್ಷೆ ವಿಧಿಸಿದ ನಂತರ ಆತನ ಕೊಲೆ ಮಾಡುವ ಹಕ್ಕು ನೀಡಿದ್ರೆ , ಆತನನ್ನ ಕ್ರೂರವಾಗಿಯೂ ಕೊಲೆ ಮಾಡಬಹುದಾಗಿದೆ. 
ಹುಡಾಡ್ ಅಪರಾಧಗಳು : ಈ ಅಪರಾಧಗಳನ್ನ ಅತ್ಯಂತ ಗಂಭೀರವೆಂದು ಪರಿಗಣಿಸಲಾಗಿದೆ.. ಇದನ್ನ ದೇವರ ವಿರುದ್ಧದ ಅಪರಾಧಗಳೆಂದು ಪರಿಗಣಿಸಿ ಕಠಿಣ ಶಿಕ್ಷೆಗೆ ಒಳಪಡಿಸಲಾಗುತ್ತದೆ. ಅಲ್ಲದೇ ವ್ಯಭಿಚಾರ, ಕಾನೂನುಬಾಹಿರ ಲೈಂಗಿಕ ಸಂಭೋಗದ ಸುಳ್ಳು ಆರೋಪ, ವೈನ್ ಅಥವಾ ಸಾಮಾನ್ಯ ಮದ್ಯಪಾನ ಮಾಡಿದರೆ , ಕಳ್ಳತನ ಮತ್ತು ಹೆದ್ದಾರಿ ದರೋಡೆ ಮಾಡುವಂತಹ ಅಪರಾಧಗಳನ್ನ ಇದರ ಅಡಿ ಉಲ್ಲೇಖಿಸಲಾಗುತ್ತದೆ. ಅಲ್ಲದೇ ಇದರ ಅಡಿ ಅಪರಾಧಿ ಮೇಲೆ ಕಲ್ಲೆಸೆದು ಸಾಯಿಸುವುದು, ಅವರನ್ನ ಕತ್ತರಿಸುವುದು , ಗಡಿಪಾರು ಮಾಡಬಹುದು ಅಥವಾ ಗಲ್ಲಿಗೇರಿಸಬಹುದಾಗಿದೆ.
ಷರಿಯಾ ಎಂದ್ರೆ ಏನು..? ಅರೇಬಿಕ್ ನಲ್ಲಿ ಷರಿಯಾ ಎಂದ್ರೆ “ದಾರಿ” ಎಂದರ್ಥ. ಇದು ಕಾನೂನಿನ ಯಾವುದೇ ಭಾಗವನ್ನೂ ಉಲ್ಲೇಖಿಸುವುದಿಲ್ಲ. ಇದು ಕುರಾನ್ ನಲ್ಲಿನ ನೈತಿಕ ಅಂಶಗಳು , ನೈತಿಕ ತತ್ವಗಳನ್ನ ಆಧರಿಸಿದ್ದಾಗಿದೆ. ಮಾರಲ್ ಎತಿಕ್ಸ್ ಹಾಗೂ ಮೊಹಮ್ಮದ್ ( ದೇವದೂತ ) ಅವರ ಹೇಳಿಕೆಗಳು ಮತ್ತು ಅವರ ಆಚರಣೆಗಳನ್ನ ಆಧರಿಸಿದೆ.

ಇದು ಇಜ್ಮಾ, ಮುಸ್ಲಿಂ ವಿದ್ವಾಂಸರ ಒಮ್ಮತ, ಮತ್ತು ಕಿಯಾಸ್, ಸಾದೃಶ್ಯದ ಮೂಲಕ ತಾರ್ಕಿಕತೆಯನ್ನು ಪಡೆಯುತ್ತದೆ. ಎಲ್ಲಾ ಕ್ರಿಯೆಗಳನ್ನು ಕಡ್ಡಾಯ, ಶಿಫಾರಸು, ಅನುಮತಿ ಅಥವಾ ಇಷ್ಟವಿಲ್ಲ ಎಂದು ವರ್ಗೀಕರಿಸಲಾಗಿದೆ.
ಪ್ರಾರ್ಥನೆ, ಉಪವಾಸ ಮತ್ತು ಬಡವರಿಗೆ ದೇಣಿಗೆ ಸೇರಿದಂತೆ ಎಲ್ಲಾ ಮುಸ್ಲಿಮರು ಪಾಲಿಸಬೇಕಾದ ಜೀವನ ಸಂಹಿತೆಯಾಗಿ ಶರಿಯಾ ಕಾರ್ಯನಿರ್ವಹಿಸುತ್ತದೆ. ಇದು ಮುಸ್ಲಿಮರು ದೇವರ ಇಚ್ಛೆಯಂತೆ ತಮ್ಮ ಜೀವನದ ಪ್ರತಿಯೊಂದು ಅಂಶವನ್ನು ಹೇಗೆ ನಡೆಸಬೇಕು ಎಂಬುದನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುವ ಗುರಿಯನ್ನು ಹೊಂದಿದೆ.
ಶರಿಯಾ ಒಂದು ಶಾಸನಗಳ ಪುಸ್ತಕವಲ್ಲ ಅಥವಾ ಸರ್ಕಾರವು ವಿಧಿಸಿದ ನ್ಯಾಯಾಂಗ ಪೂರ್ವನಿದರ್ಶನವಲ್ಲ, ಮತ್ತು ಇದು ನ್ಯಾಯಾಲಯದಲ್ಲಿ ತೀರ್ಮಾನಿಸಲ್ಪಟ್ಟ ನಿಯಮಾವಳಿಗಳ ಗುಂಪಲ್ಲ. ಆದ್ರೆ ಇದು ಜನಪ್ರಿಯ ಅಭಿಪ್ರಾಯಕ್ಕೆ ವಿರುದ್ಧವಾಗಿದೆ. ಅಲ್ಲದೇ ಕೆಲ ಮೂಲಗಳ ಪ್ರಕಾರ ಈ ಕಾನೂನಿನ ಅಡಿ ಎಲ್ಲಾ ರೀತಿಯಾದ ಮನರಂಜನೆಗಳಿಂದ ಜನರು ವಂಚಿತರಾಗಲಿದ್ದಾರೆ.. ಸಂಗೀತ , ಟಿವಿ , ವಿಡಿಯೋಗಳನ್ನ ಬ್ಯಾನ್ ಮಾಡಲಾಗುವುದು.. ಜೊತೆಗೆ ಗಡ್ಡ ಕತ್ತರಿಸುವುದು , ದಿನಕ್ಕೆ 5 ಬಾರಿ ದೇವರಿಗೆ ಪ್ರಾರ್ಥನೆ ಸಲ್ಲಿಸಲು ವಿಫಲರಾದ ಪುರುಷರ ಮೇಲೆ ಹಲ್ಲೆ ಮಾಡುವುದು ಒಳಗೊಂಡಿದೆ..
ಷರಿಯಾವನ್ನು ವಿವಿಧ ಹಂತಗಳಲ್ಲಿ ಮತ್ತು ಆಚರಣೆಯಲ್ಲಿ ಹೆಚ್ಚಿನ ವೈವಿಧ್ಯತೆಯೊಂದಿಗೆ ಅನ್ವಯಿಸಲಾಗಿದೆ – ಪ್ರತ್ಯೇಕ ಮುಸ್ಲಿಮರು ಮತ್ತು ಪ್ರಧಾನವಾಗಿ ಮುಸ್ಲಿಂ ದೇಶಗಳು. ಸೌದಿ ಅರೇಬಿಯಾ, ಕತಾರ್ ಮತ್ತು ಇರಾನ್ ನಂತಹ ದೇಶಗಳು ಇದನ್ನು ಅನುಸರಿಸುತ್ತಿವೆ.
ಅಫ್ಗಾನ್ ನಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಇರಲ್ಲ – ಷರಿಯಾ ಕಾನೂನು ಜಾರಿ..!
ಪಶ್ಚಿಮ ಬಂಗಾಳ : ಚುನಾವಣೋತ್ತರ ಹಿಂಸಾಚಾರ – ಸಿಬಿಐ ತನಿಖೆಗೆ ಹೈ ಕೋರ್ಟ್ ಆದೇಶ








