ತಾಲಿಬಾನ್ ವಿರೋಧಿಸಿದ ತಂದೆ – ಮಗುವನ್ನ ಗಲ್ಲಿಗೇರಿಸಿದ ಪಾಪಿಗಳು
ಅಫ್ಗಾನಿಸ್ತಾನ : ತಾಲಿಬಾನ್ ಉಗ್ರ ನರರಾಕ್ಷಸರ ಕೈಕೆಳಗೆ ಸಿಲುಕಿ ತಾಲಿಬಾನ್ ಒದ್ದಾಡ್ತಿದೆ. ಈ ನಡುವೆ ತಾಲಿಬಾನ್ ಅನ್ನ ವಿರೋಧಿಸಿದ ವ್ಯಕ್ತಿಯ ಪುಟ್ಟ ಮಗುವನ್ನ ಉಗ್ರರು ಕ್ರೂರವಾಗಿ ಗಲ್ಲಿಗೆರಿಸಿ ರಾಕ್ಷಸತ್ವ ಮೆರೆದಿದ್ದಾರೆ. ಇಂತಹದೊಂದು ಘಟನೆ ತಖರ್ ಪ್ರಾಂತ್ಯದಲ್ಲಿ ನಡೆದಿದೆ. ತಾಲಿಬಾನ್ ಉಗ್ರರು ಅಫ್ಘಾನಿಸ್ತಾನದ ತಖರ್ ಪ್ರಾಂತ್ಯದಲ್ಲಿ, ಮಗುವಿನ ತಂದೆ ಅಫ್ಘಾನಿಸ್ತಾನದ ಪ್ರತಿರೋಧ ಪಡೆಗಳ ಭಾಗವಾಗಿರಬಹುದು ಎಂದು ಶಂಕಿಸಿ ಮಗುವನ್ನು ಕ್ರೂರವಾಗಿ ಗಲ್ಲಿಗೇರಿಸಿದ್ದಾರೆ.
ಒಟ್ಟಾರೆ ನಾವು ಬದಲಾಗಿದ್ದೇವೆ ಅಂತ ತಾಲಿಬಾನಿಗಳು ಬರಿ ಬಾಯಿ ಮಾತಿನಲ್ಲಿ ಹೇಳ್ತಾರೆ ಹೊರತು ರಾಕ್ಷಸರು ರಾಕ್ಷಸರೇ ಅನ್ನೋದನ್ನ ಸಾಬೀತು ಮಾಉಡತ್ತಲೇ ಇದ್ದಾರೆ. ಒಂದೆಡೆ ಮಹಿಳೆಯರ ಸಂಪೂರ್ಣ ಸ್ವಾತಂತ್ರ ಕಿತ್ತುಕೊಂಡು ಎಲ್ಲೆಡೆ ಮಹಿಳೆಯರ ಪ್ರವೇಶ ಬಂದ್ ಮಾಡಿರುವ ಉಗ್ರರು , ಇನ್ನೊಂದೆಡೆ ಜನರನ್ನ ಸಾಯಿಸುವ ಪರ್ವ ಮುಂದುವರೆಸಿದ್ದಾರೆ.