Afgan Crisis : ಅಫ್ಗಾನ್ ನಲ್ಲಿ ಆಹಾರಕ್ಕಾಗಿ ಮಕ್ಕಳು , ಅಂಗಾಂಗಳ ಮಾರಾಟ….
ತಾಲಿಬಾನಿಗಳು ಅಫ್ಗಾನ್ ಕೈವಶ ಮಾಡಿಕೊಂಡಾಗಿನಿಂದಲೂ ಅಲ್ಲಿನ ಜನ ನರಕದಲ್ಲಿ ಬದುಕುತ್ತಿದ್ದಾರೆ.. ಹಕ್ಕುಚ್ಯುತಿ , ಮಹಿಳೆಯರ ಸ್ವಾತಂತ್ರ್ಯ ಕಸಿದಿರುವುದು ಒಲಂದೆಡೆಯಾದ್ರೆ ಆರ್ಥಿಕ ಪರಿಸ್ಥಿತಿ ಪಾತಾಳಕ್ಕೆ ಕುಸಿದಿರುವುದು ಇನ್ನೊಂದೆಡೆ.. ಇದೀಗ ಇಲ್ಲಿನ ಜನರು ಆಹಾರಕ್ಕಾಗಿ ತಮ್ಮ ಮಕ್ಕಳನ್ನು ಮಾರಾಟ ಮಾಡುವ ಪರಿಸ್ಥಿತಿಗೆ ತಲುಪಿದ್ದಾರೆ. ಅಲ್ಲದೇ ತಮ್ಮ ದೇಹದ ಅಂಗಾಂಗಗಳನ್ನು ಮಾರುತ್ತಿದ್ದಾರೆ.. ಹೀಗೆಂದು ವಿಶ್ವ ಆಹಾರ ಕಾರ್ಯಕ್ರಮದ ಯುಎನ್ ಮುಖ್ಯಸ್ಥರಾದ ಡೇವಿಡ್ ಬೇಸ್ಲಿ ಕಳವಳ ವ್ಯಕ್ತಪಡಿಸಿದ್ದಾರೆ.
ಅಫ್ಘಾನಿಸ್ತಾನದಲ್ಲಿ ಅರ್ಧದಷ್ಟು ಜನಸಂಖ್ಯೆಯು ಹಸಿವಿನಿಂದ ಬಳಲುತ್ತಿದ್ದಾರೆಂದು ತಿಳಿಸಿ , ಜಾಗತಿಕ ಸಮುದಾಯವು ನೆರವು ನೀಡಲು ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ.
afganisthan , taliban , economic crisis, saakshatv
ಸಂಘರ್ಷ , ಪ್ರಹಾರ ಬರದಂತಹ ಸಮಸ್ಯೆಗಳಿಂದ ಅಫ್ಗಾನ್ ನಲ್ಲಿ ಸುಮಾರು 2.4 ಕೋಟಿ ಜನರು ಆಹಾರ ಅಭದ್ರತೆಯಿಂದ ನರಳುತ್ತಿದ್ದಾರೆ. ಚಳಿಗಾಲದ ಪರಿಸ್ಥಿತಿಯಲ್ಲಿ ದೇಶದ ಅರ್ಧದಷ್ಟು ಜನರು ಕ್ಷಾಮವನ್ನು ಎದುರಿಸುತ್ತಿದ್ದಾರೆ. ಈ ವರ್ಷದ ಅಂತ್ಯದ ವೇಳೆಗೆ ಶೇ.97ರಷ್ಟು ಮಂದಿ ಬಡತನ ರೇಖೆಗಿಂತ ಕೆಳಗೆ ಬೀಳಬಹುದು ಎಂದು ಅಭಿಪ್ರಾಯ ಪಟ್ಟಿದ್ದಾರೆ..