ನರಕ’ದಲ್ಲಿ ಬಾಲಕಿಯರ ಮತ್ತೊಂದು ಸ್ವಾತಂತ್ರ್ಯ ಕಸಿದ ತಾಲಿಬಾನ್..!
ಸ್ಮಶಾಣದಂತಾಗಿರುವ ಅಫ್ಘಾನಿಸ್ತಾನದಲ್ಲಿ ಹಿಡಿತ ಸಾಧಿಸಿರುವ ತಾಲಿಬಾನ್ ರಾಕ್ಷಸರ ಕೈ ಕೆಳಗೆ ಸಿಲುಕಿ ಜನರು ಕ್ಷಣಕ್ಷಣಕ್ಕೂ ಸಾಯುವಂತಾಗಿದೆ. ಅಫ್ಗಾನಿಸ್ತಾನದಲ್ಲಿ ತನ್ನ ಸೇನೆ ಹಿಂಪಡೆಯುವ ಅಮೆರಿಕಾ ನಿರ್ಧಾರದಿಂದಾಗಿ ಬಾಲ ಮುದುರಿಕೊಂಡು ಮೂಲೆಯಲ್ಲಿದ್ದ ತಾಲಿಬಾನಿಗಳು ಇಡಿ ಅಫ್ಗಾನ್ ದೇಶವನ್ನೇ ಸ್ಮಶಾಣ ಮಾಡಿ ಜನರಿಗೆ ನರಕ ದರ್ಶನ ಮಾಡಿಸುತ್ತಿದ್ದಾರೆ..
ಈ ನರರಾಕ್ಷಸರಿಂದಾಗಿ ಹೆಚ್ಚು ಸಂಕಷ್ಟಕ್ಕೆ ಸಿಲುಕಿರುವುದು ಮಹಿಳೆಯರೇ.. ನಾವು ಬದಲಾಗಿದ್ದೇವೆ, ಮಹಿಳೆಯರ ಹಕ್ಕನ್ನ ಗೌರವಿಸುತ್ತೇವೆ ಎಂದು ಹೇಳಿಕೊಂಡಿದ್ದ ತಾಲಿಬಾನಿಗಳು ಒಂದೊಂದಾಗೇ ಮಹಿಳೆಯರ ಹಕ್ಕನ್ನ ಕಸಿಯುತ್ತಿದ್ದಾರೆ.. ಮೊದಲಿಗೆ ಸರ್ಕಾರಿ ಮಾಧ್ಯಮಗಳಲ್ಲಿ ಮಹಿಳೆಯರನ್ನ ಕೆಸಲದಿಂದ ಕಿತ್ತೊಗೆದ ಬಗ್ಗೆ ಸುದ್ದಿಯಾಯ್ತು. ನಂತರ ಕಂದಹಾರ್ ಪ್ರಾಂತ್ಯದಲ್ಲಿ ಸುದ್ದಿ ವಾಹಿನಿಗಳು , ಸಂಗೀತವಿರಲಿ ಯಾವುದ್ರಲ್ಲೂ ಮಹಿಳೆಯರ ಧ್ವನಿ ಕೇಳಬಾರದೆಂದು ಆದೇಶ ನೀಡಿದ್ರು..
ತಾಲಿಬಾನ್ ನಲ್ಲಿ ಮಹಿಳೆಯರಿಗೆ ನರಕ – ಟಿವಿ – ರೇಡಿಯೋಗಳಲ್ಲೂ ಮಹಿಳೆಯರ ಧ್ವನಿ ಕೇಳುವಂತಿಲ್ಲ..!
ಇದೀಗ ಮತ್ತೊಂದು ಹೊಸ ಆದೇಶ ಹೊರಡಿಸಿದ್ದಾರೆ.. ಹೌದು ಈ ಆದೇಶದಂತೆ ಹುಡುಗರು , ಹುಡುಗಿಯರು ಶಾಲೆಗಳಲ್ಲಿ ಒಟ್ಟಾಗಿ ಓದುವಂತಿಲ್ಲ.. ವಿದ್ಯಾರ್ಥಿನಿಯರಿಗೆ ಪುರುಷ ಶಿಕ್ಷಕರು ಪಾಠ ಮಾಡುವ ಹಾಗಿಲ್ಲ. ಕಡ್ಡಾಯವಾಗಿ ಮಹಿಳಾ ಶಿಕ್ಷಕಿಯರೇ ಪಾಠ ಮಾಡಬೇಕಿದೆ.








