ಯುದ್ಧ ಪೀಡಿತ ಅಫ್ಘಾನ್ನಲ್ಲಿ ಹೆಚ್ಚಾದ ಮಾನವೀಯ ಬಿಕ್ಕಟ್ಟು – ವಿಶ್ವಸಂಸ್ಥೆ ಕಳವಳ
ಯುದ್ಧಪೀಡಿತ ಅಫ್ಘಾನ್ನಲ್ಲಿ ಅಭದ್ರತೆ ಮತ್ತು ಹಿಂಸಾಚಾರದ ಕಾರಣದಿಂದಾಗಿ ಈ ವರ್ಷದ ಜನವರಿಯಿಂದ ಇಲ್ಲಿಯವರೆಗೆ ಹೊಸದಾಗಿ 2.70 ಲಕ್ಷ ಅಫ್ಘಾನ್ ಜನರು ದೇಶದಿಂದ ಸ್ಥಳಾಂತರಗೊಂಡಿರುವುದಾಗಿ ವಿಶ್ವಸಂಸ್ಥೆ ತಿಳಿಸಿದೆ.. ಅಲ್ಲದೇ ನಿರಾಶ್ರಿತರ ಆಯೋಗ ಅಭದ್ರತೆಯ ಕಾರಣದ ಅಫ್ಗಾನಿಸ್ತಾನದಲ್ಲಿ ಮಾನವೀಯತೆಯ ಬಿಕ್ಕಟ್ಟು ತೀವ್ರವಾಗುವ ಸಾಧ್ಯತೆ ಕುರಿತು ಎಚ್ಚರಿಕೆ ನೀಡಿದೆ.
ಅಫ್ಗಾನಿಸ್ತಾನದಿಂದ ಅಮೆರಿಕ ತನ್ನ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳಲು ಆರಂಭಿಸಿದ ನಂತರ, ತಾಲಿಬಾನಿಗಳು ವೇಗವಾಗಿ ಅಫ್ಘಾನ್ ನ ಹೆಚ್ಚಿನ ಪ್ರದೇಶಗಳನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತಿರುವ ಕಾರಣ, ಅಲ್ಲಿ ಅಭದ್ರತೆಯ ವಾತಾವರಣ ಸೃಷ್ಟಿಯಾಗುತ್ತಿದೆ. ಸಂಘರ್ಷಗಳು ಹೆಚ್ಚಾಗುತ್ತಿರುವ ಕಾರಣ ನಾಗರಿಕರು ಸಂಕಷ್ಟ ಎದುರಿಸುತ್ತಿದ್ದು, ನಾಗರಿಕರ ಸ್ಥಳಾಂತರವೂ ಹೆಚ್ಚುತ್ತಿದೆ. ಇದು ಅಫ್ಘಾನಿಸ್ತಾನದಲ್ಲಿ ಮಾನವೀಯ ಬಿಕ್ಕಟ್ಟು ತೀವ್ರವಾಗುತ್ತಿರುವುದರ ಎಚ್ಚರಿಕೆಯ ಗಂಟೆಯಾಗಿದೆ ಎಂದು ವಿಶ್ವಸಂಸ್ಥೆಯ ನಿರಾಶ್ರಿತರ ಸಂಸ್ಥೆಯ ಹೈ ಕಮಿಷನರ್ ತಿಳಿಸಿದ್ದಾರೆ.