ತಾಲಿಬಾನ್ ನಲ್ಲಿ ಮಹಿಳೆಯರಿಗೆ ನರಕ – ಟಿವಿ – ರೇಡಿಯೋಗಳಲ್ಲೂ ಮಹಿಳೆಯರ ಧ್ವನಿ ಕೇಳುವಂತಿಲ್ಲ..!
ಅಫ್ಗಾನ್ : ಸ್ಮಶಾಣದಂತಾಗಿರುವ ಅಫ್ಘಾನಿಸ್ತಾನದಲ್ಲಿ ಹಿಡಿತ ಸಾಧಿಸಿರುವ ತಾಲಿಬಾನ್ ರಾಕ್ಷಸರ ಕೈ ಕೆಳಗೆ ಸಿಲುಕಿ ಜನರು ಕ್ಷಣಕ್ಷಣಕ್ಕೂ ಸಾಯುವಂತಾಗಿದೆ. ಅಫ್ಗಾನಿಸ್ತಾನದಲ್ಲಿ ತನ್ನ ಸೇನೆ ಹಿಂಪಡೆಯುವ ಅಮೆರಿಕಾ ನಿರ್ಧಾರದಿಂದಾಗಿ ಬಾಲ ಮುದುರಿಕೊಂಡು ಮೂಲೆಯಲ್ಲಿದ್ದ ತಾಲಿಬಾನಿಗಳು ಇಡಿ ಅಫ್ಗಾನ್ ದೇಶವನ್ನೇ ಸ್ಮಶಾಣ ಮಾಡಿ ಜನರಿಗೆ ನರಕ ದರ್ಶನ ಮಾಡಿಸುತ್ತಿದ್ದಾರೆ..
ತಾಲಿಬಾನ್ ರಾಕ್ಷಸರಿಂದ ಅತಿ ಹೆಚ್ಚು ಸಮಸ್ಯೆ ಅನುಭವಿಸುತ್ತಿರುವುದು ಅಲ್ಲಿನ ಮಹಿಳೆಯರು. ಮಹಿಳೆಯರಿಗೆ ಯಾವುದೊಂದಕ್ಕೂ ಸ್ವಾತಂತ್ರ್ಯ ಇಲ್ಲ. ಇದೀಗ ಇದೀಗ ಹೊಸ ನಿಯಮಗಳನ್ನು ಜಾರಿಗೊಳಿಸುತ್ತಿದ್ದು, ಸಂಗೀತ, ಟಿವಿ ಮತ್ತು ರೇಡಿಯೋಗಳಲ್ಲಿಯೂ ಕೂಡ ಮಹಿಳೆಯರ ಧ್ವನಿ ಪ್ರಸಾರಕ್ಕೆ ನಿರ್ಬಂಧ ಹೇರಿ ತಾಲಿಬಾನ್ ಆದೇಶಿಸಿದೆ.
ಅಫ್ಘಾನಿಸ್ಥಾನದ ಕಂದಹಾರ್ ಪ್ರಾಂತ್ಯದಲ್ಲಿ ತಾಲಿಬಾನ್ ಈ ಆದೇಶ ಹೊರಡಿಸಿದೆ. ಆಗಸ್ಟ್ 15 ರಂದು ತಾಲಿಬಾನ್ ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ನಂತರ ಕೆಲವು ಮಾಧ್ಯಮಗಳು ತಮ್ಮ ಮಹಿಳಾ ಆಯಂಕರ್‌ಗಳನ್ನು ತೆಗೆದುಹಾಕಿತ್ತು. ಇದ್ರ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಮಹಿಳೆಯರಿಗೆ ಕೆಲಸ ಮುಂದುವರಿಸಲು ಅವಕಾಶ ನೀಡುವುದಾಗಿ ಮತ್ತು ಇಸ್ಲಾಮಿಕ್ ಕಾನೂನಿನ ಅಡಿಯಲ್ಲಿ ಅವರಿಗೆ ಅಧ್ಯಯನ ಮಾಡಲು ಅವಕಾಶ ನೀಡುವುದಾಗಿ ತಾಲಿಬಾನ್ ಭರವಸೆ ನೀಡಿತ್ತು. ಆದರೆ ತಾಲಿಬಾನ್ ಬದಲಾಗಿಲ್ಲ ಅನ್ನೋದು ಗೊತ್ತಾಗ್ತಿದೆ.
ಈ ದೇಶದಲ್ಲಿ ಬಾಡಿಗೆಗೆ ಸಿಗ್ತಾರೆ ಗರ್ಲ್ ಫ್ರೆಂಡ್ಸ್ – ಇದು ಕೊರೊನಾಗೆ ಕೇರ್ ಆಫ್ ಅಡ್ರೆಸ್…!
ನಾವು ಮಹಿಳೆಯರಿಗೆ ತೊಂದರೆ ಕೊಡುವುದಿಲ್ಲ. ಅವರ ಹಕ್ಕುಗಳನ್ನು ಗೌರವಿಸುತ್ತೇವೆ ಎಂದು ಹೇಳಿದ್ದ ತಾಲಿಬಾನಿ ಉಗ್ರರು ಮಹಿಳೆಯರ ಸ್ವಾತಂತ್ರ್ಯ ಕಿತ್ತುಕೊಳ್ಳುವ ಯಾವುದೇ ಸಂದರ್ಭಗಳನ್ನೂ ಬಿಡುತ್ತಿಲ್ಲ. ಆದ್ರೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ತಾಲಿಬಾನ್ ಉಗ್ರರು ಮಾಧ್ಯಮಗಳಲ್ಲಿ ಹಾಗೂ ಸ್ಟುಡಿಯೋಗಳಲ್ಲಿ ಮಹಿಳಾ ಸಿಬ್ಬಂದಿ ಇಸ್ಲಾಮಿಕ್ ಕಾನೂನು ಅನ್ವಯ ಕೆಲಸ ಮುಂದುವರಿಸಬಹುದು. ಆದರೆ ಅವರ ಧ್ವನಿ ಕೇಳಬಾರದು ಎಂದು ಹೇಳಿದೆ.