ಗ್ರೀಸ್ ನಲ್ಲಿ ತಾಲಿಬಾನ್ ವಿರುದ್ಧ ಪ್ರತಿಭಟನೆ
ಥೆಸಲೊನಿಕಿ : ರಕ್ಕಸ ತಾಲಿಬಾನಿಗಳ ಹಿಡಿತಕ್ಕೆ ಸಿಲುಕಿ ಉಸಿರುಗಟ್ಟುವಂತ ಸ್ಥಿತಿಯಲ್ಲಿರುವ ಅಫ್ಘಾನ್ ನಲ್ಲಿ ಉಸಿರು ಉಳಿಸಿಕೊಳ್ಳಲು ಜನರ ಹೋರಾಟ ಮುಂದುವರೆದಿದೆ. ತಾಲಿಬಾನಿಗಳಿಂದ ಜೀವ ಉಳಿಸಿಕೊಳ್ಳಲು ಅಲ್ಲಿನ ಜನರು ನಾನಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಸಹಾಯಕ್ಕಾಗಿ ಅಂಗಲಾಚುತ್ತಿದ್ದಾರೆ.
ಅಫ್ಘಾನಿಸ್ತಾನವನ್ನು ವಶಕ್ಕೆ ಪಡೆದ ಹಾಗೂ ಅಲ್ಲಿ ತಾಲಿಬಾನಿಗಳ ವರ್ತನೆಗೆ ವಿಶ್ವದೆಲ್ಲೆಡೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಈ ಮಧ್ಯೆ ಗ್ರೀಸ್ ನ ಥೆಸಲೋನಿಕಿ ನಗರದಲ್ಲಿ ನೂರಾರು ಮಂದಿ ತಾಲಿಬಾನ್ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.
ಈ ಪ್ರತಿಭಟನಾ ರ್ಯಾಲಿಯಲ್ಲಿ ಅಲ್ಲಿ ಅಫ್ಘಾನಿಸ್ತಾನಿಗಳು ಭಾಗಿಯಾಗಿದ್ದು, ಥೆಸಲೊನಿಕಿ ನಗರದಲ್ಲಿ ತಾಲಿಬಾನ್ ಮತ್ತು ಪಾಕಿಸ್ತಾನದ ವಿರುದ್ಧ ಪ್ರತಿಭಟನಾ ರ್ಯಾಲಿ ನಡೆಸಿದ್ದಾರೆ.









