ADVERTISEMENT
Thursday, March 26, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Sports

ಪಾಕಿಸ್ತಾನವನ್ನು ಮಕಾಡೆ ಮಲಗಿಸಿದ ಆಪ್ಘಾನ್!

ಬದ್ಧ ವೈರಿಗೆ ಸೋಲುಣಿಸಿದ ಆಪ್ಘಾನ್

Author2 by Author2
October 23, 2023
in Sports, ಕ್ರಿಕೆಟ್, ಕ್ರಿಕೆಟ್ ವಿಶ್ವಕಪ್ 2023
Share on FacebookShare on TwitterShare on WhatsappShare on Telegram

ಪ್ರಸಕ್ತ ವಿಶ್ವಕಪ್‌ನಲ್ಲಿ ಮತ್ತೊಂದು ಅದ್ಭುತ ಪ್ರದರ್ಶನ ನೀಡಿರುವ ಅಫ್ಘಾನಿಸ್ತಾನ ಸಂಘಟಿತ ಆಟದ ಮೂಲಕ ಪಾಕಿಸ್ತಾನದ ವಿರುದ್ಧ 8 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸುವ ಮೂಲಕ ಇತಿಹಾಸ ನಿರ್ಮಿಸಿದೆ.

ಚೆನ್ನೈನ ಎಂ.ಎ. ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದ ಪಾಕಿಸ್ತಾನ ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡಿತು. ಆದರೆ ಪ್ರಮುಖ ಬ್ಯಾಟರ್‌ಗಳ ವೈಫಲ್ಯಕ್ಕೆ ಸಿಲುಕಿದ ಪಾಕಿಸ್ತಾನ ನಿಗದಿ 50 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 282 ರನ್‌ಗಳಿಸಿತು. ಈ ಟಾರ್ಗೆಟ್‌ ಚೇಸ್‌ ಮಾಡಿದ ಅಫ್ಘಾನಿಸ್ತಾನ 49 ಓವರ್‌ಗಳಲ್ಲಿ 2 ವಿಕೆಟ್‌ಗೆ 286 ರನ್‌ಗಳಿಸುವ ಮೂಲಕ ಭರ್ಜರಿ 8 ವಿಕೆಟ್‌ಗಳ ಗೆಲುವು ಸಾಧಿಸಿತು. ಈ ಗೆಲುವಿನೊಂದಿಗೆ ಟೂರ್ನಿಯಲ್ಲಿ 2ನೇ ಗೆಲುವು ಸಾಧಿಸಿದ ಅಫ್ಘಾನಿಸ್ತಾನ ಸೆಮಿಫೈನಲ್‌ ಆಸೆಯನ್ನ ಜೀವಂತ ಇರಿಸಿಕೊಂಡಿದೆ.

Related posts

ಈತ ಇರೋವರೆಗೂ ಟೀಂ ಇಂಡಿಯಾ ಟ್ರೋಫಿ ಗೆಲ್ಲೋದು ಪಕ್ಕಾ! ಫೈನಲ್ ನಲ್ಲಿ ಕಿವೀಸ್ ಬೇಟೆ ಆಡಿದ ಬೌಲರ್; ಈತನಿಗಿಂತ ಬೆಸ್ಟ್ ಯಾರಿಲ್ಲ ಎಂದ ಮಿಸ್ಟರ್ 360

ಈತ ಇರೋವರೆಗೂ ಟೀಂ ಇಂಡಿಯಾ ಟ್ರೋಫಿ ಗೆಲ್ಲೋದು ಪಕ್ಕಾ! ಫೈನಲ್ ನಲ್ಲಿ ಕಿವೀಸ್ ಬೇಟೆ ಆಡಿದ ಬೌಲರ್; ಈತನಿಗಿಂತ ಬೆಸ್ಟ್ ಯಾರಿಲ್ಲ ಎಂದ ಮಿಸ್ಟರ್ 360

March 19, 2026
vvs lakshman and rahul dravid

ಅಹಂಕಾರದ ಪತನ.. ಆತ್ಮವಿಶ್ವಾಸದ ಉದಯ..! ಲಕ್ಷ್ಮಣ್ -ದ್ರಾವಿಡ್ ಮಹೋನ್ನತ ಇನಿಂಗ್ಸ್ ಗೆ ಬೆಳ್ಳಿ ಗರಿಯ ಹರುಷ..!

March 16, 2026

ನಾಯಕ ಬಾಬರ್‌ ಆಸರೆ:
ಮೊದಲು ಬ್ಯಾಟ್‌ ಮಾಡಿದ ಪಾಕಿಸ್ತಾನ ಸಾಧಾರಣ ಆರಂಭ ಕಂಡಿತು. ಆರಂಭಿಕರಾಗಿ ಕಣಕ್ಕಿಳಿದ ಶಫೀಕ್‌(58) ರನ್‌ಗಳ ಅರ್ಧಶತಕ ಬಾರಿಸಿ ಮಿಂಚಿದರೆ. ಇಮಾಮ್‌-ಉಲ್‌-ಹಕ್‌(17) ಬ್ಯಾಟಿಂಗ್‌ ವೈಫಲ್ಯ ಕಂಡರು. ಆದರೆ 1ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ನಾಯಕ ಬಾಬರ್‌ ಆಜ಼ಂ(74) ಆಕರ್ಷಕ ಅರ್ಧಶತಕ ಸಿಡಿಸಿ ಜವಾಬ್ದಾರಿಯ ಆಟವಾಡಿದರು. ಆದರೆ ಕಳೆದ ಪಂದ್ಯಗಳಲ್ಲಿ ತಂಡಕ್ಕೆ ಆಸರೆಯಾಗಿದ್ದ ಮೊಹಮ್ಮದ್‌ ರಿಜ್ವಾನ್‌(8) ಬ್ಯಾಟಿಂಗ್‌ ವೈಫಲ್ಯಕ್ಕೆ ಸಿಲುಕಿದರು.

ಆದರೆ ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದ ಸೌದ್‌ ಶಕೀಲ್‌(25) ರನ್‌ಗಳ ಉಪಯುಕ್ತ ಕಾಣಿಕೆ ನೀಡಿದರೆ. ಆಲ್ರೌಂಡರ್‌ ಶದಾಬ್‌ ಖಾನ್‌(40) ಮತ್ತು ಇಫ್ತಿಕರ್‌ ಅಹ್ಮದ್‌(40) ಉತ್ತಮ ಆಟವಾಡಿದರು. ಪರಿಣಾಮ ಪಾಕಿಸ್ತಾನ 50 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 282 ರನ್‌ಗಳಿಸಿತು. ಅಫ್ಘಾನಿಸ್ತಾನದ ಪರ ಚೊಚ್ಚಲ ಪಂದ್ಯವಾಡಿದ ನೂರ್‌ ಅಹ್ಮದ್‌(3/49) ಪರಿಣಾಮಕಾರಿ ಬೌಲಿಂಗ್‌ ದಾಳಿ ನಡೆಸಿದರೆ. ನವೀನ್‌-ಉಲ್‌-ಹಕ್‌ 2 ಹಾಗೂ ನಬಿ, ಅಜ್ಮತುಲ್ಲ ತಲಾ 1 ವಿಕೆಟ್‌ ಪಡೆದುಕೊಂಡರು.

ಅಫ್ಘಾನ್‌ ಸಂಘಟಿತ ಬ್ಯಾಟಿಂಗ್‌:
ಪಾಕಿಸ್ತಾನ ನೀಡಿದ 283 ರನ್‌ಗಳ ಟಾರ್ಗೆಟ್‌ ಚೇಸ್‌ ಮಾಡಿದ ಅಫ್ಘಾನ್‌, ಸಂಘಿಟಿತ ಬ್ಯಾಟಿಂಗ್‌ ಪ್ರದರ್ಶಿಸಿತು. ತಂಡದ ಪರ ಇನ್ನಿಂಗ್ಸ್‌ ಆರಂಭಿಸಿದ ಗುರ್ಬಾಜ್‌(65) ಹಾಗೂ ಜದ್ರಾನ್‌(87) ಅದ್ಭುತ ಬ್ಯಾಟಿಂಗ್‌ ಮೂಲಕ 130 ರನ್‌ಗಳ ಉತ್ತಮ ಅಡಿಪಾಯ ಹಾಕಿಕೊಟ್ಟರು. ನಂತರ ಜೊತೆಯಾದ ರಹಮತ್‌ ಶಾ(77*) ಹಾಗೂ ನಾಯಕ ಹಶ್ಮತುಲ್ಲಾ ಶಹೀದಿ(48*) ಉತ್ತಮ ಆಟದ ಮೂಲಕ ತಂಡವನ್ನ ಗೆಲುವಿನ ದಡಮುಟ್ಟಿಸಿದರು. ಪಾಕಿಸ್ತಾನದ ಪರ ಶಹೀನ್‌ ಅಫ್ರಿದಿ ಹಾಗೂ ಹಸನ್‌ ಅಲಿ ತಲಾ 1 ವಿಕೆಟ್‌ ಪಡೆದರು.

ಈ ಗೆಲುವಿನೊಂದಿಗೆ ಅಫ್ಘಾನಿಸ್ತಾನ ಪ್ರಸಕ್ತ ವಿಶ್ವಕಪ್‌ನಲ್ಲಿ 2ನೇ ಹಾಗೂ ಪಾಕಿಸ್ತಾನದ ವಿರುದ್ಧ ಮೊದಲ ಗೆಲುವು ಸಾಧಿಸಿತು. ಅಲ್ಲದೇ ಈ ಜಯದ ಮೂಲಕ ಅಫ್ಘಾನಿಸ್ತಾನ ವಿಶ್ವಕಪ್‌ ಸೆಮಿಫೈನಲ್‌ ರೇಸ್‌ನಲ್ಲಿ ಜೀವಂತ ಇದ್ದರೆ, ಹ್ಯಾಟ್ರಿಕ್‌ ಸೋಲು ಕಂಡ ಪಾಕಿಸ್ತಾನದ ಸೆಮಿಫೈನಲ್‌ ಹಾದಿ ಮತ್ತಷ್ಟು ಕಠಿಣಗೊಂಡಿದೆ.

Tags: Afghan made Pakistan sleep!AfghanistanCWC 2023ODI cricketPakistanWorld Cup
ShareTweetSendShare
Join us on:

Related Posts

ಈತ ಇರೋವರೆಗೂ ಟೀಂ ಇಂಡಿಯಾ ಟ್ರೋಫಿ ಗೆಲ್ಲೋದು ಪಕ್ಕಾ! ಫೈನಲ್ ನಲ್ಲಿ ಕಿವೀಸ್ ಬೇಟೆ ಆಡಿದ ಬೌಲರ್; ಈತನಿಗಿಂತ ಬೆಸ್ಟ್ ಯಾರಿಲ್ಲ ಎಂದ ಮಿಸ್ಟರ್ 360

ಈತ ಇರೋವರೆಗೂ ಟೀಂ ಇಂಡಿಯಾ ಟ್ರೋಫಿ ಗೆಲ್ಲೋದು ಪಕ್ಕಾ! ಫೈನಲ್ ನಲ್ಲಿ ಕಿವೀಸ್ ಬೇಟೆ ಆಡಿದ ಬೌಲರ್; ಈತನಿಗಿಂತ ಬೆಸ್ಟ್ ಯಾರಿಲ್ಲ ಎಂದ ಮಿಸ್ಟರ್ 360

by Shwetha
March 19, 2026
0

ಟೀಮ್ ಇಂಡಿಯಾ ವಿಶ್ವ ಕ್ರಿಕೆಟ್‌ನಲ್ಲಿ ತನ್ನ ಅಧಿಪತ್ಯವನ್ನು ಮುಂದುವರಿಸಿದೆ. ಇತ್ತೀಚೆಗೆ ನಡೆದ 2026ರ ಟಿ20 ವಿಶ್ವಕಪ್‌ನಲ್ಲಿ (T20 World Cup 2026) ಐತಿಹಾಸಿಕ ಜಯ ಸಾಧಿಸುವ ಮೂಲಕ...

vvs lakshman and rahul dravid

ಅಹಂಕಾರದ ಪತನ.. ಆತ್ಮವಿಶ್ವಾಸದ ಉದಯ..! ಲಕ್ಷ್ಮಣ್ -ದ್ರಾವಿಡ್ ಮಹೋನ್ನತ ಇನಿಂಗ್ಸ್ ಗೆ ಬೆಳ್ಳಿ ಗರಿಯ ಹರುಷ..!

by admin
March 16, 2026
0

ಅಹಂಕಾರದ ಪತನ.. ಆತ್ಮವಿಶ್ವಾಸದ ಉದಯ..! ಲಕ್ಷ್ಮಣ್ -ದ್ರಾವಿಡ್ ಮಹೋನ್ನತ ಇನಿಂಗ್ಸ್ ಗೆ ಬೆಳ್ಳಿ ಗರಿಯ ಹರುಷ..! ಅದು 2001. ಮಾರ್ಚ್ 15. ಭಾರತ - ಆಸ್ಟ್ರೇಲಿಯಾ ನಡುವಿನ...

ವಿಶ್ವಕಪ್ ಗೆಲುವಿನ ಅಮಲಿನಲ್ಲಿ ರಾಷ್ಟ್ರಧ್ವಜಕ್ಕೆ ಅವಮಾನ: ಕ್ರಿಕೆಟಿಗ ಹಾರ್ದಿಕ್ ಪಾಂಡ್ಯಗೆ ಕಂಟಕವಾದ ಸಂಭ್ರಮಾಚರಣೆ

ವಿಶ್ವಕಪ್ ಗೆಲುವಿನ ಅಮಲಿನಲ್ಲಿ ರಾಷ್ಟ್ರಧ್ವಜಕ್ಕೆ ಅವಮಾನ: ಕ್ರಿಕೆಟಿಗ ಹಾರ್ದಿಕ್ ಪಾಂಡ್ಯಗೆ ಕಂಟಕವಾದ ಸಂಭ್ರಮಾಚರಣೆ

by Shwetha
March 13, 2026
0

ಭಾರತದ ಸ್ಟಾರ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಅವರ ಟಿ20 ವಿಶ್ವಕಪ್ ಗೆಲುವಿನ ಸಂಭ್ರಮವು ಈಗ ಭಾರೀ ವಿವಾದಕ್ಕೆ ಕಾರಣವಾಗಿದೆ. ಅಹಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ...

ಪಾಕ್ ಆಟಗಾರನಿಗೆ ಕೋಟಿ ಕೋಟಿ ಸುರಿದ ಕಾವ್ಯ ಮಾರನ್ : ದೇಶದ ಭಾವನೆಗಳಿಗಿಂತ ಆಟವೇ ಮುಖ್ಯವಾಯ್ತಾ ; ಸನ್‌ರೈಸರ್ಸ್ ಬಾಯ್ಕಾಟ್ ಟ್ರೆಂಡ್ ಶುರು

ಪಾಕ್ ಆಟಗಾರನಿಗೆ ಕೋಟಿ ಕೋಟಿ ಸುರಿದ ಕಾವ್ಯ ಮಾರನ್ : ದೇಶದ ಭಾವನೆಗಳಿಗಿಂತ ಆಟವೇ ಮುಖ್ಯವಾಯ್ತಾ ; ಸನ್‌ರೈಸರ್ಸ್ ಬಾಯ್ಕಾಟ್ ಟ್ರೆಂಡ್ ಶುರು

by Shwetha
March 13, 2026
0

ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಆಯೋಜಿಸುತ್ತಿರುವ ಪ್ರತಿಷ್ಠಿತ 'ದಿ ಹಂಡ್ರೆಡ್' ಟೂರ್ನಿಯ ಆಟಗಾರರ ಹರಾಜು ಪ್ರಕ್ರಿಯೆ ಇದೀಗ ಭಾರೀ ವಿವಾದದ ಸ್ವರೂಪ ಪಡೆದುಕೊಂಡಿದೆ. ಈ ಬಾರಿಯ ಟೂರ್ನಿಯಲ್ಲಿ ಇದೇ...

team india icc t-20worldcup 2026 champions

ವಿಶ್ವ ವಿಜಯದ ಮಹಾ ಪೂಜೆ… ಭಾರತಾಂಬೆಯ ಮುಕುಟಕ್ಕೆ ಮತ್ತೊಂದು ಐಸಿಸಿ ಗರಿ..!

by admin
March 9, 2026
0

ಮಾರ್ಚ್ 8. ವಿಶ್ವ ಮಹಿಳಾ ದಿನಾಚರಣೆ. ಇನ್ನೊಂದೆಡೆ 2026ರ ಟಿ-20 ವಿಶ್ವಕಪ್ ಫೈನಲ್ ಮ್ಯಾಚ್. ಭಾನುವಾರದ ಹೈವೋಲ್ಟೇಜ್ ಮ್ಯಾಚ್‍ನಲ್ಲಿ ನ್ಯೂಜಿಲೆಂಡ್ ಆಟಗಾರರು ಚೊಚ್ಚಲ ಐಸಿಸಿ ಟಿ-20 ಪ್ರಶಸ್ತಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram