ಡೆಲ್ಟಾ ಆಯ್ತು ಈ  ಕಪ್ಪಾ  ರೂಪಾಂತರಿ ಭೀತಿ : ಉತ್ತರ ಪ್ರದೇಶದಲ್ಲಿ ಇಬ್ಬರಿಗೆ ಸೋಂಕು

1 min read

ಡೆಲ್ಟಾ ಆಯ್ತು ಈ  ಕಪ್ಪಾ  ರೂಪಾಂತರಿ ಭೀತಿ : ಉತ್ತರ ಪ್ರದೇಶದಲ್ಲಿ ಇಬ್ಬರಿಗೆ ಸೋಂಕು

ಉತ್ತರಪ್ರದೇಶ :   ಒಂದೆಡೆ ದೇಶಾದ್ಯಂತ ಡೆಲ್ಟಾ ಆತಂಕ ಹೆಚ್ಚಾಗ್ತಲೇ ಇದೆ.. ಈ ನಡುವೆ ಇದೀಗ ಹೊಸ ರೂಪಾಂತರಿ ಕಪ್ಪಾ ತಳಿಯ ಭೀತಿಯೂ ಎದುರಾಗಿದ್ದು, ಉತ್ತರ ಪ್ರದೇಶದಲ್ಲಿ ಕೊರೋನಾದ ಎರಡು ಕಪ್ಪಾ ರೂಪಾಂತರಿ ಪ್ರಕರಣ ಪತ್ತೆಯಾಗಿದೆ.

ಲಕ್ನೋದ ಕಿಂಗ್ ಜಾರ್ಜ್ ಮೆಡಿಕಲ್ ಕಾಲೇಜಿಗೆ ಒಟ್ಟು 109 ಮಾದರಿಗಳನ್ನು ನೀಡಲಾಗಿತ್ತು. ಅದರಲ್ಲಿ ಎರಡು ಕಪ್ಪಾ ತಳಿ ಪತ್ತೆಯಾಗಿದ್ದು, 107 ಡೆಲ್ಟಾ ಪ್ಲಸ್ ರೂಪಾಂತರಿ ಪತ್ತೆಯಾಗಿದೆ ಎಂದು ರಾಜ್ಯ ಸರಕಾರದ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಈ ಪೈಕಿ 107ರಲ್ಲಿ ಡೆಲ್ಟಾ ಪ್ಲಸ್‌ ಸೋಂಕು, 2ರಲ್ಲಿ ಕಪ್ಪಾ ಸೋಂಕು ಪತ್ತೆಯಾಗಿದೆ ಎಂದು ತಿಳಿಸಿದೆ. ಈ ಪ್ರಕರಣಗಳು ರಾಜ್ಯಕ್ಕೆ ಹೊಸದಲ್ಲ. ಹೊಸ ಸೋಂಕು ಪ್ರಕರಣಗಳ ಹಿನ್ನೆಲೆಯಲ್ಲಿ ತಪಾಸಣೆ  ಕಾರ್ಯವನ್ನು ಇನ್ನಷ್ಟು ಚುರುಕುಗೊಳಿಸಲಾಗಿದೆ.

ಕೋವಿಡ್-19 ರ ಹೊಸ ತಳಿ ಬಗ್ಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಮಾಹಿತಿ ನೀಡಲಾಗಿದೆ. ಕೋವಿಡ್ ನ ಎರಡು ರೂಪಾಂತರಗಳು ಹೊಸತಲ್ಲ. ಜೀನೋಮ್ ಅನುಕ್ರಮಣಿಕೆಯ ಸೌಲಭ್ಯವನ್ನು ಹೆಚ್ಚಿಸಲಾಗುತ್ತಿದೆ. ಇದು ಪ್ರಯೋಗಾಲಯದ ಪ್ರಕ್ರಿಯೆಯಾಗಿದ್ದು, ರೂಪಾಂತರಗಳನ್ನು ನಿರೂಪಿಸಲು ಮತ್ತು ರೋಗ ಪತ್ತೆಹಚ್ಚುವ ವಿಧಾನವಾಗಿದೆ ಎಂದು ತಿಳಿಸಲಾಗಿದೆ.

ಸದ್ಯ ನಿತ್ಯದ ಪ್ರಕರಣ ದೃಢಪಡುವ ಸರಾಸರಿ ಪ್ರಮಾಣ ಶೇ 0.04ರಷ್ಟಿದೆ ಎಂದು ತಿಳಿಸಿದೆ. ಕಪ್ಪಾ ರೂಪಾಂತರಿತ ತಳಿ ಕುರಿತ ಪ್ರಶ್ನೆಗೆ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಮಿತ್ ಮೋಹನ್ ಪ್ರಸಾದ್ ಅವರು, ಈ ಬಗ್ಗೆ ಆತಂಕಕ್ಕೆ ಅಗತ್ಯವಿಲ್ಲ. ಇದಕ್ಕೆ ಚಿಕಿತ್ಸೆ ಲಭ್ಯವಿದೆ ಎಂದು ಪ್ರತಿಕ್ರಿಯಿಸಿದರು.

ಕೋವಿಡ್ , ಫಂಗಸ್ , ಡೆಲ್ಟಾ, ಲ್ಯಾಂಬ್ಡಾ ಆಯ್ತು…. ಈಗ ಝಿಕಾ ಆತಂಕ..! ಕೇರಳದಲ್ಲಿ ಮೊದಲ  ಕೇಸ್ ಪತ್ತೆ..!    

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd