ಶಿವಮೊಗ್ಗ: ರಂಜಾನ್ ಉಪವಾಸ ಮುಗಿಸಿದ ನಂತರ ಸ್ನೇಹಿತರು ಈಜಲು ತೆರಳಿ ನೀರು ಪಾಲಾಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ತೀರ್ಥಹಳ್ಳಿ ತುಂಗಾ ನದಿಯ ರಾಮ ಮಂಟಪದ ಹತ್ತಿರ ಈ ಘಟನೆ ನಡೆದಿದೆ. ರಫನ್, ಇಯನ್ ಮತ್ತು ಅರ್ಫದ್ ಸಾವನ್ನಪ್ಪಿದವರು ಎನ್ನಲಾಗಿದೆ. ರಂಜಾನ್ ಉಪವಾಸ ಮುಗಿಸಿದ ನಂತರ ತುಂಗಾ ನದಿಯಲ್ಲಿ ಈಜಲೆಂದು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಾದ ರಫನ್, ಇಯನ್ ಮತ್ತು ಅರ್ಫದ್ ಹೋಗಿದ್ದಾರೆ.
ಆದರೆ, ವೇಳೆ ಮೂವರು ನೀರು ಪಾಲಾಗಿದ್ದರು. ಅಗ್ನಿಶಾಮಕ ದಳದ ಸಿಬ್ಬಂದಿ, ಪೊಲೀಸರು ಮೃತದೇಹ ಹೊರ ತೆಗೆದಿದ್ದಾರೆ. ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಈ ಕುರಿತು ತೀರ್ಥಹಳ್ಳಿ ಪೂಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.