ADVERTISEMENT
Thursday, March 12, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Marjala Manthana

ಸದ್ದು ಮಾಡುತ್ತಿದೆ ಸೈಬರ್ ಅಪಾಯಗಳ ಕುರಿತಾದ ವಿಭಾ ಭಾಷಾಂತರಿಸಿದ ಪುಸ್ತಕ; ಅಗೋಚರ ಜಾಲ ಪುಸ್ತಕದ ಚುಟುಕು ವಿಮರ್ಷೆಗಳ ಸಂಗ್ರಹ

Shwetha by Shwetha
August 19, 2021
in Marjala Manthana, Newsbeat, ನ್ಯೂಸ್ ಬೀಟ್, ಮಾರ್ಜಲ ಮಂಥನ
Agochara jaala review
Share on FacebookShare on TwitterShare on WhatsappShare on Telegram

ಸದ್ದು ಮಾಡುತ್ತಿದೆ ಸೈಬರ್ ಅಪಾಯಗಳ ಕುರಿತಾದ ವಿಭಾ ಭಾಷಾಂತರಿಸಿದ ಪುಸ್ತಕ; ಅಗೋಚರ ಜಾಲ ಪುಸ್ತಕದ ಚುಟುಕು ವಿಮರ್ಷೆಗಳ ಸಂಗ್ರಹ Agochara jaala review

ಇತ್ತೀಚೆಗೆ ಬಿಡುಗಡೆಯಾದ ಪತ್ರಕರ್ತ ಹಾಗೂ ಸಾಕ್ಷಾ ಟಿವಿ.ಕಾಮ್ ನ ಸುದ್ದಿ ಸಂಪಾದಕರಾಗಿರುವ ವಿಶ್ವಾಸ್ ಭಾರದ್ವಾಜ್ ಕನ್ನಡಕ್ಕೆ ಭಾವಾನುವಾದ ಮಾಡಿರುವ ಸೈಬರ್ ಅಪಾಯಗಳ ಕುರಿತಾದ ಪುಸ್ತಕ ಅಗೋಚರ ಜಾಲದ ಕುರಿತು ಸಾಕಷ್ಟು ಉತ್ತಮ ಮಾತುಗಳು ಕೇಳಿಬಂದಿವೆ. ಮೂಲ ಲೇಖಕಿ ಶ್ರೀಮತಿ ಜ್ಯೋತ್ಸ್ನಾ ಕಾಸು ಇಂಗ್ಲೀಷ್ ನಲ್ಲಿ ಬರೆದಿರುವ ದಿ ಆರ್ಟ್ ಆಫ್ ಬೀಯಿಂಗ್ ಇನ್ವಿಸಿಬಲ್ ಕೃತಿಯನ್ನು ವಿಶ್ವಾಸ್ ಭಾರದ್ವಾಜ್ ಕನ್ನಡಕ್ಕೆ ಭಾಷಾಂತರ ಮಾಡಿದ್ದಾರೆ. ವಂಶಿ ಪ್ರಕಾಶನ ಸಂಸ್ಥೆ ಪ್ರಕಟಿಸಿರುವ ಈ ಪುಸ್ತಕದ ಕುರಿತಾಗಿ ಮೂಡಿ ಬಂದ ಅಭಿಪ್ರಾಯಗಳು ಹೀಗಿವೆ.
Agochara jaala review Agochara jaala review
ಗೆಳೆಯ ವಿಶ್ವಾಸ್‌ ಅನುವಾದಿಸಿರುವ “ಅಗೋಚರ ಜಾಲ” ಎಂಬ ಸೈಬರ್‌ ಅಪಾಯಗಳ ಕುರಿತಾದ ಪುಸ್ತಕ ಒಂದೇ ಹದದಲ್ಲಿ ಓದಿಸಿಕೊಂಡು ಹೋಯಿತು. ನಮಗೆ ಈಗ ಅಪ್ಯಾಯಮಾನವಾಗಿರುವ ಇಂಟರ್ನೆಟ್‌ ಜಗತ್ತಿನಲ್ಲಿ ಎಷ್ಟೊಂದು ಅಪಾಯಗಳಿವೆ ಅನ್ನುವ ಕುತೂಹಲ ಇದಕ್ಕೆ ಕಾರಣ. ಅಮೇರಿಕ ನಿವಾಸಿ ಶ್ರೀಮತಿ ಜ್ಯೋತ್ಸ್ನಾ ಅವರ ಮೂಲಕೃತಿಯ “ದಿ ಆರ್ಟ್‌ ಆಫ್‌ ಬೀಯಿಂಗ್‌ ಇನ್ವಿಸಿಬಲ್‌” ಅನ್ನು ಎಲ್ಲಿಯೂ ಬೇಸರವಾಗದಂತೆ ಕನ್ನಡಕ್ಕೆ ತಂದಿದ್ದಾರೆ ವಿಶ್ವಾಸ್. ಸೈಬರ್‌ ಜಗತ್ತಿನಲ್ಲಿ ನಮಗೆ ಗೊತ್ತೇ ಇರದ ಎಷ್ಟೋ ಅಭದ್ರತೆಗಳ ಬಗ್ಗೆ ಪುಸ್ತಕ ಮಾತಾಡುತ್ತದೆ. ಇದು ನಿಜಕ್ಕೂ ಸಂಗ್ರಹ ಯೋಗ್ಯ ಪುಸ್ತಕ. ನಾವು ಪ್ರತಿನಿತ್ಯ ಇಂಟರ್‌ನೆಟ್‌ ಬಳಸುವವರು ಖಂಡಿತಾ ಓದಲೇಬೇಕಿರುವ ಪುಸ್ತಕ.

Related posts

ಉತ್ತರ ಪ್ರದೇಶದಲ್ಲಿ ಮೂರನೇ ಬಾರಿ ಅಧಿಕಾರಕ್ಕೆ ಬಿಜೆಪಿ ತಂತ್ರ: ‘ಮಿಷನ್ ಯುಪಿ 2027’

ಉತ್ತರ ಪ್ರದೇಶದಲ್ಲಿ ಮೂರನೇ ಬಾರಿ ಅಧಿಕಾರಕ್ಕೆ ಬಿಜೆಪಿ ತಂತ್ರ: ‘ಮಿಷನ್ ಯುಪಿ 2027’

March 12, 2026
ಯುದ್ಧದ ಹಿನ್ನೆಲೆ: IPL ಪಂದ್ಯಗಳು ಮುಂದೂಡಿಕೆ ಸಾಧ್ಯತೆ?

ಯುದ್ಧದ ಹಿನ್ನೆಲೆ: IPL ಪಂದ್ಯಗಳು ಮುಂದೂಡಿಕೆ ಸಾಧ್ಯತೆ?

March 12, 2026

–ಸನತ್‌ ರೈ, ಪ್ರಧಾನ ಸಂಪಾದಕರು, ಸಾಕ್ಷಾಟಿವಿ.ಕಾಮ್
***

“ಅಗೋಚರ ಜಾಲ” ಪುಸ್ತಕವನ್ನು ವಿಶ್ವಾಸ್‌ ಓದಲು ಕೊಟ್ಟ ದಿನವೇ ಅರ್ಧ ಭಾಗ ಮುಗಿಸಿದೆ. ವಿಶ್ವಾಸ್‌ ಭಾರದ್ವಾಜ್‌ ಅವರ ಬರವಣಿಗೆಯ ಪರಿಚಯವಿರುವ ನನಗೆ, ಅವರು ಕಾಟಾಚಾರಕ್ಕೆ ಬರೆಯುವುದಿಲ್ಲ ಅನ್ನುವ ನಂಬಿಕೆಯಿದೆ. ಅವರು ಆ ನಂಬಿಕೆಯನ್ನು ಉಳಿಸಿಕೊಂಡಿದ್ದಾರೆ. ಇವತ್ತಿನ ಸ್ಥಿತಿಗೆ ಅತ್ಯಂತ ಅಗತ್ಯವಿರುವ ವಸ್ತುವನ್ನು ಪುಸ್ತಕದ ರೂಪದಲ್ಲಿ ತಂದಿದ್ದಾರೆ. ಇದೊಂದು ಅನುವಾದ ಕೃತಿಯಾದರೂ ನಾವೆಲ್ಲರೂ ಓದಲೇಬೇಕಾದ ಪುಸ್ತಕವಿದು. ನಮ್ಮ ದೈನಂದಿನ ಜೀವನದಲ್ಲಿ ಡಿಜಿಟಲ್‌ ಶತ್ರು ಹೇಗೆ ಆಕ್ರಮಣ ಮಾಡುತ್ತಾನೆ ಎನ್ನುವ ಮುನ್ಸೂಚನೆ ನಮಗೆ ಇರಲೇಬೇಕು. ಮುಂದೆ ಎದುರಾಗಬಹುದಾದ ಅಪಾಯಗಳಿಗೆ ಸಿದ್ಧರಾಗಲು ನಾವು ಪೂರ್ವಭಾವಿ ತಯಾರಿಗಾಗಿ ಈ ಪುಸ್ತಕ ಓದಿಕೊಳ್ಳುವುದು ಅತ್ಯಗತ್ಯ ಅನ್ನುವುದು ನನ್ನ ಭಾವನೆ.

–ಮಂಜುನಾಥ್‌ ಪಿ, ಪತ್ರಕರ್ತರು, ಅದಿತಿ ಲಿಂಕ್‌ ಮೀಡಿಯಾ, ಬೆಂಗಳೂರು
***
Agochara jaala review
ಕನ್ನಡ ಬರವಣಿಗೆ ಕ್ಷೇತ್ರದಲ್ಲಿ ಇತ್ತೀಚೆಗೆ ಭರವಸೆ ಮೂಡಿಸುತ್ತಿರುವ ಯುವ ಬರಹಗಾರ ವಿಶ್ವಾಸ್‌ ಭಾರದ್ವಾಜ್‌ ಅವರ “ಅಗೋಚರ ಜಾಲ” ಪುಸ್ತಕ ಅವರೇ ಹೇಳುವ ಹಾಗೆ ಇಂಟರ್‌ನೆಟ್‌ ಬಳಕೆದಾರರ ಕೈಪಿಡಿಯಾಗಬೇಕಿದೆ. ಡಿಜಿಟಲ್‌ ಜೀವನ ಪದ್ಧತಿ ಅನುಸರಿಸುವ ಪ್ರತಿಯೊಬ್ಬರ ಮನೆಯ ಗ್ರಂಥಾಲಯದಲ್ಲಿ ಈ ಪುಸ್ತಕ ಇರಲೇಬೇಕು. ಕಣ್ಣಿಗೆ ಕಾಣದ ಶತ್ರು ನಮ್ಮ ಇಡಿ ಜೀವನ ನಾಶ ಮಾಡಿಬಿಡಬಹುದು. ನಮಗೆ ಅಪಾಯ ಎಲ್ಲಿಂದ ಬರುತ್ತದೆ ಎನ್ನುವುದನ್ನು ಅರ್ಥಮಾಡಿಕೊಳ್ಳಲು ಈ ಪುಸ್ತಕ ನೆರವಾಗುತ್ತದೆ. ಓದದೇ ಇದ್ದವರು ಮಿಸ್‌ ಮಾಡಿಕೊಳ್ಳದೇ ತಪ್ಪದೇ ಓದಿ.

–ಶ್ರೀಮತಿ ಅರಕಲಗೋಡು, ಹಿರಿಯ ಪೋಷಕ ನಟಿ, ಕಿರುತೆರೆ ಕಲಾವಿದೆ, ಬೆಂಗಳೂರು
***

ವಿಶ್ವಾಸ್‌ ಈ ಪುಸ್ತಕವನ್ನು ಕಳಿಸಿಕೊಡುವಾಗ, ಇದು ವಿದ್ಯಾರ್ಥಿಗಳಿಗೆ ಡಿಜಿಟಲ್‌ ಮಾರ್ಗದರ್ಶಿ ಹಾಗೂ ಸೈಬರ್‌ ಥ್ರೆಟ್‌ಗಳ ಬಗ್ಗೆ ಸಾಕಷ್ಟು ಬೆಳಕು ಚೆಲ್ಲುತ್ತದೆ ಎಂದು ಮೊದಲೇ ಹೇಳಿದ್ದರು. ಹೀಗಾಗಿ “ಅಗೋಚರ ಜಾಲ” ಎಂಬ ಡಿಜಿಟಲ್‌ ಅಪಾಯಗಳ ಕುರಿತು ಎಚ್ಚರಿಸುವ ವಿಷಯ ಹೊಂದಿರುವ ಪುಸ್ತಕವನ್ನು ನಾನೂ ಓದಿದೆ ಮತ್ತು ನನ್ನ ಕೆಲವು ವಿದ್ಯಾರ್ಥಿಗಳಿಂದಲೂ ಓದಿಸಿದೆ. ಅವರಿಂದ ಬಂದ ಅಭಿಪ್ರಾಯ ನನ್ನದೂ ಸಹ ಆಗಿತ್ತು. ಈ ಪುಸ್ತಕ ಖಂಡಿತಾ ನಮ್ಮ ಕನ್ನಡ ನಾಡಿನ ಯುವ ಕಾಲೇಜು ವಿದ್ಯಾರ್ಥಿಗಳು ಓದಲೇಬೇಕು. ನಮಗೆ ತಿಳಿಯದ ಅದೆಷ್ಟೋ ಸಂಗತಿಗಳನ್ನು ಈ ಪುಸ್ತಕ ಒಳಗೊಂಡಿದೆ. ಮೂಲ ಲೇಖಕಿ ಜ್ಯೋತ್ಸ್ನಾ ಕಾಸು ಮತ್ತು ನಮ್ಮ ವಿಶ್ವಾಸ್‌ ಭಾರದ್ವಾಜ್‌ ಅವರ ಈ ಪ್ರಯತ್ನ ಅಭಿನಂದನೀಯ.

–ಪ್ರಕಾಶ್‌, ಉಪನ್ಯಾಸಕರು, ಆಳ್ವಾಸ್‌ ವಿದ್ಯಾಸಂಸ್ಥೆ, ಮೂಡಬಿದ್ರಿ.
***

ನಾನೊಬ್ಬ ಸಾಫ್ಟ್‌ವೇರ್‌ ಡೆವಲಪರ್‌ ಆದ ಕಾರಣ, ನನ್ನ ಬ್ಯುಸಿ ವರ್ಕ್‌ ಶೆಡ್ಯೂಲ್‌ ನಡುವೆ, ಸಾಮಾನ್ಯವಾಗಿ ನಾನು ಪುಸ್ತಕಗಳನ್ನು ಓದುವುದು ಕಡಿಮೆ. ಆದರೆ ಸ್ನೇಹಿತ ವಿಶ್ವಾಸ್‌ “ಅಗೋಚರ ಜಾಲ” ಪುಸ್ತಕ ಡಿಜಿಟಲ್‌ ಲೈಫ್‌ ಗೆ ಸಂಬಂಧಿಸಿದ್ದು ಅಂದಿದ್ದರಿಂದ ಓದಲು ಶುರು ಮಾಡಿದೆ. ಇದರಲ್ಲಿರುವ ಎಷ್ಟೊ ವಿಚಾರಗಳು ಸಾಫ್ಟ್‌ವೇರ್‌ ಲೋಕದಲ್ಲಿ ಕೆಲಸ ಮಾಡುವ ನನ್ನಲ್ಲೂ ಅಚ್ಚರಿ ಮೂಡಿಸಿತು. ಇದು ಪೊಲೀಸ್‌ ಇಲಾಖೆಗೆ ಸೈಬರ್‌ ಕ್ರೈಮ್‌ ವಿಚಾರದಲ್ಲಿ ನೆರವಾಗುತ್ತದೆ. ಈ ರೀತಿಯ ಹೊಸ ವಿಚಾರಗಳನ್ನು ಒಳಗೊಂಡ ಪುಸ್ತಕಗಳು ಕನ್ನಡಕ್ಕೆ ಇನ್ನೂ ಹೆಚ್ಚಾಗಿ ಬರಲಿ.

–ವಿಶ್ವನಾಥ್‌ ವಿ ಶೇಟ್‌, ಸಾಫ್ಟ್‌ವೇರ್‌ ಎಂಜಿನಿಯರ್‌, ತ್ಯಾಗರ್ತಿ
***

ಇವತ್ತಿನ ಕೋವಿಡ್‌ ಪ್ಯಾಂಡಮಿಕ್‌ ಸ್ಥಿತಿಯಲ್ಲಿ ಕಾಲೇಜು ಪಾಠ ಆನ್‌ಲೈನ್‌ ನಲ್ಲಿ ಕಲಿಸುತ್ತಿರುವ ಸ್ಥಿತಿಯಲ್ಲಿ, ಸಾಕಷ್ಟು ಬಿಡುವು ಹೊಂದಿರುವ ನಾನು, ಈ ಪುಸ್ತಕವನ್ನು ಓದಲೇಬೇಕು ಎಂದು ಕೈಗೆತ್ತಿಕೊಂಡೆ. ವಿಶ್ವಾಸಣ್ಣನ ರೈಟಿಂಗ್‌ ನಂಗೆ ಮೊದಲಿನಿಂದ ಇಷ್ಟ. ಸೂಕ್ಷ್ಮ ವಿಷಯಗಳನ್ನು ಲಾಜಿಕಲ್‌ ಆಗಿ ಸರಳವಾಗಿ ಹೇಳಿಬಿಡುತ್ತಾರೆ. ಸೈಬರ್‌ ಕ್ರೈಂ ತರಹದ ಟೆಕ್ನಿಕಲ್‌ ವಸ್ತುವನ್ನೂ ವಿಶ್ವಾಸಣ್ಣ ಸುಲಭವಾಗಿ ಬರೆದು ಓದಿಸಿದ್ದಾರೆ. ಕನ್ನಡ ಮಾತೃಭಾಷೆಯ ವಿದ್ಯಾರ್ಥಿಗಳು, ಅದರಲ್ಲೂ ಹಳ್ಳಿಯಿಂದ ಬಂದವರಿಗೆ ಈ ಪುಸ್ತಕ ಒಬ್ಬ ನಿಜವಾದ ಗೈಡ್. ಇಂಗ್ಲೀಷ್‌ನಲ್ಲಿ ಈ ಪುಸ್ತಕ ಬರೆದ ಜ್ಯೋತ್ಸ್ನಾ ಮೇಡಂ ಮತ್ತು ವಿಶ್ವಾಸಣ್ಣ ಇಬ್ಬರಿಗೂ ಧನ್ಯವಾದ.

–ವೈಷ್ಣವಿ ಸಿ.ಎಸ್‌, ಬಿಸಿಎ ವಿದ್ಯಾರ್ಥಿ, ಸುರಾನಾ ಕಾಲೇಜು, ಜಯನಗರ-ಬೆಂಗಳೂರು
***
Agochara jaala review
“ಅಗೋಚರ ಜಾಲ” ಪುಸ್ತಕದ ಓದು ಹಲವು ವಿಷಯಗಳ ಕುರಿತು ಸರಳವಾಗಿ ತಿಳಿಸಿಕೊಡುತ್ತಾ ಸಾಗುತ್ತದೆ. ನಮಗೆ ಅರಿವಿಲ್ಲದೇ ನಾವು ಸಿಲುಕಿರುವ ವೆಬ್ ಜಾಲ‌ ಎಂಥದ್ದು ಎಂಬುದರ ಮೇಲೆ ಬೆಳಕು‌ ಚೆಲ್ಲುತ್ತದೆ. ಓದುತ್ತಾ ಹೋದಂತೆಲ್ಲಾ ನಾವೆಷ್ಟು ಅಸುರಕ್ಷಿತರಿದ್ದೇವೆ ಎಂಬ ಭಾವ ಕಾಡಿ ಭೀತರಾಗಿಸುತ್ತದೆ. ನಮ್ಮ ದೈನಂದಿನ ಅವಶ್ಯಕತೆಗಳೇ ಆಗಿರುವ ಮೊಬೈಲ್, ಲ್ಯಾಪ್‌ಟಾಪ್ ಗಳು ನಮ್ಮ‌ ಎಲ್ಲಾ ರಹಸ್ಯಗಳನ್ನೂ ಬಿಟ್ಟುಕೊಡುತ್ತಿವೆ ಎಂಬ ಸತ್ಯ ಘೋರ ಎನ್ನಿಸಲಾರಂಭಿಸುತ್ತದೆ. ಹಾಗೋ ಹೀಗೋ ಕಷ್ಟಪಟ್ಟು ಕೂಡಿಡುವ ಅಷ್ಟೋ ಇಷ್ಟೋ ದುಡ್ಡು ಕೂಡ ಯಾವಾಗ ಬೇಕಾದರೂ ಇಲ್ಲವಾಗಬಹುದಾದ ಅಪಾಯದ ಸುಳಿವೂ ಸಿಗುವಂತಾಗಿದೆ. ಇಂಥದ್ದೊಂದು ಪುಸ್ತಕವನ್ನು ಬರೆದ ಮೂಲ ಲೇಖಕಿ ಜ್ಯೋತ್ಸ್ನಾ ಕಾಸು ಅವರಿಗೂ, ಉಪಯುಕ್ತ ಪುಸ್ತಕವೊಂದನ್ನು ಕನ್ನಡಕ್ಕೆ ಭಾಷಾಂತರಿಸಿದ ವಿಶ್ವಾಸ್ ಭಾರದ್ವಾಜ್ ಅವರಿಗೂ ಧನ್ಯವಾದಗಳು.

–ಕೃಷ್ಣಮೂರ್ತಿ ಆಚಾರ್‌, ಸೀತೂರು, ಕೊಪ್ಪ
***

ನಮ್ಮ‌ ಸುತ್ತ ನಮಗರಿವಿಲ್ಲದೇ ಹೆಣೆದುಕೊಳ್ಳುವ ಜೇಡರಬಲೆಯಂತಹ ಅಪಾಯದ ಕುರಿತು “ಅಗೋಚರ ಜಾಲ” ಎಂಬ ಪುಸ್ತಕ ಅರಿವು ಮೂಡಿಸುತ್ತದೆ. ಹೆಸರೇ ಹೇಳುವಂತೆ ಇದು ನಮ್ಮ ಸ್ವಂತ ಎಂದುಕೊಳ್ಳುವ ನಮ್ಮದೇ ಖಾಸಗಿ ಲ್ಯಾಪ್ ಟಾಪ್ ಗಳು, ಮೊಬೈಲ್ ಫೋನ್ ಗಳಲ್ಲಿನ ಮಾಹಿತಿಗಳು ಸೋರಿಕೆಯಾಗುವ ಭಯದ ಕುರಿತು ತಿಳಿಸಿಕೊಡುತ್ತದೆ. ಬೇರೆಲ್ಲಾ ಒತ್ತಟ್ಟಿಗಿರಲಿ ನಮ್ಮದೇ ಫೋಟೋಗಳೂ ಕೂಡ ಸುರಕ್ಷಿತವಾಗಿ ಉಳಿಯುತ್ತಿಲ್ಲ ಎಂಬ ವಿಷಯಗಳು ನಿಜಕ್ಕೂ ಗಾಬರಿ ಹುಟ್ಟಿಸುತ್ತವೆ. ನಮ್ಮದೇನೋ ಸಣ್ಣ ಪುಟ್ಟ ಮಾಹಿತಿಗಳು ಅಂಥದ್ದೇನೂ ಅಲ್ಲ ಎಂದೇ ಅಂದುಕೊಳ್ಳೋಣ. ಆದ್ರೆ ಇದೇ ಮಾಹಿತಿಗಳು ದೊಡ್ಡ ಮಟ್ಟದಲ್ಲಿ ಸೋರಿಕೆಯಾದರೆ ಅದರಿಂದ ಉಂಟಾಗುವ ಅಪಾಯಗಳ ಸಾಧ್ಯತೆಗಳು ಸಹ ದೊಡ್ಡದೇ ಆಗಿರುತ್ತದೆ. ಇದರಿಂದ ಒಂದು ರಾಷ್ಟ್ರವೇ ಪರಿತಪಿಸುವಂತಾದರೂ ಯಾವುದೇ ಅಚ್ಚರಿಯಿಲ್ಲ.

–ಪುಷ್ಪಲತಾ, ಗೃಹಿಣಿ, ಕುದುರೆಗುಂಡಿ, ಚಿಕ್ಕಮಗಳೂರು ಜಿಲ್ಲೆ
***

 

Tags: Agochara jaala review
ShareTweetSendShare
Join us on:

Related Posts

ಉತ್ತರ ಪ್ರದೇಶದಲ್ಲಿ ಮೂರನೇ ಬಾರಿ ಅಧಿಕಾರಕ್ಕೆ ಬಿಜೆಪಿ ತಂತ್ರ: ‘ಮಿಷನ್ ಯುಪಿ 2027’

ಉತ್ತರ ಪ್ರದೇಶದಲ್ಲಿ ಮೂರನೇ ಬಾರಿ ಅಧಿಕಾರಕ್ಕೆ ಬಿಜೆಪಿ ತಂತ್ರ: ‘ಮಿಷನ್ ಯುಪಿ 2027’

by Shwetha
March 12, 2026
0

ಭಾರತೀಯ ಜನತಾ ಪಾರ್ಟಿ ಉತ್ತರ ಪ್ರದೇಶದಲ್ಲಿ ಸತತ ಮೂರನೇ ಅವಧಿಗೆ ಅಧಿಕಾರವನ್ನು ಮರಳಿ ಪಡೆಯಲು ಹೊಸ ರಾಜಕೀಯ ತಂತ್ರವನ್ನು ರೂಪಿಸಿದೆ. ಈ ತಂತ್ರಕ್ಕೆ ಆರ್‌ಎಸ್‌ಎಸ್ ಸಹ ಒಪ್ಪಿಗೆ...

ಯುದ್ಧದ ಹಿನ್ನೆಲೆ: IPL ಪಂದ್ಯಗಳು ಮುಂದೂಡಿಕೆ ಸಾಧ್ಯತೆ?

ಯುದ್ಧದ ಹಿನ್ನೆಲೆ: IPL ಪಂದ್ಯಗಳು ಮುಂದೂಡಿಕೆ ಸಾಧ್ಯತೆ?

by Shwetha
March 12, 2026
0

ಮಾರ್ಚ್ 28ರಿಂದ ಆರಂಭವಾಗಬೇಕಿದ್ದ ಐಪಿಎಲ್ ಟೂರ್ನಿ ಮುಂದೂಡಲಾಗುವ ಸಾಧ್ಯತೆಗಳ ಬಗ್ಗೆ ಚರ್ಚೆಗಳು ಆರಂಭವಾಗಿವೆ. ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಉದ್ವಿಗ್ನ ಪರಿಸ್ಥಿತಿ ಮತ್ತು ಅದರ ಪರಿಣಾಮಗಳಿಂದ ಹಲವು ವ್ಯವಸ್ಥಾತ್ಮಕ ಸಮಸ್ಯೆಗಳು...

ಸುಪ್ರೀಂ ಕೋರ್ಟ್ ಅಸಮಾಧಾನ ಬಳಿಕ  ಇಡೀ ಪಠ್ಯಪುಸ್ತಕ ಹಿಂಪಡೆದು ಕ್ಷಮೆಯಾಚಿಸಿದ NCERT

NCERT ಪಠ್ಯಪುಸ್ತಕಗಳ ಸಮಗ್ರ ಪರಿಶೀಲನೆ: ಸುಪ್ರೀಂ ಕೋರ್ಟ್ ಸೂಚನೆ

by Shwetha
March 12, 2026
0

ಸುಪ್ರೀಂ ಕೋರ್ಟ್ ಎನ್‌ಸಿಇಆರ್‌ಟಿ ಪಠ್ಯಪುಸ್ತಕ ವಿವಾದದ ಹಿನ್ನೆಲೆಯಲ್ಲಿ ಮಹತ್ವದ ಸೂಚನೆ ನೀಡಿದೆ. NCERT ಪ್ರಕಟಿಸಿರುವ 8ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿನ ‘ನ್ಯಾಯಾಂಗದಲ್ಲಿ ಭ್ರಷ್ಟಾಚಾರ’ ಎಂಬ ವಿಷಯಕ್ಕೆ...

ಇರಾನ್ ಬೆದರಿಕೆ ನಡುವೆಯೂ ಮುಂಬೈ ತಲುಪಿದ ತೈಲ ಟ್ಯಾಂಕರ್: ಜಾಗತಿಕ ಮಟ್ಟದಲ್ಲಿ ಭಾರತದ ದರ್ಬಾರ್ ಶುರು!

ಇರಾನ್ ಬೆದರಿಕೆ ನಡುವೆಯೂ ಮುಂಬೈ ತಲುಪಿದ ತೈಲ ಟ್ಯಾಂಕರ್: ಜಾಗತಿಕ ಮಟ್ಟದಲ್ಲಿ ಭಾರತದ ದರ್ಬಾರ್ ಶುರು!

by Shwetha
March 12, 2026
0

ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಕಾರ್ಮೋಡಗಳು ಕವಿದಿರುವ ಪ್ರಸ್ತುತ ಸಂದರ್ಭದಲ್ಲಿ, ಇಡೀ ವಿಶ್ವದ ಜೀವನಾಡಿಯಾಗಿರುವ ತೈಲ ಪೂರೈಕೆ ಮಾರ್ಗ 'ಹಾರ್ಮುಜ್ ಜಲಸಂಧಿ' ಬಹುತೇಕ ಸ್ತಬ್ಧಗೊಂಡಿದೆ. ಇರಾನ್ ನೀಡಿದ್ದ ನೇರ...

ಗ್ಯಾಸ್ ಕೊರತೆ ಪರಿಣಾಮ: ಬೆಂಗಳೂರಿನ ಹೋಟೆಲ್‌ಗಳಲ್ಲಿ ಕೆಲವು ತಿಂಡಿಗಳಿಗೆ ತಾತ್ಕಾಲಿಕ ಬಂದ್

ಗ್ಯಾಸ್ ಕೊರತೆ ಪರಿಣಾಮ: ಬೆಂಗಳೂರಿನ ಹೋಟೆಲ್‌ಗಳಲ್ಲಿ ಕೆಲವು ತಿಂಡಿಗಳಿಗೆ ತಾತ್ಕಾಲಿಕ ಬಂದ್

by Shwetha
March 12, 2026
0

ಬೆಂಗಳೂರು ನಗರದಲ್ಲಿನ ಹೋಟೆಲ್‌ಗಳಲ್ಲಿ ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಪೂರೈಕೆಯಲ್ಲಿ ತೀವ್ರ ವ್ಯತ್ಯಯ ಉಂಟಾಗಿರುವ ಹಿನ್ನೆಲೆ ಕೆಲವು ತಿಂಡಿಗಳನ್ನು ತಾತ್ಕಾಲಿಕವಾಗಿ ತಯಾರಿಸದಂತೆ ಹೋಟೆಲ್ ಮಾಲೀಕರು ನಿರ್ಧರಿಸಿದ್ದಾರೆ. ವಿಶೇಷವಾಗಿ ಹೆಚ್ಚು...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram