IPL2022 | ಅಹ್ಮದಾಬಾದ್ “ಟೈಟಾನ್ಸ್” ಆಗಿ ಎಂಟ್ರಿ..!? Ahmedabad Franchise Officially Names Itself Ahmedabad Titans saaksha tv
ಈ ಬಾರಿಯ ಐಪಿಎಲ್ ನಿಂದ ಹೊಸ ಫ್ರಾಂಚೈಸಿಗಳಾದ ಲಕ್ನೋ ಮತ್ತು ಅಹ್ಮದಾಬಾದ್ ತಂಡಗಳು ಗ್ರ್ಯಾಂಡ್ ಎಂಟ್ರಿ ಕೊಡಲಿವೆ. ಕೆ.ಎಲ್ .ರಾಹುಲ್ ನಾಯಕತ್ವದ ಲಕ್ನೋ ಫ್ರಾಂಚೈಸಿ, ಈಗಾಗಲೇ ತಂಡದ ಹೆಸರು ಮತ್ತು ಲೋಗೋವನ್ನು ಬಿಡುಗಡೆ ಮಾಡಿದೆ.
ಇದೀಗ CVC ಕ್ಯಾಪಿಟಲ್ ತಮ್ಮ ತಂಡದ ಹೆಸರನ್ನು “ಅಹಮದಾಬಾದ್ ಟೈಟಾನ್ಸ್” ಎಂದು ಘೋಷಿಸಿದೆ. ಮೆಗಾ ಹರಾಜಿಗೆ ಕೇವಲ ಐದು ದಿನಗಳು ಬಾಕಿ ಇರುವಾಗ ಸಿವಿಸಿ ಕಂಪನಿ ತರಾತುರಿಯಲ್ಲಿ ತಂಡಕ್ಕೆ ನಾಮಕರಣ ಮಾಡಿದೆ.
ಆದ್ರೆ ತಂಡದ ಲೋಗೋವನ್ನು ಇನ್ನೂ ಅನಾವರಣಗೊಳಿಸಿಲ್ಲ. ಇದೇ ತಿಂಗಳ 12 ಮತ್ತು 13 ರಂದು ಬೆಂಗಳೂರಿನಲ್ಲಿ ಐಪಿಎಲ್ ಮೆಗಾ ಹರಾಜು ನಡೆಯಲಿದೆ.
ಅಹಮದಾಬಾದ್ ಟೈಟಾನ್ಸ್ ಅನ್ನು ರೂ. 5,625 ಕೋಟಿ ವೆಚ್ಚ ಮಾಡಿ ಸಿವಿಸಿ ಕ್ಯಾಪಿಟಲ್ ಪಾರ್ಟನರ್ ಗ್ರೂಪ್ ಖರೀಸಿದೆ.
ಟೀಂ ಇಂಡಿಯಾ ಸ್ಟಾರ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಅವರನ್ನು ತಂಡದ ನಾಯಕರನ್ನಾಗಿ ಆಯ್ಕೆ ಮಾಡಿದೆ.
ಇದಕ್ಕಾಗಿ ಅವರಿಗೆ ದಾಖಲೆಯ ರೂ. 15 ಕೋಟಿ ಪಾವತಿಸಲಾಗಿದೆ. ಹಾಗೆ ರಶೀದ್ ಖಾನ್‌ಗೆ 15 ಕೋಟಿ ಮತ್ತು ಶುಭ್‌ಮಾನ್ ಗಿಲ್‌ಗೆ 8 ಕೋಟಿ ರೂ. ನೀಡಲಾಗಿದೆ.
ಇವರ ಜೊತೆಗೆ ಆಶಿಸ್ ನೆಹ್ರಾ ಅವರನ್ನು ತಂಡದ ಕೋಚ್ ಆಗಿ ನೇಮಕಮಾಡಿದೆ. ಮೆಂಟರ್ ಆಗಿ ಗ್ಯಾರಿ ಕಿರ್ಸ್ಟನ್ ಅವರನ್ನು ನೇಮಿಸಿಕೊಂಡಿದೆ.