ಭಾರತೀಯರನ್ನು ಕರೆತರಲು ಉಕ್ರೇನ್‌ಗೆ ಹಾರಿದ್ದ ಏರ್ ಇಂಡಿಯಾ ವಿಮಾನ ದೆಹಲಿಗೆ ವಾಪಸ್ – Saaksha Tv
ನವದೆಹಲಿ: ಭಾರತೀಯರನ್ನು ತವರಿಗೆ ಕರೆತರಲು ಉಕ್ರೇನ್‌ಗೆ ಹಾರಿದ ಏರ್ ಇಂಡಿಯಾ ವಿಮಾನವು ದೆಹಲಿಗೆ ವಾಪಾಸ್ಸಾಗಿದೆ.
ರಷ್ಯಾ ʼಮಿಲಿಟರಿ ಕಾರ್ಯಾಚರಣೆʼಯನ್ನು ಘೋಷಿಸಿದ ಹಿನ್ನೆಲೆಯಲ್ಲಿ ಉಕ್ರೇನ್ ತನ್ನ ವಾಯುಪ್ರದೇಶವನ್ನು ಮುಚ್ಚಿದೆ. ಹೀಗಾಗಿ ರಷ್ಯಾದೊಂದಿಗಿನ ಸಂಘರ್ಷದ ನಡುವೆ ಸಾವಿರಾರು ಭಾರತೀಯರು ಉಕ್ರೇನ್‌ನಿಂದ ಸ್ವದೇಶಕ್ಕೆ ಮರಳಲು ಕಾಯುತ್ತಿದ್ದಾರೆ.
ಮೊನ್ನೆ ಉಕ್ರೇನ್ ನಲ್ಲಿರುವ ಭಾರತೀಯರನ್ನು ಕರೆತರಲು ಏರ್ ಇಂಡಿಯಾದ ಮೂಲಕ ಭಾರತಕ್ಕೆ 242 ಭಾರತೀಯರನ್ನು ಕರೆತರಲಾಯಿತು. ಇಂದು ಮತ್ತೆ ಭಾರತೀಯರನ್ನು ಕರೆತರಲು ಏರ್ ಇಂಡಿಯಾ ಉಕ್ರೇನ್ ನತ್ತ ಹಾರಿತ್ತು ಆದರೆ ಉಕ್ರೇನ್ ಮೇಲೆ ರಷ್ಯಾ ʼಮಿಲಿಟರಿ ಕಾರ್ಯಾಚರಣೆʼಯನ್ನು ಘೋಷಿಸಿದ ಹಿನ್ನೆಲೆಯಲ್ಲಿ ಉಕ್ರೇನ್ ತನ್ನ ವಾಯುಪ್ರದೇಶವನ್ನು ಮುಚ್ಚಿದೆ. ಈ ಕಾರಣದಿಂದ ವಿಮಾನ ಭಾರತಕ್ಕೆ ವಾಪಸ್ಸಾಗಿದೆ.
ಉಕ್ರೇನ್‌ಗೆ ಹೋಗುವ ಎಲ್ಲಾ ವಿಮಾನಗಳಿಗೆ NOTAM ಅಥವಾ ಏರ್‌ಮೆನ್‌ಗಳಿಗೆ ಸೂಚನೆಯನ್ನು ಕಳುಹಿಸಿದ ನಂತರ ಏರ್ ಇಂಡಿಯಾ ವಿಮಾನವು ದೆಹಲಿಗೆ ಹಿಂತಿರುಗಲು ನಿರ್ಧರಿಸಿತು.
ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಇಂದು ಬೆಳಿಗ್ಗೆ ರಷ್ಯಾದ ವಿಶೇಷ ಪಡೆಗಳಿಗೆ ಉಕ್ರೇನ್‌ನಲ್ಲಿ ಎರಡು ಪ್ರತ್ಯೇಕತಾವಾದಿ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸಲು ಅವಕಾಶ ಮಾಡಿಕೊಟ್ಟಿದ್ದಾರೆ, ಈ ಎರಡು ಪ್ರದೇಶಗಳನ್ನು ರಷ್ಯಾ ಸೋಮವಾರ ಸ್ವತಂತ್ರ ರಾಷ್ಟ್ರಗಳೆಂದು ಗುರುತಿಸಿದೆ.








