Wednesday, May 31, 2023
  • Home
  • About Us
  • Contact Us
  • Privacy Policy
Cini Bazaar
Sports
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ರಾಜ್ಯ, ದೇಶ-ವಿದೇಶ, ಸಿನಿಮಾ-ಕ್ರೀಡೆ : ಓದಿ ಇಂದಿನ ಟಾಪ್ 10 ಸುದ್ದಿ

Naveen Kumar B C by Naveen Kumar B C
January 27, 2022
in Newsbeat, State, ರಾಜ್ಯ
Share on FacebookShare on TwitterShare on WhatsappShare on Telegram

ಏರ್ ಇಂಡಿಯಾ ಟಾಟಾ ಗೆ ಹಸ್ತಾಂತರ – ಓದಿ ಈ ದಿನದ ಟಾಪ್ 10 ಸುದ್ದಿಗಳು….

01ಭಾರತದಲ್ಲಿ ಕೊರೊನಾ ಸೋಂಕಿನ ಮೂರನೇ ಅಲೆಯ ಏರಿಳಿತ ಮುಂದುವರೆದಿದೆ.

Related posts

ಪ್ರಧಾನಿ ಹತ್ಯೆಗೆ ಸಂಚು; 16 ಕಡೆ ದಾಳಿ

ಪ್ರಧಾನಿ ಹತ್ಯೆಗೆ ಸಂಚು; 16 ಕಡೆ ದಾಳಿ

May 31, 2023
ಶೆಟ್ಟರ್, ಸವದಿಗೆ ಉನ್ನತ ಸ್ಥಾನಮಾನ ನೀಡುತ್ತೇವೆ- ಡಿಸಿಎಂ

ಶೆಟ್ಟರ್, ಸವದಿಗೆ ಉನ್ನತ ಸ್ಥಾನಮಾನ ನೀಡುತ್ತೇವೆ- ಡಿಸಿಎಂ

May 30, 2023

ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 2 ಲಕ್ಷದ 80 ಸಾವಿರಕ್ಕೂ ಹೆಚ್ಚು ಕೊರೊನಾ ಕೇಸ್ ಗಳು ಪತ್ತೆಯಾಗಿವೆ. ಕಳೆದ 24 ಗಂಟೆಗಳಲ್ಲಿ 2,86,384 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ, ಇದೇ ಅವಧಿಯಲ್ಲಿ 573 ಮಂದಿ ಹೆಮ್ಮಾರಿ ಸೋಂಕಿಗೆ ಬಲಿಯಾಗಿದ್ದಾರೆ.

02 ಕಾಂಗ್ರೆಸ್ ಹಿರಿಯ ಎಂಎಲ್ ಸಿ ಸಿಎಂ ಇಬ್ರಾಹಿಂ ಅವರು ಶೀಘ್ರದಲ್ಲಿಯೇ  ಕಾಂಗ್ರೆಸ್ ಗೆ ಗುಡ್ ಬೈ ಹೇಳಲಿದ್ದಾರೆ.  ಬಿ.ಕೆ.ಹರಿ ಪ್ರಸಾದ್ ಅವರನ್ನು ವಿಧಾನ ಪರಿಷತ್ ವಿಪಕ್ಷ ನಾಯಕರಾಗಿ ನೇಮಕ ಮಾಡಿದ ಬೆನ್ನಲ್ಲೆ ಸಿ.ಎಂ ಇಬ್ರಾಹಿಂ ಪಕ್ಷ ತೊರೆಯಲು ನಿರ್ಧರಿಸಿದ್ದಾರೆ.  ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು,ವಿಧಾನ ಪರಿಷತ್ ಸ್ಥಾನಕ್ಕೆ ಶೀಘ್ರದಲ್ಲೇ ರಾಜೀನಾಮೆ ನೀಡುತ್ತೇನೆ.

03ಮುಂದಿನ ಪಂಚ ರಾಜ್ಯಗಳ ಚುನಾವಣೆಯ ಬಳಿಕ ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ಪಕ್ಷ ಅಪ್ರಸ್ತುತ ಆಗಲಿದೆ ಎಂದು ಪಂಚ ರಾಜ್ಯ ಚುನಾವಣೆಗಳ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭವಿಷ್ಯ ನುಡಿದಿದ್ದಾರೆ.  ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಸ್ತಿತ್ವವೇ ಇಲ್ಲ. ಪಂಜಾಬ್ನ್ಲ್ಲಿ ಅಧಿಕಾರ ಕಳೆದುಕೊಳ್ಳಲಿದ್ದಾರೆ. ಗೋವಾದಲ್ಲಿ ಅಧಿಕಾರಕ್ಕೆ ಬರುವ ಪರಿಸ್ಥಿತಿಯೇ ಇಲ್ಲ. ಮುಂದಿನ ಚುನಾವಣೆಯ ಬಳಿಕ ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ಪಕ್ಷ ಅಪ್ರಸ್ತುತ ಆಗಲಿದೆ ಎಂದಿದ್ದಾರೆ.

04ಶಾಲಾ ವಿದ್ಯಾರ್ಥಿಗಳಿಗೆ ಹಾಜರಾತಿ ಕಡ್ಡಾಯವಲ್ಲ,  ಯಾವ ಮಕ್ಕಳಿಗೂ ಶಾಲೆಗೆ ಬರಲು ಬಲವಂತ ಇಲ್ಲ ಎಂದು ಸಚಿವ ಬಿ.ಸಿ. ನಾಗೇಶ್ ತಿಳಿಸಿದ್ದಾರೆ. ಕೊಡಗಿನಲ್ಲಿ ಮಾತನಾಡಿದ ಅವರು, ಈ ವರ್ಷ ಮಕ್ಕಳಿಗೆ ಹಾಜರಾತಿ ಕಡ್ಡಾಯ ಇಲ್ಲ. ಯಾವ ಮಕ್ಕಳಿಗೂ ಶಾಲೆಗೆ ಬರಲು ಬಲವಂತ ಇಲ್ಲ. ಪರೀಕ್ಷೆಗೂ 75% ಹಾಜರಾತಿ ಕಡ್ಡಾಯ ಮಾಡುವುದಿಲ್ಲ ಎಂದು ತಿಳಿಸಿದರು.

05ರಾಜ್ಯದಲ್ಲಿ ಮತ್ತೆ ಕೇಸರಿ ಶಾಲು ವರ್ಸಸ್ ಹಿಜಾಬ್ ಫೈಟ್ ಶುರುವಾಗಿದ್ದು,  ಮಂಗಳೂರು, ಉಡುಪಿ ಮೂಲದ ಕೆಲವು ಶಾಲೆಗಳ ವಿದ್ಯಾರ್ಥಿಗಳು ಈ ಬಗ್ಗೆ ಪ್ರೊಟೆಸ್ಟ್ ನಡೆಸುತ್ತಿದ್ದಾರೆ. ಈ ಮಧ್ಯೆ ಹಿಜಬ್ ನಮ್ಮ ಸಂವಿಧಾನಾತ್ಮಕ ಹಕ್ಕು. ನಾವು ಹಿಜಬ್ ಹಾಕಿ ಕಾಲೇಜಿಗೆ ಹೋಗುತ್ತೇವೆ. ನಮಗೆ ಯಾವುದೇ ಆನ್ಲೈನ್ ಕ್ಲಾಸ್ ಗಳು ಬೇಡ ಎಂದು ಉಡುಪಿ ಸರ್ಕಾರಿ ಮಹಿಳಾ ಪದವಿಪೂರ್ವ ಕಾಲೇಜಿನ ಮುಸ್ಲಿಂ ವಿದ್ಯಾರ್ಥಿನಿಯರು ಹೇಳಿದ್ದಾರೆ.

06 Good News – ಕೋವಿಡ್ ಲಸಿಕೆ ಇನ್ನು ಮುಂದೆ ಆಸ್ಪತ್ರೆ ಕ್ಲೀನಿಕ್ ಗಳಲ್ಲಿ ಲಭ್ಯ

Covaxin ಮತ್ತು Covishield ಈಗ ಸಾಮಾನ್ಯ ಮಾರುಕಟ್ಟೆಯಲ್ಲಿ ಲಭ್ಯವಿರಲಿದೆ. ಭಾರತದ ಡ್ರಗ್ ಕಂಟ್ರೋಲರ್ ಜನರಲ್ ಅವರು ಗುರುವಾರ ಈ ಎರಡು ಕೋವಿಡ್ ಲಸಿಕೆಗಳಿಗೆ ಷರತ್ತುಬದ್ಧ ಮಾರುಕಟ್ಟೆ ಅನುಮೋದನೆ ನೀಡಿದ್ದಾರೆ.

ಕೆಲವು ಷರತ್ತುಗಳಿಗೆ ಒಳಪಟ್ಟು ವಯಸ್ಕ ಜನಸಂಖ್ಯೆಗೆ ಈ ಕೋವಿಡ್-19 ಲಸಿಕೆಗಳಿಗೆ ನಿಯಮಿತ ಮಾರುಕಟ್ಟೆ ಅನುಮೋದನೆಯನ್ನು ನೀಡುವಂತೆ ಕೇಂದ್ರೀಯ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆಯ ವಿಷಯ ತಜ್ಞರ ಸಮಿತಿಯು ಈ ಹಿಂದೆ ಶಿಫಾರಸು ಮಾಡಿತ್ತು.

07 ಏರ್ ಇಂಡಿಯಾದ ಹಸ್ತಾಂತರಕ್ಕೂ ಮುನ್ನ ಪ್ರಧಾನಿ ಭೇಟಿ ಮಾಡಿದ ಟಾಟಾ ಸನ್ಸ್ ಅಧ್ಯಕ್ಷರು

ಟಾಟಾ ಗ್ರೂಪ್‌ಗೆ ಏರ್ ಇಂಡಿಯಾವನ್ನು ಅಧಿಕೃತ ಹಸ್ತಾಂತರಿಸುವ ಮೊದಲು ಟಾಟಾ ಸನ್ಸ್ ಅಧ್ಯಕ್ಷ ಎನ್ ಚಂದ್ರಶೇಖರನ್ ಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು. ಪ್ರಧಾನಿ ಮೋದಿ ಮತ್ತು ಟಾಟಾ ಅಧ್ಯಕ್ಷರ ಭೇಟಿಯ ಫೋಟೋವನ್ನು ಪ್ರಧಾನಿ ಕಾರ್ಯಾಲಯ ಬಿಡುಗಡೆ ಮಾಡಿದೆ.

08 ಜಾರ್ಖಾಂಡ್ ನಲ್ಲಿ ರೈಲು ಹಳಿ ಸ್ಪೋಟಿಸಿದ ನಕ್ಸಲರು – ಸಂಚಾರ ಸ್ಥಗಿತ.

ಜಾರ್ಖಂಡ್-ಬಿಹಾರ ಬಂದ್ ವೇಳೆ ನಕ್ಸಲರು ರೈಲ್ವೆ ಹಳಿಗಳನ್ನ ಗುರಿಯಾಗಿಸಿಕೊಂಡು  ಹಳಿ ಸ್ಪೋಟಿಸಿದ್ದಾರೆ. ಚಿಚಾಕಿ ಮತ್ತು ಕರ್ಮಬಂಧ್ ರೈಲು ನಿಲ್ದಾಣಗಳ ನಡುವೆ ನಕ್ಸಲರು ರೈಲು ಹಳಿಗಳನ್ನು ಸ್ಫೋಟಿಸಿದ್ದಾರೆ.

ರೈಲು ಹಳಿಗಳ ಸ್ಪೋಟದಿಂದಾಗಿ  ಹೌರಾ ಮತ್ತು ನವದೆಹಲಿ ರೈಲು ಮಾರ್ಗದ  ಸಂಚಾರ  ಸ್ಥಗಿತಗೊಂಡಿದೆ. ರೈಲ್ವೇ ಹಳಿ ತಪ್ಪಿದ ಬಗ್ಗೆ ಮಾಹಿತಿ ಬಂದ ತಕ್ಷಣ ಪೂರ್ವ ಕೇಂದ್ರ ರೈಲ್ವೇಯ ಧನಬಾದ್ ರೈಲ್ವೆ ವಿಭಾಗೀಯ ನಿಯಂತ್ರಣ ಕಚೇರಿಯಲ್ಲಿ ಆತಂಕ ಸೃಷ್ಟಿಯಾಗಿತ್ತು. ತಕ್ಷಣವೇ ರೈಲು ಸಂಚಾರವನ್ನು ನಿಲ್ಲಿಸಲಾಯಿತು.

09 ಸ್ಯಾಂಡಲ್ ವುಡ್ ನ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ನಾಯಕರಾಗಿ ನಟಿಸುತ್ತಿರುವ ಮಾಫಿಯಾ ಸಿನಿಮಾದ ಫಸ್ಟ್ ಗ್ಲಿಂಪ್ಸ್ ಬಿಡುಗಡೆಯಾಗಿದೆ. ಇದರಲ್ಲಿ ಸುತ್ತಿಗೆ ಹಿಡಿದು ಬರುವ ಪ್ರಜ್ವಲ್ ದೇವರಾಜ್, ಒನ್ಸ್ ಅಪಾನ್  ಎ ಟೈಂ, ದ ಡೆವಿಲ್, ಸ್ಟುಡ್ ಅಗೆನೆಸ್ಟ್ ಟು ದಿ ಗಾಡ್..! ಎಂದು ತೀಷ್ಣವಾಗಿ ಡೈಲಾಗ್ ಹೊಡೆಯುತ್ತಾರೆ.  ಇದು ನೋಡುಗರಿಗೆ ಸಖತ್ ಕಿಕ್ ಕೊಡುತ್ತಿದೆ. ಈ ಸಿನಿಮಾವನ್ನು ಬೆಂಗಳೂರು ಕುಮಾರ್ ಫಿಲಂಸ್ ಲಾಂಛನದಲ್ಲಿ ಕುಮಾರ್ ಬಿ ನಿರ್ಮಿಸುತ್ತಿದ್ದಾರೆ. ಚಿತ್ರಕ್ಕೆ ಲೋಹಿತ್ ನಿರ್ದೇಶನ ಇವೆ. ಕನ್ನಡ, ತೆಲುಗು ಹಾಗೂ ತಮಿಳು ಭಾಷೆಗಳಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದೆ‌.

10 ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮೌನಿ..!!!

ಬಾಲಿವುಡ್ ನಟಿ  ಮೌನಿ ರಾಯ್ ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.. ಕೇರಳ ಸ್ಟೈಲ್ ಅಂದ್ರೆ ಸೌತ್ ಇಂಡಿಯನ್ ಸ್ಟೈಲ್ ನಲ್ಲಿ ಸಾಂಪ್ರದಾಯಿಕ  ರೀತಿಯಲ್ಲಿ ಮದುವೆಯಾಗಿದ್ದಾರೆ.. ದುಬೈ ಮೂಲದ ಉದ್ಯಮಿ ಸೂರಜ್ ನಂಬೂರಿ ಅವರ ಜೊತೆಗೆ  ವೈ]ವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

Tags: #saakshakarnatakatop10trending news
ShareTweetSendShare
Join us on:

Related Posts

ಪ್ರಧಾನಿ ಹತ್ಯೆಗೆ ಸಂಚು; 16 ಕಡೆ ದಾಳಿ

ಪ್ರಧಾನಿ ಹತ್ಯೆಗೆ ಸಂಚು; 16 ಕಡೆ ದಾಳಿ

by Honnappa Lakkammanavar
May 31, 2023
0

ಮಂಗಳೂರು: ಬಿಹಾರದಲ್ಲಿ (Bihar) ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ದಾಳಿಗೆ ಸಂಚು ರೂಪಿಸಿದ ಪ್ರಕರಣ ಬೆಳಕಿಗೆ ಬಂದಿದ್ದು, ಈ ಹಿನ್ನೆಲೆಯಲ್ಲಿ ಎನ್‌ ಐಎ (NIA)...

ಶೆಟ್ಟರ್, ಸವದಿಗೆ ಉನ್ನತ ಸ್ಥಾನಮಾನ ನೀಡುತ್ತೇವೆ- ಡಿಸಿಎಂ

ಶೆಟ್ಟರ್, ಸವದಿಗೆ ಉನ್ನತ ಸ್ಥಾನಮಾನ ನೀಡುತ್ತೇವೆ- ಡಿಸಿಎಂ

by Honnappa Lakkammanavar
May 30, 2023
0

ಬೆಂಗಳೂರು : ಚುನಾವಣೆ ಸಂದರ್ಭದಲ್ಲಿ ಪಕ್ಷ ಬಿಟ್ಟು ಕಾಂಗ್ರೆಸ್ ಸೇರಿರಿವು ಮಾಜಿ ಸಿಎಂ ಜಗದೀಶ ಶೆಟ್ಟರ್ (Jagadish Shettar) ಹಾಗೂ ಲಕ್ಷ್ಮಣ ಸವದಿ (Laxman Savadi) ಅವರಿಗೆ...

ಬೆಳಗಾವಿ ಜಿಲ್ಲೆಯಲ್ಲಿ ಭರ್ಜರಿ ಮಳೆ; ಜನ-ಜೀವನ ಅಸ್ತವ್ಯಸ್ಥ

ಬೆಳಗಾವಿ ಜಿಲ್ಲೆಯಲ್ಲಿ ಭರ್ಜರಿ ಮಳೆ; ಜನ-ಜೀವನ ಅಸ್ತವ್ಯಸ್ಥ

by Honnappa Lakkammanavar
May 30, 2023
0

ಬೆಳಗಾವಿ : ರಾಜ್ಯದ ಹಲವು ಜಿಲ್ಲೆಗಳಲ್ಲಿ ಈಗಾಗಲೇ ಅಕಾಲಿಕ ಮಳೆ ಸುರಿಯುತ್ತಿದ್ದು, ಹಲವೆಡೆ ಜನ – ಜೀವನ ಅಸ್ತವ್ಯಸ್ಥವಾಗಿದೆ. ಇಂದು ಬೆಳಗಾವಿ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗಿದ್ದು, ಅಲ್ಲಲ್ಲಿ...

ಮನೆಯಲ್ಲಿನ ಯಾರಿಗೆ ನೀಡಬೇಕು 2 ಸಾವಿರ; ಇಲ್ಲಿದೆ ನೋಡಿ ಮಾಹಿತಿ!

ಮನೆಯಲ್ಲಿನ ಯಾರಿಗೆ ನೀಡಬೇಕು 2 ಸಾವಿರ; ಇಲ್ಲಿದೆ ನೋಡಿ ಮಾಹಿತಿ!

by Honnappa Lakkammanavar
May 30, 2023
0

ಬೆಳಗಾವಿ: ಕಾಂಗ್ರೆಸ್ ಚುನಾವಣೆ ಪೂರ್ವದಲ್ಲಿ ಗೃಹಲಕ್ಷ್ಮಿ ಯೋಜನೆ (Gruhalakshmi Scheme) ಜಾರಿಗೊಳಿಸಿತ್ತು. ಸದ್ಯ ಇದೇ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಈ ಯೋಜನೆ ಜಾರಿಗೆ ಮುಂದಾಗಿದೆ. ಆದರೆ, ಮನೆಗೊಬ್ಬರಿಗೆ...

October 2022: ಅಕ್ಟೋಬರ್ 1 ರಿಂದ ಬದಲಾಗಲಿವೆ ಈ ನಿಯಮಗಳು…

ಸರ್ಕಾರಿ ನೌಕರರ ತುಟ್ಟಿ ಭತ್ಯೆ ಹೆಚ್ಚಳ

by Honnappa Lakkammanavar
May 30, 2023
0

ಬೆಂಗಳೂರು: ರಾಜ್ಯ ಸರ್ಕಾರವು(Karnataka Government) ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ ನೀಡಿದೆ. ರಾಜ್ಯ ಸರ್ಕಾರವು ತುಟ್ಟಿ ಭತ್ಯೆಯನ್ನು (Dearness Allowance) ಶೇ. 4ರಷ್ಟು ಹೆಚ್ಚಿಸಿ ಆದೇಶ ಹೊರಡಿಸಿದೆ....

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಮಹಾ ಸುದರ್ಶನ ಹೋಮಂ ಎಂದರೇನು..?? ಮತ್ತು ಅದರಿಂದಾಗುವ ಪ್ರಯೋಜನವೇನು…!!

    0 shares
    Share 0 Tweet 0
  • Samsung Galaxy F04 : ಆಕರ್ಷಕ ಫೀಚರ್ಸ್ , ರಿಯಾಯಿತಿ ದರದಲ್ಲಿ ಮಾರಾಟಕ್ಕೆ ಲಭ್ಯ

    0 shares
    Share 0 Tweet 0

Quick Links

  • Home
  • About Us
  • Contact Us
  • Privacy Policy

Categories

  • Newsbeat
  • Samagra karnataka
  • National
  • Astrology
  • Politics
  • Cinema
  • Business

Categories

  • Crime
  • Culture
  • Health
  • International
  • Politics
  • TECHNOLOGY
  • Viral News

Recent News

ಸದಾ ಜಗಳವಾಡುವ ಮತ್ತು ಕಿರಿಕಿರಿ ಮಾಡುವ ನಿಮ್ಮ ಜೀವನ ಸಂಗಾತಿಯನ್ನು ಸುಧಾರಿಸಲು ನಿಮ್ಮ ಕೈಯಲ್ಲಿ ಏಳು ಲವಂಗ ಇದ್ದರೆ ಸಾಕು!

ಸದಾ ಜಗಳವಾಡುವ ಮತ್ತು ಕಿರಿಕಿರಿ ಮಾಡುವ ನಿಮ್ಮ ಜೀವನ ಸಂಗಾತಿಯನ್ನು ಸುಧಾರಿಸಲು ನಿಮ್ಮ ಕೈಯಲ್ಲಿ ಏಳು ಲವಂಗ ಇದ್ದರೆ ಸಾಕು!

May 31, 2023
ಪ್ರಧಾನಿ ಹತ್ಯೆಗೆ ಸಂಚು; 16 ಕಡೆ ದಾಳಿ

ಪ್ರಧಾನಿ ಹತ್ಯೆಗೆ ಸಂಚು; 16 ಕಡೆ ದಾಳಿ

May 31, 2023
  • Home
  • About Us
  • Contact Us
  • Privacy Policy

© 2022 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2022 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram