ಗಾಜಾದ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್(Israel) ನಡೆಸಿದ ವೈಮಾನಿಕ ದಾಳಿಯಲ್ಲಿ 35 ಜನ ಬಲಿಯಾಗಿರುವ ಕುರಿತು ತಿಳಿದ ಬಂದಿದೆ.
ವೈಮಾನಿಕ ದಾಳಿಯಲ್ಲಿ ಮಕ್ಕಳು ಸೇರಿದಂತೆ 35 ಜನ ಸಾವನ್ನಪ್ಪಿದ್ದಾರೆ ಎಂದು ಪ್ಯಾಲೆಸ್ತೀನಿಯನ್ ಆರೋಗ್ಯ ಸಚಿವಾಲಯ ಹೇಳಿದೆ. ಹಮಾಸ್ ರಾಕೆಟ್ ದಾಳಿಯ ನಂತರ, ಇಸ್ರೇಲ್ ರಾಫಾ ಮೇಲೆ ದೊಡ್ಡ ವೈಮಾನಿಕ ದಾಳಿ ನಡೆಸಿದೆ. ಇಸ್ರೇಲಿ ವಾಯುಪಡೆಯು ದೊಡ್ಡ ಭಯೋತ್ಪಾದಕರು ಇರುವ ಭಯೋತ್ಪಾದಕ ಸಂಘಟನೆ ಹಮಾಸ್ ನ ರಫಾ ಸಂಕೀರ್ಣ ಗುರಿಯಾಗಿಸಿಕೊಂಡು ಈ ದಾಳಿ ನಡೆಸಿದೆ ಎನ್ನಲಾಗಿದೆ.
ವೆಸ್ಟ್ ಬ್ಯಾಂಕ್ ಪ್ರಧಾನ ಕಚೇರಿಯ ಮುಖ್ಯಸ್ಥ ಯಾಸಿನ್ ರಬಿಯಾ ಮತ್ತು ಇನ್ನೊಬ್ಬ ಭಯೋತ್ಪಾದಕ ಕಮಾಂಡರ್ ಖಾಲಿದ್ ನಜ್ಜಾರ್ ಘಟನೆಯಲ್ಲಿ ಹತರಾಗಿದ್ದಾರೆ ಎನ್ನಲಾಗಿದೆ. ಇಸ್ರೇಲ್ ವೈಮಾನಿಕ ದಾಳಿಯ ನಂತರ ತನ್ನ ಕಮಾಂಡರ್‌ಗಳ ಸಾವಿನಿಂದ ಹಮಾಸ್ ಆಘಾತಕ್ಕೊಳಗಾಗಿದೆ.