ಸಾಮಾಜಿಕ ಜಾಲತಾಣದಲ್ಲಿ ಐಶ್ವರ್ಯಾ ರೈ ತದ್ರೂಪಿಯದ್ದೇ ಸುದ್ದಿ..! “ ಸಲ್ಮಾನ್ ಖಾನ್ ಮುಂದೆ ಹೋಗ್ಬೇಡ” ಎಂದ ನೆಟ್ಟಿಗರು..!
ಸೌತ್ ಸಿನಿಮಾ ರಂಗದ ನಟಿ ಸ್ನೇಹ ಉಲ್ಲಾಳ್ ಥೇಟ್ ಐಶ್ವರ್ಯ ರೈ ಅವರಂತೆಯೇ ಇದ್ದು, ಬಾಲಿವುಡ್ ಗೂ ಪ್ರವೇಶ ಮಾಡಿರುವ ವಿಚಾರ ಗೊತ್ತಿರುವುದೇ.. ಆದ್ರೀಗ ನಾನ್ ಸೆಲೆಬ್ರಿಟಿಯೊಬ್ರು ನೋಡುವುದಕ್ಕೇ ಐಶ್ವರ್ಯ ರೈನಂತೆಯೇ ಇದ್ದು, ಸೋಷಿಯಲ್ ಮೀಡಿಯದಲ್ಲೇ ಅವರದ್ದೇ ಚರ್ಚೆಯಾಗೋಗಿದೆ..
https://www.instagram.com/reel/CRrHnlkA_FB/?
ಅಂದ್ಹಾಗೆ ಸಾಮಾನ್ಯ ಜನರು ಅನೇಕರು ಸೆಲೆಬ್ರಿಟಿಗಳ ರೀತಿಯೇ ಇದ್ದು, ಅನೇಕರು ಇದೇ ವಿಚಾರಗಳಿಗೆ ಫೇಮಸ್ ಆಗಿರೋದು ಉಂಟು.. ಇದೀಗ ಮಧ್ಯಪ್ರದೇಶದ ಒಂದೋರ್ ನ ಯುವತಿ ಆಶಿತಾ ರಾಥೋರ್ ನೋಡುವುದಕ್ಕೆ ಥೇಟ್ ಐಶ್ವರ್ಯ ರೈ ರೀತಿಯೇ ಇರೋದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಫುಲ್ ಟ್ರೆಂಡ್ ಆಗ್ತಿದ್ದಾರೆ..
https://www.instagram.com/reel/CR9JAkWgyFh/?
ಮಾಜಿ ವಿಶ್ವಸುಂದರಿ ಬಾಲಿವುಡ್ ನ ಸ್ಟಾರ್ ನಟಿ ಐಶ್ವರ್ಯಾ ಹಾಗೂ ಆಶಿತಾ ನಡುವೆ ಸಾಕುಷ್ಟು ಹೋಲಿಕೆಗಳಿವೆ.. ನೆಟ್ಟಿಗರು ನಾನಾ ಕಮೆಂಟ್ ಗಳನ್ನ ಮಾಡ್ತಾಯಿದ್ದಾಋಎ.. ಸೋಷಿಯಲ್ ಮೀಡಿಯಾದಲ್ಲಿ ಆಶಿತಾ ಹಾಗೂ ಐಶ್ವರ್ಯಾ ಹೋಲಿಕೆ ಮಾಡಿ ವಿಡಿಯೋಗಳು , ಫೋಟೋಗಳು ಹರಿದಾಡ್ತಿವೆ.. ಈ ನಡುವೆ ಆಶಿತಾ ಬಗ್ಗೆ ಕಮೆಂಟ್ ಮಾಡಿರೋ ನೆಟ್ಟಿಗರೊಬ್ರು ಟಿಕ್ ಟಾಕ್ ಭಾರತದಲ್ಲಿ ಬ್ಯಾನ್ ಆಗಿರದೇ ಇದ್ರೆ ಈಕೆ ಐಶ್ವರ್ಯ ರೈ ರನ್ನೂ ಮೀರಿಸುತ್ತಿದ್ರು ಎಂದಿದ್ದಾರೆ.. 
https://www.instagram.com/reel/CR9JAkWgyFh/?utm_source=ig_web_copy_link
ಮತ್ತೊಬ್ಬರು ಸಲ್ಮಾನ್ ಖಾನ್ ಎದುರು ಹೋಗ್ಬೇಡಿ ಅಂತ ತಮಾಶೆ ಮಾಡಿದ್ದಾರೆ. ಇನ್ನೂ ಹಲವರು ಸಿನಿಮಾಗಳಲ್ಲಿ ಟ್ರೈ ಮಾಡಿ ಅಂತ ಹೀಗೆ ಹಲವರು ಕಮೆಂಟ್ ಗಳನ್ನ ಮಾಡ್ತಿದ್ದಾರೆ..
ಸಲ್ಮಾನ್ ಖಾನ್ ಅವರು ಸೌತ್ ಸಿನಿಮಾ ಇಂಡಸ್ಟ್ರಿಯ ಸ್ನೇಹಾ ಉಲ್ಲಾಳ್ ಅವರನ್ನ ಬಾಲಿವುಡ್ ಗೆ ಪರಿಚಯ ಮಾಡಿದ್ರು.. ಹೀಗಾಗಿ ‘ಸಲ್ಮಾನ್ ಖಾನ್ ಕೆ ಸಾಮ್ನೆ ಮತ್ ಜಾವ್ ‘ ಅಂದ್ರೆ ಅವರ ಮುಂದೆ ಹೋಗ್ಬೇಡಿ ನಿಮ್ಮನ್ನೂ ಬಾಲಿವುಡ್ ಸಿನಿಮಾರಂಗಕ್ಕೆ ಇಂಟ್ರಡ್ಯೂಸ್ ಮಾಡ್ತಾರೆ ಅನ್ನೋ ಫನ್ನಿ ಅರ್ಥದಲ್ಲಿ ನೆಟ್ಟಿಗರು ಕಮೆಂಟ್ ಗಳನ್ನ ಮಾಡ್ತಾಯಿದ್ದಾರೆ.
https://www.instagram.com/reel/CR9JAkWgyFh/?
https://www.instagram.com/aashitarathore/?
ಅಶ್ಲೀಲ ವಿಡಿಯೋ ಪ್ರಕರಣ : ಬೆತ್ತಲಾಗಿ ಲೈವ್ ಗೆ ಬಂದು ಸವಾಲೆಸೆದ ಗೆಹನಾ








