Ajit Pawar | ಮಹಾರಾಷ್ಟ್ರದಲ್ಲಿ ಮಧ್ಯಂತರ ಚುನಾವಣೆ
ಮುಂಬೈ : ಮಹಾರಾಷ್ಟ್ರದ ಮಾಜಿ ಸಿಎಂ ಮತ್ತು ಎನ್ ಸಿಪಿ ಹಿರಿಯ ನೇತಾರ ಅಜಿತ್ ಪವಾರ್ ಅವರನ್ನು ಮಹಾರಾಷ್ಟ್ರ ವಿಧಾನಸಭೆಯ ವಿಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ.
ಏಕನಾಥ್ ಶಿಂಧೆ ನೇತೃತ್ವದ ಮಹಾರಾಷ್ಟ್ರ ಸರ್ಕಾರ ಸೋಮವಾರ ತನ್ನ ಬಹುಮತವನ್ನು ಸಾಬೀತುಪಡಿಸಿದ್ದರೂ ಸಹ, ಮಹಾರಾಷ್ಟ್ರದಲ್ಲಿ ಶೀಘ್ರದಲ್ಲೇ ಮಧ್ಯಂತರ ಚುನಾವಣೆ ನಡೆಯಲಿದೆ ಎಂದು ಶಿವಸೇನೆ ಭವಿಷ್ಯ ನುಡಿದಿದೆ.
ಮಂಗಳವಾರ ಸೇನಾ ಮುಖವಾಣಿ ಸಾಮ್ನಾದಲ್ಲಿ ಸಂಪಾದಕೀಯ ಬರೆದಿರುವ ಕಾರ್ಯನಿರ್ವಾಹಕ ಸಂಪಾದಕ ಸಂಜಯ್ ರಾವುತ್, ಭಾರತೀಯ ಜನತಾ ಪಕ್ಷ (ಬಿಜೆಪಿ) ತನ್ನ ಅಧಿಕಾರಕ್ಕಾಗಿ ಮೊದಲು ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸುತ್ತದೆ ಎಂದು ಪ್ರತಿಪಾದಿಸಿದ್ದಾರೆ.
ಅಲ್ಲದೇ ಬಂಡಾಯಗಾರರಿಗೆ ರಾಜಕೀಯ ಭವಿಷ್ಯವಿಲ್ಲ ಎಂದು ಪ್ರತಿಪಾದಿಸಿದ ಸಂಜಯ್, ಬಿಜೆಪಿಯು 106 ಮಂದಿ ಶಾಸಕರನ್ನು ಹೊಂದಿದ್ದರೂ ಸಿಎಂ ಸ್ಥಾನ ಬಿಟ್ಟುಕೊಟ್ಟಿರುವ ಹಿಂದೆ ಬೇರೆಯದ್ದೆ ಉದ್ದೇಶ ಹೊಂದಿದೆ ಎಂದು ವಾದಿಸಿದ್ದಾರೆ.

ಶಿವಸೇನೆ ಕೊನೆಗಾಣುತ್ತಿರುವ ಹಿನ್ನೆಲೆಯಲ್ಲಿ ನಾವು ಬಂಡಾಯ ಎದ್ದಿದ್ದೇವೆ ಅಂತಾ ಬಂಡಾಯ ಶಾಸಕರು ವಾದಿಸುತ್ತಿದ್ದಾರೆ.
ಆದ್ರೆ ಶಿವಸೇನೆ ಎಂದಿಗೂ ಕೊನೆಯಾಗುವುದಿಲ್ಲ. ಶಿಂಧೆ ಬಂಡಾಯವು ದೇಶದ ಸ್ವಾತಂತ್ರ್ಯಕ್ಕಾಗಿ ಎದ್ದಿರುವ ಬಂಡಾಯವಲ್ಲ.
ಈಗ ಬಹುಮತ ಪಡೆದಿದ್ದರೂ ಆರು ತಿಂಗಳ ಕಾಲ ಮಾತ್ರ ಅಧಿಕಾರ ಆನಂದಿಸಿ ಎಂದು ಬರೆದುಕೊಂಡಿದ್ದಾರೆ.
ನಿನ್ನೆ ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್, ಏಕನಾಥ್ ಶಿಂದೆ ಸರಕಾರ ಮುಂದಿನ ಆರು ತಿಂಗಳಲ್ಲೇ ಬೀಳಲಿದೆ.
ಮಧ್ಯಂತರ ಚುನಾವಣೆಗೆ ಸಿದ್ಧರಾಗಿ ಎಂದು ಕರೆಕೊಟ್ಟಿದ್ದರು.